ವಾರಣಾಸಿ: ಚಲಿಸುತ್ತಿದ್ದ ರೈಲಿನಿಂದ ಮೂರು ವರ್ಷದ ಬಾಲಕಿ ಬಿದ್ದಿದ್ದು, ಮಗುವನ್ನು ರಕ್ಷಿಸಲು ಆಕೆಯ ತಂದೆ ಜಿಗಿದಿದ್ದಾರೆ. ಭಾನುವಾರ ಇಲ್ಲಿನ ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ ಬಳಿ ಈ ಘಟನೆ ನಡೆದಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, 32 ವರ್ಷದ ಹೀರಾ ರೈನ್ ತನ್ನ ಪತ್ನಿ ಜರೀನಾ, ಮಗಳು ಮತ್ತು ಸೋದರ ಮಾವ ಫಿರೋಜ್ ಅವರೊಂದಿಗೆ ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಕಿಕ್ಕಿರಿದು ಜನರು ತುಂಬಿದ್ದರಿಂದ ಸೀಟು ಸಿಗದ ಕಾರಣ ಮನೆಯವರು ಬಾಗಿಲ ಬಳಿಯೇ ಕುಳಿತಿದ್ದರು. ಈ ವೇಳೆ, ಮಗು ರೈಲಿನಿಂದ ಬಿದ್ದಾಗ, ಹೀರಾ ರೈನ್ ತಕ್ಷಣ ಅವಳನ್ನು ರಕ್ಷಿಸಲು ಹೊರಗೆ ಹಾರಿದ್ದಾರೆ. ಆಗ ಅವನ ಹೆಂಡತಿ ತಕ್ಷಣವೇ ರೈಲನ್ನು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದಳು.
ರೈಲು ನಿಲ್ಲಿಸಿದ ತಕ್ಷಣವೇ ಇತರ ಪ್ರಯಾಣಿಕರು ಅವರ ಸಹಾಯಕ್ಕೆ ಬಂದರು. ಚಲಿಸುತ್ತಿದ್ದ ರೈಲಿನಿಂದ ಬಿದ್ದ ರಭಸಕ್ಕೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ತಂದೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚುವ ವಿಚಾರ : ಸಿಎಂ ಬೊಮ್ಮಾಯಿ ಹೇಳಿದ್ದೇನು?
ಚಲಿಸುವ ರೈಲಿನಡಿ ಸಿಲುಕುತ್ತಿದ್ದ ಯುವತಿಯ ಪ್ರಾಣ ಉಳಿಸಿದ ಆರ್ಪಿಎಫ್ ಸಿಬ್ಬಂದಿ | WATCH VIDEO
ಅವಿವಾಹಿತ ಮಗಳ ಉನ್ನತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ತಂದೆಯ ಭರಿಸಬೇಕಾಗುತ್ತದೆ: ಕೋರ್ಟ್