ಬೆಂಗಳೂರು: ಸಿದ್ದರಾಮಯ್ಯರನ್ನು ಕೋಲಾರದಲ್ಲಿ ಸೋಲಿಸೋಕೆ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಾಸ್ತು ಪ್ರಕಾರ ಮನೆಯಲ್ಲಿ ಯಾವ ರೀತಿಯ ಶಿವನ ಫೋಟೋ-ವಿಗ್ರಹ ಇಡಬೇಕು? ಇಲ್ಲಿದೆ ಸಲಹೆಗಳು
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೇ ಮಾಡುವ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾಜಿ ಸಿಎಂ ಆದವರು. ಅವರು 224 ಕ್ಷೇತ್ರದಲ್ಲಿ ನಿಲ್ಲಬಹುದು. ನಾವು ಅದಕ್ಕೆ ಲಘುವಾಗಿ ಮಾತನಾಡುವುದಿಲ್ಲ. ನಾವು ನಮ್ಮ ಅಭ್ಯರ್ಥಿಯನ್ನು ಹಾಕಿಯೇ ಹಾಕುತ್ತೇವೆ. ಈಗಾಗಲೇ 6 ತಿಂಗಳ ಹಿಂದೆಯೇ ಅಭ್ಯರ್ಥಿ ಆಯ್ಕೆ ಆಗಿದೆ ಎಂದರು.ಸಿದ್ದರಾಮಯ್ಯ ಸೋಲಿಸೋಕೆ ಜೆಡಿಎಸ್-ಬಿಜೆಪಿ ಒಪ್ಪಂದ ಮಾಡಿಕೊಳ್ಳುತ್ತದೆ ಎನ್ನುವುದು ಸುಳ್ಳು.
ವಾಸ್ತು ಪ್ರಕಾರ ಮನೆಯಲ್ಲಿ ಯಾವ ರೀತಿಯ ಶಿವನ ಫೋಟೋ-ವಿಗ್ರಹ ಇಡಬೇಕು? ಇಲ್ಲಿದೆ ಸಲಹೆಗಳು
ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಸಿದ್ದರಾಮಯ್ಯ ಸೋಲಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಮ್ಮ ಸ್ವಂತ ಶಕ್ತಿ ಮೇಲೆ ನಾವು ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆ. ಬಿಜೆಪಿ ಜೊತೆ ಕುತಂತ್ರ ರಾಜಕೀಯ ಮಾಡಿ ಸಿದ್ದರಾಮಯ್ಯನವರನ್ನು ಸೋಲಿಸಲ್ಲ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಚುನಾವಣೆಯಲ್ಲಿ ನಾವೇ ಸೋಲಿಸ್ತೇವೆ. ಇದೆಲ್ಲ ವಿಧಿ ಆಟ ಎಂದರು.
ಕೋಲಾರದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. 6 ತಿಂಗಳ ಹಿಂದೆಯೇ ಅಭ್ಯರ್ಥಿ ಫೈನಲ್ ಆಗಿದೆ. ಸಿದ್ದರಾಮಯ್ಯ ಬಂದ್ರು ಅಂತ ಮತ್ತೆ ಹೊಸ ಅಭ್ಯರ್ಥಿ ಹಾಕಲ್ಲ ಅಂತ ಸ್ಪಷ್ಟಪಡಿಸಿದರು.