ಬೆಂಗಳೂರು : ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ 8,100 ಹೊಸ ಕೊಠಡಿ ನಿರ್ಮಾಣಕ್ಕೆ ಇಂದು ಏಕಕಾಲದಲ್ಲಿ ರಾಜ್ಯ ಸರ್ಕಾರ ಶಂಕುಸ್ಥಾಪನೆ ಮಾಡಲಿದ್ದು, ಈ ಯೋಜನೆಗೆ ವಿವೇಕ ಎಂದು ಹೆಸರಿಡಲಾಗಿದೆ.
BIG NEWS: ಜಿ20 ಶೃಂಗಸಭೆ: ಇಂದು ಇಂಡೋನೇಷ್ಯಾಗೆ ಪ್ರಧಾನಿ ಮೋದಿ ಪ್ರಯಾಣ | G20 Summit
ವಿವೇಕ ಶಾಲಾ ಕೊಠಡಿಗಳಿಗೆ ಏಕರೂಪವಾಗಿ ಸೂರ್ಯನ ಬಣ್ಣ ಅಥವಾ ಅರುಣೋದಯ ವರ್ಣ ಬಳಿಯಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಆದರೆ, ಇದಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದ್ದು, ಸರ್ಕಾರ ಉದಯ ರವಿಯ ಬಣ್ಣದ ಹೆಸರಿನಲ್ಲಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿದೆ. ಬಿಜೆಪಿಯವರು ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸಿದ್ದು ಆಯಿತು ಈಗ ಶಾಲಾ ಕಟ್ಟಡ, ಕೊಠಡಿಗಳನ್ನು ಕೇಸರಿಮಯಗೊಳಿಸಲು ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ವಾಮಿ ವಿವೇಕಾನಂದರ ನೆನಪಿನಲ್ಲಿ ವಿವೇಕ ಶಾಲೆ ಎಂದು ಹೆಸರಿಡಲು ಮುಂದಾಗಿದ್ದು, ಈ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಸಲು ಚಿಂತನೆ ನಡೆಸಿದೆ. ಇಲಾಖೆಯ ಈ ನಡೆ ಮುಸ್ಲಿಂ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ವಿವೇಕಾನಂದರ ಹೆಸರನ್ನ ಉಪಯೋಗಿಸಿಕೊಂಡು ಶಾಲೆಗಳನ್ನ ಕೇಸರಿಮಯ ಮಾಡಲು ಮುಂದಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯ ನಂತರ ಎರಡನೇ ಸುತ್ತಿನ ಕೇಸರೀಕರಣ ಶುರು ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ವಿವಾದ ಬಗ್ಗೆ ಮಾತನಾಡಿರುವ ಸಚಿವ ನಾಗೇಶ್ ಅರ್ಕಿಟಿಕ್ ಇದು ಚೆನ್ನಾಗಿ ಕಾಣುತ್ತದೆ ಅಂತ ಹೇಳಿದರೆ, ಕೇಸರಿ ಬಣ್ಣವನ್ನು ಬಳಿಸುತ್ತೇವೆ, ಅದರಲ್ಲಿ ಯಾವುದೇ ಅನುಮಾನವಿಲ್ಲ ಅಂತ ತಿಳಿಸಿದರು, ಇದೇ ವೇಳೆ ಅವರು ಕೆಲವರಿಗೆ ಕೇಸರಿ ಅಲರ್ಜಿ ಇದೇ ಅಂತ ವ್ಯಂಗ್ಯವಾಡಿ, ಅವರ ಪಾರ್ಟಿಯಲ್ಲಿ ಕೂಡ ಕೇಸರಿ ಕಲರ್ ಇದೆ ಅದು ಯಾಕೆ ಇಟ್ಟುಕೊಂಡಿದ್ದಾರೆಡ ಅಂತ ನನಗೆ ತಿಳಿಯುತ್ತಿಲ್ಲ ಅಂತ ಕುಟುಕಿದರು.