ರಾಯಚೂರು: ಎಲ್ಲಿ ಆತಂಕಗಳು ಹೆಚ್ಚಾಗುತ್ತೋ ಆಗ ಕ್ಷೇತ್ರ ಪರ್ಯಟನೆ, ಕ್ಷೇತ್ರ ಬದಲಾವಣೆ ನಡೆಯುತ್ತೆ, ಇದು ರಾಜಕೀಯದಲ್ಲಿ ಸಾಮಾನ್ಯ ಎಂದು ಸಿದ್ದರಾಮಯ್ಯ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ವ್ಯಂಗ್ಯವಾಡಿದರು.
BIGG NEWS: ಕೆಂಪೇಗೌಡ ಪ್ರತಿಮೆ ಬಳಿ ನೂತನ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಜ್ಜು
ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಅವರ ವೈಯಕ್ತಿಕ ನಿರ್ಧಾರ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರೆ ಸ್ಟೆಬಿಲಿಟಿ ಇರುತ್ತಿತ್ತು ವರುಣದಲ್ಲಿ ಏನಾಯ್ತು, ಬಾದಾಮಿಯಲ್ಲಿ ಸ್ವಲ್ಪ ಎಡ್ಜ್ನಲ್ಲಿ ಗೆದ್ದರು. ಜನ ಚುನಾವಣೆ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
BIGG NEWS: ಕೆಂಪೇಗೌಡ ಪ್ರತಿಮೆ ಬಳಿ ನೂತನ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಜ್ಜು
ಕಾಂಗ್ರೆಸ್ ನವರಿಗೆ ಸೋಲಿನ ಭಯವಿದೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಹೆಸರಲ್ಲಿ ಕಾಂಗ್ರೆಸ್ ಜೋಡೋ ಯಾತ್ರೆ ಮಾಡಿದ್ದಾರೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷಕ್ಕಿಂತ ಕಡೆಯಾಗಿದೆ. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗುತ್ತೆ ಎಂದು ವ್ಯಂಗ್ಯವಾಡಿದರು.