ನವದೆಹಲಿ: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರಿಗೆ ವಿಐಪಿ ಚಿಕಿತ್ಸೆ ನೀಡಿದ ಆರೋಪದಲ್ಲಿ ದೆಹಲಿಯ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಇಂದು ಅಮಾನತುಗೊಳಿಸಲಾಗಿದೆ.
ಜೈಲು ನಂಬರ್ 7ರ ಸೂಪರಿಂಟೆಂಡೆಂಟ್ ಅವರು ಸತ್ಯೇಂದ್ರ ಜೈನ್ಗೆ ವಿಐಪಿ ಆತಿಥ್ಯ ನೀಡತ್ತಿದ್ದಾರೆ ಎಂದು ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ಆರೋಪಿಸಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ರಚಿಸಿದ ವಿಚಾರಣಾ ಸಮಿತಿಯ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಆತ ತನಿಖೆಗೆ ಅರ್ಹವಾದ ಅಕ್ರಮಗಳನ್ನು ಎಸಗಿರುವುದು ಪ್ರಾಥಮಿಕವಾಗಿ ಕಂಡುಬಂದಿದೆ ಎಂದು ದೆಹಲಿ ಸರ್ಕಾರದ ಜೈಲು ಇಲಾಖೆ ತಿಳಿಸಿದೆ.
Satyendra Jain VIP treatment case | Jail Superintendent of Tihar Jail, Ajit Kumar, DANICS, suspended. He has prima facie been found to have committed irregularities that warrant inquiry: Prison department, Delhi Government
— ANI (@ANI) November 14, 2022
ಕೆಲ ದಿನಗಳ ಹಿಂದೆ ಜೈಲನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್, ಸತ್ಯೇಂದ್ರ ಜೈನ್ ಅವರಿಗೆ ರಕ್ಷಣಾ ಹಣವಾಗಿ 10 ಕೋಟಿ ರೂ.ಗಳನ್ನು ಪಾವತಿಸಲು ಒತ್ತಾಯಿಸಿದರು ಎಂದು ಆರೋಪಿಸಿದ್ದನು. ಇದನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಾಕರಿಸಿದ್ದರು.
ಕೈಗಾರಿಕೋದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಉನ್ನತ ವ್ಯಕ್ತಿಗಳಿಂದ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ 2017 ರಿಂದ ಜೈಲಿನಲ್ಲಿದ್ದಾನೆ.
20 ವರ್ಷಗಳ ಕಠಿಣ ತಪಸ್ಸು ; ಈ ‘ಪ್ರಕೃತಿ ಪ್ರೇಮಿ’ ಬಂಜರು ಭೂಮಿ ‘ಅರಣ್ಯ’ವಾಗಿ ಪರಿವರ್ತಿಸಿದ್ದು ಹೇಗೆ ಗೊತ್ತಾ?