ಮಹಾರಾಷ್ಟ್ರ: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಳಂನೂರಿನಲ್ಲಿ ಸಾಗುತ್ತಿರುವ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಕಲಾವಿದರೊಂದಿಗೆ ಡ್ರಮ್ಸ್ ಬಾರಿಸಿದರು.
ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಮಹಾರಾಷ್ಟ್ರದಲ್ಲಿದ್ದು, ಭಾನುವಾರ 66 ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಹಿಂಗೋಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಡ್ರಮ್ಸ್ ಬಾರಿಸಿದ್ದು, ಅದರ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ರಾಹುಲ್ ಡ್ರಮ್ಸ್ ಬಾರಿಸಲು ಯತ್ನಿಸುತ್ತಿರುವುದನ್ನು ನೋಡಬಹುದು.
#WATCH | Congress MP Rahul Gandhi tries his hand on drum with artists at a cultural show in Kalamnuri, Hingoli district in Maharashtra during the ‘Bharat Jodo Yatra’
(Source: AICC) pic.twitter.com/oIKLnscM1g
— ANI (@ANI) November 13, 2022
ಯಾತ್ರೆಯು ಈ ಹಿಂದೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗಗಳ ನಂತ್ರ ಮಹಾರಾಷ್ಟ್ರಕ್ಕೆ ಪ್ರವೇಶಿಸಿದೆ. ಕನ್ಯಾಕುಮಾರಿಯಿಂದ ಸೆಪ್ಟೆಂಬರ್ 7 ರಂದು ಪ್ರಾರಂಭಿಸಲಾದ 3,570-ಕಿಮೀ ರಾಷ್ಟ್ರವ್ಯಾಪಿ ಪಾದಯಾತ್ರೆಯು ಮುಂದಿನ ದಿನಗಳಲ್ಲಿ 2,355 ಕಿಮೀ ದೂರವನ್ನು ಕ್ರಮಿಸಲಿದೆ. ಇದು ಮುಂದಿನ ವರ್ಷ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.
BREAKING NEWS: ಪಂಜಾಬ್ನ ಅಮೃತಸರದಲ್ಲಿ 4.1 ತೀವ್ರತೆಯ ಭೂಕಂಪ | Earthquake In Punjab
ಕಳ್ಳತನ ಆರೋಪ: ಕಂಬಕ್ಕೆ ಕಟ್ಟಿ ಥಳಿಸಿದ ಏಟಿಗೆ ಮೂರ್ಛೆ ಹೋದ ಯುವಕರು | WATCH VIDEO
BIGG NEWS : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : `NIA’ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
BREAKING NEWS: ಪಂಜಾಬ್ನ ಅಮೃತಸರದಲ್ಲಿ 4.1 ತೀವ್ರತೆಯ ಭೂಕಂಪ | Earthquake In Punjab