ಅಹ್ಮದಾಬಾದ್: ವಂದೇ ಭಾರತ್ ರೈಲಿನಲ್ಲಿ ಪ್ರಯಾಣದ ವೇಳೆ 6 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿರುವ ತನ್ನ ಚೀಲವನ್ನು ಯಾರೋ ಕದ್ದಿದ್ದಾರೆ ಎಂದು ಬೋಪಾಲ್ ನ 55 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬೋಪಾಲ್ನ ಜಿಇಬಿ ರಸ್ತೆಯಲ್ಲಿರುವ ನವನಿಧಿ ನಿವಾಸಿ ಪರೇಶ್ ಸೋನಾನಿ ಮಂಗಳವಾರ ಈ ಘಟನೆ ನಡೆದಿದೆ ಎಂದು ತಮ್ಮ ಎಫ್ಐಆರ್ನಲ್ಲಿ ತಿಳಿಸಿದ್ದಾರೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಹತ್ತಿ, ಸೀಟ್ನ ಪಕ್ಕದಲ್ಲಿ ಬ್ಯಾಗ್ ಇರಿಸಿದ್ದೆ. ಆದರೆ ಕೆಲ ಹೊತ್ತಿನಲ್ಲಿ ಆ ಬ್ಯಾಗ್ ನಾಪತ್ತೆಯಾಗಿತ್ತು . ಅದರಲ್ಲಿ 6 ಲಕ್ಷ ರೂ ಮೌಲ್ಯದ ಆಭರಣ ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಈ ಪ್ರಕರಣದ ಬಗ್ಗೆ ಅಹಮದಾಬಾದ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.