ಬೆಂಗಳೂರು : ಓಲಾ ಮತ್ತು ಊಬರ್ ಆಟೋಗಳ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸೋಮವಾರ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ, ಈ ಹಿನ್ನೆಲೆ ಮಂಗಳವಾರ (ನ.15) ಪುನಃ ಸಭೆಯನ್ನು ಕರೆಯಲಾಗಿದೆ.
ಇಂದು ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರಿಗೆ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಆಟೋ ಚಾಲಕರ ಸಂಘದವರು ಹಾಗೂ ಓಲಾ, ಊಬರ್, ಕಂಪನಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.
ಈ ಕುರಿತು ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮಂಗಳವಾರದ ಸಭೆ ಬಳಿಕ ಸಮಗ್ರ ವರದಿ ಸಿದ್ದಪಡಿಸಿ ಹೈಕೋರ್ಟ್ ಗೆ ಸಲ್ಲಿಸಲಾಗುತ್ತದೆ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ನಿರ್ಧಾರ ತಿಳಿಸುವುದಿಲ್ಲ ಎಂದರು.
ಇತ್ತೀಚೆಗೆ ಓಲಾ, ಉಬರ್ ಕಂಪನಿಗಳ ಜೊತೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಲು ಹೈಕೋರ್ಟ್ನಲ್ಲಿ ಮತ್ತೆ ಸರ್ಕಾರ 4 ವಾರ ಸಮಯವನ್ನು ಕೋರಿದೆ. ಆದರೆ ಕೋರ್ಟ್ ಅಷ್ಟು ಸಮಯ ನೀಡಲು ನಿರಾಕರಿಸಿದೆ. ಕೊನೆಗೆ ನ್ಯಾಯಪೀಠ, ಐದು ದಿನಗಳಲ್ಲಿ ಮೂಲ ಅರ್ಜಿಗೆ ಹಾಗೂ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ನ.16ಕ್ಕೆ ಮುಂದೂಡಿದೆ. ಕ ರ್ನಾಟಕ ಹೈಕೋರ್ಟ್ ಓಲಾ, ಊಬರ್ ದರ ಹೆ್ಚ್ಚಿಗೆ ಮಾಡಲು ಅನುಮತಿ ನೀಡುವಂತೆ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ನಡೆಸಿತು, ಸರ್ಕಾರದ ಪರ ವಕೀಲರು 4 ವಾರ ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಲಾಗಿತ್ತು.
BREAKING NEWS: ಯಾದಗಿರಿಯಲ್ಲಿ ಆನೆಕಾಲು ರೋಗ ತಡೆ ಮಾತ್ರೆ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ