ನವದೆಹಲಿ : ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಪ್ರಮುಖ ಯೋಜನೆಗಳನ್ನ ಜಾರಿಗೆ ತರುತ್ತಿದ್ದು, ರೈತರ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತಿದೆ. ರೈತರು ಅನೇಕ ರೀತಿಯಲ್ಲಿ ಸಬ್ಸಿಡಿ ಪ್ರಯೋಜನಗಳನ್ನ ಪಡೆಯುತ್ತಿದ್ದು, ಈ ಬಾರಿ ಕೇಂದ್ರ ಸರ್ಕಾರವು ಕೃಷಿಯಲ್ಲಿ ಡ್ರೋನ್ ಬಳಕೆಯನ್ನ ಉತ್ತೇಜಿಸಲು ಅತ್ಯುತ್ತಮ ಯೋಜನೆಯನ್ನ ರೂಪಿಸಿದೆ. ಸಬ್ಸಿಡಿ ನೀಡಲಾಗ್ತಿದ್ದು, ರೈತರು ಕಡಿಮೆ ವೆಚ್ಚದಲ್ಲಿ ಖರೀದಿಸಬೋದು.
ಡ್ರೋನ್ಗಳನ್ನ ಬಳಸುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನ ಪಡೆಯಬಹುದು. ಕೃಷಿಯಲ್ಲಿ ಡ್ರೋನ್ಗಳನ್ನ ಬಳಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ರೈತರಿಗೆ ಉತ್ತೇಜನ ನೀಡಲು ಇದರ ಖರೀದಿಗೆ ಸಹಾಯಧನ ನೀಡುವ ಯೋಜನೆ ಸಿದ್ಧಪಡಿಸಲಾಗಿದೆ. ಡ್ರೋನ್ನ ವೆಚ್ಚದಲ್ಲಿ 50 ಪ್ರತಿಶತ ಸಬ್ಸಿಡಿ, ಸರಕಾರ ರೈತರಿಗೆ ಗರಿಷ್ಠ 5 ಲಕ್ಷದವರೆಗೆ ಆರ್ಥಿಕ ನೆರವು ನೀಡಲಿದೆ.
ಕೃಷಿಯಲ್ಲಿ ಡ್ರೋನ್ಗಳ ಬಳಕೆ.!
ಡ್ರೋನ್ಗಳ ಸಹಾಯದಿಂದ ರೈತರು ಸುಲಭವಾಗಿ ಗದ್ದೆಯಲ್ಲಿ ನಿಂತು ಕಡಿಮೆ ಸಮಯದಲ್ಲಿ ಗೊಬ್ಬರ ಮತ್ತು ಇತರ ಕೀಟನಾಶಕಗಳನ್ನ ಬೆಳೆಗಳಿಗೆ ಸಿಂಪಡಿಸಬಹುದು. ಇದರಿಂದ ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಇದಲ್ಲದೇ, ಕೀಟನಾಶಕಗಳು, ಔಷಧಿಗಳು ಮತ್ತು ರಸಗೊಬ್ಬರಗಳನ್ನ ಸಹ ಉಳಿಸಲಾಗಿದೆ.
ಈ ರೈತರಿಗೆ ಸಹಾಯಧನ.!
ಕೃಷಿ ವೆಚ್ಚ ತಗ್ಗಿಸಲು ಸರ್ಕಾರ ಕೆಲವು ಮಹತ್ವದ ಯೋಜನೆಗಳನ್ನ ಜಾರಿಗೆ ತಂದಿದೆ. ಇದರಿಂದ ರೈತರ ಆದಾಯ ಹೆಚ್ಚಿಸಬಹುದು. ಡ್ರೋನ್ ಖರೀದಿಗೆ ರೈತರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳಾ ರೈತರು ಮತ್ತು ಈಶಾನ್ಯ ರಾಜ್ಯಗಳ ರೈತರಿಗೆ ಡ್ರೋನ್ಗಳ ವೆಚ್ಚದ 50 ಪ್ರತಿಶತದವರೆಗೆ ಗರಿಷ್ಠ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಇತರೆ ರೈತರಿಗೆ ಡ್ರೋನ್ ಖರೀದಿಗೆ ಶೇ.40 ಅಥವಾ ಗರಿಷ್ಠ ರೂ. 4 ಲಕ್ಷ ಸಹಾಯಧನ ನೀಡಲಾಗುತ್ತಿದೆ.
ಎಚ್ಚರ..! ಅರಿಶಿನದಲ್ಲಿ ಇರುವ ‘ಕರ್ಕ್ಯುಮಿನ್ ಎಂಬ ಅಂಶ ಲಿವರ್ ಡ್ಯಾಮೇಜ್ ‘ ಮಾಡುತ್ತದೆ : ಸಂಶೋಧನೆ ಮಾಹಿತಿ ಬಹಿರಂಗ