ದಾವಣಗೆರೆ : ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲೆಗೆ ಬರುವುದೇ ವಸೂಲಿಗಾಗಿ ಎಂಬ ಈ ವಿಚಾರವನ್ನ ಪಾಲಿಕೆಯ ಆಯುಕ್ತರೇ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಬೆನ್ನಲ್ಲೇ ಸಚಿವ ಭೈರತಿ ಬಸವರಾಜ್ ಗೆ ಬಿಗ್ ಶಾಕ್ ಎದುರಾಗಿದೆ.
HEALTH TIPS: ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಮಧುಮೇಹಿಗಳಿಗೆ ಈ 5 ಪದಾರ್ಥಗಳು ಪರಿಣಾಮಕಾರಿ| Diabetes
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಇದೀಗ ಇದರ ಬೆನ್ನಲ್ಲೆ ವೈರಲ್ ಆದ ಆಯುಕ್ತರ ಆಡಿಯೋ ವೈರಲ್ ಬಗ್ಗೆ ತನಿಖೆ ಆರಂಭಗೊಂಡಿದೆ. ಲೋಕಾಯುಕ್ತರು ಸಚಿವ ಭೈರತಿ ಬಸವರಾಜ್ಗೂ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ಎಂಬುವವರ ನಡುವೆ ನಡೆದ ಸಂಭಾಷಣೆಯ ಆಡಿಯೋ ಆಗಿತ್ತು. ಕೃಷ್ಣಪ್ಪನ ಬಳಿ 3 ಲಕ್ಷ ರೂಪಾಯಿ ಲಂಚ ಪಡೆಯುವಾಗ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ವೆಂಕಟೇಶ್ ಹಾಗೂ ಕೃಷ್ಣಪ್ಪ ಅವರು ಜಕಾತಿ ಸಂಗ್ರಹಕ್ಕೆ ಅನುಮತಿ ಪಡೆಯಲು ಹಣಕಾಸಿನ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಹಾಗೂ ಬೈರತಿ ಬಸವರಾಜ್ ಅವರ ಹೆಸರು ಪ್ರಸ್ತಾಪ ಮಾಡಿದ್ದರು.
BIGG NEWS: ಮೈಸೂರಿನ ಬಸ್ ನಿಲ್ದಾಣದ ಗುಂಬಜ್ ಮೇಲೆ ರಾತ್ರೋರಾತ್ರಿ ಕಳಸ ನಿರ್ಮಾಣ