ಕಲಬುರಗಿ : ನಂದಿನಿ ಹಾಲಿನ ದರ ಏರಿಕೆ ( Nandini milk price hiked ) ಬಗ್ಗೆ ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ತಿಳಿಸಿದರು.
BIG NEWS : ರಾಜ್ಯದಲ್ಲಿ ಹೊಸದಾಗಿ 4,000 ಅಂಗನವಾಡಿ ನಿರ್ಮಾಣ : ಸಿಎಂ ಬಸವರಾಜ ಬೊಮ್ಮಾಯಿ
ಸೇಡಂನಲ್ಲಿ ಹಾಲಿನ ದರ ಪರಿಷ್ಕರಣೆ ( Milk price revision ) ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯಿಸುತ್ತಾ, ಕಳೆದ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
KFMನಿಂದ ನಂದಿನಿ ಹಾಲು, ಮೊಸರಿನ ದರ 3 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ
ಬೆಂಗಳೂರು: ಚರ್ಮ ಗಂಟು ರೋಗ, ಅತಿವೃಷ್ಟಿ ಸೇರಿದಂತೆ ಇತರೆ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವಂತ ರೈತರಿಗೆ ನೆರವಾಗುವ ನಿಟ್ಟಿನಲ್ಲಿ, ಹಾಲು, ಮೊಸರಿನ ದರವನ್ನು ( Nandini Milk, Curd Price Hike ) ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡಲಾಗಿತ್ತು.
ಈ ಕುರಿತಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (Karnataka Co-operative Milk Producers Federation- KMF ) ಮಾಹಿತಿ ಬಿಡುಗಡೆ ಮಾಡಿದ್ದು, ನಂದಿನಯ ಎಲ್ಲಾ ಮಾದರಿಯ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.
ಹೀಗಿದೆ ನಂದಿನ ಹಾಲು, ಮೊಸರಿನ ಪರಿಷ್ಕೃತ ನೂತನ ದರಪಟ್ಟಿ
- ಪ್ರಸ್ತುತ ಟೋಲ್ ಹಾಲಿನ ದರ ರೂ.37 ಇತ್ತು. ಇದೀಗ ಮೂರು ರೂ ಹೆಚ್ಚಳದ ನಂತ್ರ ರೂ.40ಕ್ಕೆ ತಲುಪಿದೆ.
- ಹೋಮೋಜಿನೈಸ್ಡ್ ಟೋನ್ಡ್ ಹಾಲು ರೂ.38ರಿಂದ ರೂ.41ಕ್ಕೆ ಹೆಚ್ಚಳ
- ಹೋಮೋಜಿನೈಸ್ಡ್ ಹಸುವಿನ ಹಾಲು ರೂ.42 ರಿಂದ 45ಕ್ಕೆ ಹೆಚ್ಚಳ
- ಸ್ಪೆಷಲ್ ಹಾಲು ರೂ.43 ರಿಂದ 46ಕ್ಕೆ ಹೆಚ್ಚಳ
- ಶುಭಂ ಹಾಲು ರೂ.43 ರಿಂದ 46ಕ್ಕೆ ಏರಿಕೆ
- ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು ರೂ.44 ರಿಂದ 47ಕ್ಕೆ ಹೆಚ್ಚಳ
- ಸಮೃದ್ಧಿ ಹಾಲು ರೂ.48 ರಿಂದ 51ಕ್ಕೆ ಹೆಚ್ಚಳ
- ಸಂತೃಪ್ತಿ ಹಾಲು (ಹೋಮೋಜಿನೈಸ್ಡ್) ರೂ.50 ರಿಂದ 53ಕ್ಕೆ ಹೆಚ್ಚಳ
- ಡಬಲ್ ಟೋನ್ಡ್ ಹಾಲು ರೂ.36 ರಿಂದ 39ಕ್ಕೆ ಏರಿಕೆ
- ಇನ್ನೂ ಮೊಸರು ಪ್ರತಿ ಕೆಜಿಗೆ ರೂ.45 ರಿಂದ 48 ಹೆಚ್ಚಳ ಮಾಡಲಾಗಿದೆ.