ಪಾಟ್ನಾ: ಕಬ್ಬಿಣದ ತುಂಡುಗಳನ್ನು ಕದ್ದಿದ್ದಾರೆಂದು ಆರೋಪಿಸಿ ಇಬ್ಬರು ಯುವಕರನ್ನು ಕಟ್ಟಿಹಾಕಿ ಗುಂಪೊಂದು ಥಳಿಸಿದೆ. ಈ ಥಳಿತದ ನೋವಿಗೆ ಇಬ್ಬರು ಮೂರ್ಛೆ ಹೋಗಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ.
ಕಬ್ಬಿಣದ ತುಂಡುಗಳನ್ನು ಕದ್ದಿದ್ದಾರೆಂದು ಆರೋಪಿಸಿ ಇಬ್ಬರು ಯುವಕರನ್ನು ಗುಂಪೊಂದು ತಮಗಿಷ್ಟ ಬಂದಂತೆ ಥಳಿಸಿದ್ದಾರೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಲಾಗಿದ್ದು, ವ್ಯಕ್ತಿಯೊಬ್ಬ ನೆಲದ ಮೇಲೆ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಯುವಕನ ಬೆನ್ನಿಗೆ ಎರಡು ಬಾರಿ ಹೊಡೆಯುವುದನ್ನು ನೋಡಬಹುದು. ಈ ಹೊಡೆತಕ್ಕೆ ಯುವಕ ನೋವಿನಿಂದ ಚೀರುವುದನ್ನು ವಿಡಿಯೋ ತೋರಿಸುತ್ತದೆ.
चोरी के आरोप में दो युवकों की खंभे से बांधकर पिटाई, वायरल VIDEO pic.twitter.com/WOJjBDoj0h
— Gaurav kumar (@Gauravjournal) November 12, 2022
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಧ್ಯಪ್ರವೇಶಿಸಿ ಯುವಕರನ್ನು ಬಿಡಿಸಿ ಪೊಲೀಸ್ ಠಾಣೆಗೆ ಕರೆತಂದರು.
ಕಬ್ಬಿಣ ಕದಿಯಲು ಯತ್ನಿಸಿದ ಆರೋಪಿಗಳಿಬ್ಬರೂ ಮುಜಾಫರ್ಪುರದ ನಿವಾಸಿಗಳಾಗಿದ್ದಾರೆ. ಪಟ್ಟಣದ ಸೇತುವೆ ಬಳಿ ಕಬ್ಬಿಣದ ಶೆಡ್ಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಕಳೆದ ಒಂದು ವಾರದಲ್ಲಿ ಕಟ್ಟಡದಿಂದ ಕ್ವಿಂಟಾಲ್ಗೂ ಹೆಚ್ಚು ಕಬ್ಬಿಣ ಕಳ್ಳತನವಾಗಿದೆ. ಭಾನುವಾರ ಮಧ್ಯಾಹ್ನ, ಕೆಲವು ಸ್ಥಳೀಯರು ಇಬ್ಬರು ವ್ಯಕ್ತಿಗಳನ್ನು ಕಬ್ಬಿಣದ ಕಳ್ಳರು ಎಂದು ಗುರುತಿಸಿ ಕಟ್ಟಿಹಾಕಿ ಥಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
BIG NEWS: ಜಿ20 ಶೃಂಗಸಭೆ: ಇಂದು ಇಂಡೋನೇಷ್ಯಾಗೆ ಪ್ರಧಾನಿ ಮೋದಿ ಪ್ರಯಾಣ | G20 Summit
watch video : ‘ಅಲ್ಲಾಹು ಅಕ್ಬರ್’, ಕೂಗುವಂತೆ ವಿದ್ಯಾರ್ಥಿಗೆ ಥಳಿಸಿ ಬಲವಂತ, ವಿಡಿಯೋ ವೈರಲ್
BREAKING NEWS: ಪಂಜಾಬ್ನ ಅಮೃತಸರದಲ್ಲಿ 4.1 ತೀವ್ರತೆಯ ಭೂಕಂಪ | Earthquake In Punjab
BIG NEWS: ಜಿ20 ಶೃಂಗಸಭೆ: ಇಂದು ಇಂಡೋನೇಷ್ಯಾಗೆ ಪ್ರಧಾನಿ ಮೋದಿ ಪ್ರಯಾಣ | G20 Summit