ಕೆಎನ್ಎನ್ಡಿಜಿಟಲ್ ಡೆಸ್ಕ್ : ಟಾಲಿವುಡ್ ಯುವ ನಾಯಕ ನಟ ನಾಗ ಶೌರ್ಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಲೋ ಚಿತ್ರದ ಮೂಲಕ ಟಾಲಿವುಡ್ನಲ್ಲಿ ನಟನಾಗಿ ಉತ್ತಮ ಹೆಸರು ಪಡೆದ ಶೌರ್ಯ, ವಿಭಿನ್ನ ಪಾತ್ರಗಳಿಂದ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದಾರೆ.
ಇನ್ನು ಶೂಟಿಂಗ್ ವೇಳೆ ನಾಗಶೌರ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದಾರಂತೆ. ಕೂಡಲೇ ಅವರನ್ನ ಚಿಕಿತ್ಸೆಗಾಗಿ ಗಚಿಬೌಲಿ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂದ್ಹಾಗೆ, ನಟ ನಾಗಶೌರ್ಯ ಆರು ತಿಂಗಳಿನಿಂದ ಸಿಕ್ಸ್ ಪ್ಯಾಕ್ ಡಯಟ್ ನಲ್ಲಿದ್ದಾರೆ ಎಂದು ತಿಳಿದು ಬಂದಿದ್ದು, ಸರಿಯಾಗಿ ಆಹಾರ ತೆಗೆದುಕೊಳ್ಳದ ಕಾರಣ ಶೂಟಿಂಗ್ನಲ್ಲಿ ಬಿದ್ದಿದ್ದಾರಂತೆ. ಇನ್ನು ನಾಗಶೌರ್ಯ ಅನಾರೋಗ್ಯದಿಂದ ಬಳಲುತ್ತಿರುವ ಮಾಹಿತಿ ತಿಳಿದು ಅವರ ಅಭಿಮಾನಿಗಳು ಕಂಗಾಲಾಗಿದ್ದಾರೆ.
HEALTH TIPS: ಪ್ರತಿನಿತ್ಯ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೀರಾ? ಹಾಗಾದ್ರೆ ಈ ಅಂಶ ಗಮನದಲ್ಲಿ ಇಟ್ಟುಕೊಳ್ಳಿ
BIGG NEWS: ತಿಹಾರ್ ಜೈಲಿನಲ್ಲಿ AAP ನಾಯಕ ಸತ್ಯೇಂದ್ರ ಜೈನ್ ಗೆ ವಿಐಪಿ ಆತಿಥ್ಯ ನೀಡಿದ ಆರೋಪ : ಜೈಲು ಅಧೀಕ್ಷಕ ಅಮಾನತು