ಶಿವಮೊಗ್ಗ: ನೀವು ಕೋಲಾರಕ್ಕೆ ಹೋಗಬೇಡಿ. ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವ ಕೆ.ಎಸ್ ಈಶ್ವರಪ್ಪ ಸಲಹೆ ನೀಡಿದರು.
BREAKING NEWS : ಮಂಗಳೂರಿನ ‘ಸುರತ್ಕಲ್ ಟೋಲ್’ ಸಂಗ್ರಹ ಕೇಂದ್ರ ರದ್ದು : ನಳೀನ್ ಕುಮಾರ್ ಕಟೀಲ್ ಟ್ವೀಟ್
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲಿ ನಿಲ್ತಾರೋ, ಬಿಡ್ತಾರೋ ನಮಗೇನೂ ಸಂಬಂಧವಿಲ್ಲ. ಒಬ್ಬ ಜನಪ್ರತಿನಿಧಿ ಯಾವ ಕ್ಷೇತ್ರದಲ್ಲಿ ಗೆದ್ದಿರ್ತಾನೋ ಅದೇ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಂತರೆ ಆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರ್ಥ. ಅದು ಬಿಟ್ಟು ಈ ಸಾರಿ ಒಂದು ಕ್ಷೇತ್ರ, ಮುಂದಿನ ಸಾರಿ ಇನ್ನೊಂದು ಕ್ಷೇತ್ರ, ಅದಕ್ಕೂ ಮುಂದಿನ ವರ್ಷ ಇನ್ನೊಂದು ಕ್ಷೇತ್ರ ಹೀಗೆ ಮಾಡಿದರೆ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ, ಆ ಜನರ ಪ್ರೀತಿ ವಿಶ್ವಾಸ ಗಳಿಸಿಲ್ಲ ಎಂಬ ಅಭಿಪ್ರಾಯ ಬರುತ್ತೆ ಎಂದರು.
BREAKING NEWS : ಮಂಗಳೂರಿನ ‘ಸುರತ್ಕಲ್ ಟೋಲ್’ ಸಂಗ್ರಹ ಕೇಂದ್ರ ರದ್ದು : ನಳೀನ್ ಕುಮಾರ್ ಕಟೀಲ್ ಟ್ವೀಟ್
ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೋ ಕಾರಣಕ್ಕೆ ಸೋತಿರಿ, ಯಾರ್ಯಾರಿಗೋ ಬೈದಿರಿ, ಕಾರ್ಯಕರ್ತರಿಗೆ ಕೆಲಸ ಮಾಡಿಲ್ಲ ಎಂದು ಬೈದಿರಿ, ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ತೋರಿಸಿ. ಅದು ಬಿಟ್ಟು ನನಗೆ ಅಲ್ಲಿ ಕರೀತಾರೆ, ಕೋಲಾರಕ್ಕೆ ಕರೀತಾರೆ ಅಂತ ಹೇಳಿದ್ರೆ