ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಣಕ್ಕೆ ಇಳಿಯೋ ಕ್ಷೇತ್ರವನ್ನು ಫೈನಲ್ ಮಾಡಿದ್ದಾರೆ ಎನ್ನಲಾಗಿದೆ. ಇವೆಲ್ಲದರ ನಡುವೆ ಸಿದ್ದರಾಮ್ಯಯ ಅವರು ಮತ್ತೆ ಬಾದಾಮಿಯಿಂದ ಕಣಕ್ಕೆ ಇಳಿಯೋದಿಲ್ಲ ಅಂತ ನೇರವಾಗಿ ಹೇಳಿದ್ದು, ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರವನ್ನು ಕೊನೆ ನಿಲ್ದಾಣವಾಗಿ ಮಾಡಿಕೊಂಡಿದ್ದಾರೆ.
ಇನ್ನೂ ಭಾನುವಾರ ಕೋಲಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಜನತೆ ಅದ್ದೂರಿಯಾಗಿ ಸ್ವಾಗತಿಸಿದ್ದು, ಈ ಮೂಲಕ ತಮ್ಮ ಮುಂದಿನ ಶಾಸಕನಿಗೆ ರತ್ನಗಂಬಳಿಯನ್ನು ಹಾಸಿ ಸ್ವಾಗತ ಕೋರಿದ್ದಾರೆ. ಕೋಲಾರಿಂದಲೇ ಸ್ಪರ್ಧೆ ಮಾಡುವಂತೆ ಒತ್ತಡ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಎರಡು ಪ್ರತ್ಯೇಕ ಸರ್ವೆಯನ್ನು ಮಾಡಲಿದ್ದು, ಎರಡರಲ್ಲೂ ಕೂಡ ಸಿದ್ದರಾಮಯ್ಯ ಅವರ ಪರವಾಗಿ ಜನತೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಕೂಡ ಇಲ್ಲಿಂದಲೇ ಸ್ಪರ್ಧೆ ಮಾಡುವುದಕ್ಕೆ ಮನಸ್ಸು ಮಾಡುವುದರಲ್ಲಿ ಅನುಮಾನವಿಲ್ಲ.
ಈ ನಡುವೆ ಭಾನುವಾರ ಕೋಲಾರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು ಇಲ್ಲಿಂದ ಸ್ಪರ್ಧೆ ಮಾಡುವಂತೆ ಜನತೆ ಒತ್ತಾಯಿಸಿದ್ದಾರೆ. ಹಾಲಿ ಜೆಡಿಎಸ್ ಶಾಸಕ ಕೂಡ ನಾನು ಇಲ್ಲಿಂದ ಸ್ಪರ್ಧೆ ಮಾಡಲು ಮುಂದಾದ್ರೆ ನಾನು ಕಾಂಗ್ರೆಸ್ ಸೇರಿ ನಿಮ್ಮ ಜೊತೆಗೆ ಕೆಲಸ ಮಾಡಲು ಮುಂದಾಗುವೆ ಅಂತ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬರುವ ದಿನದಲ್ಲಿ ನಿರ್ಧಾರ ಮಾಡಲಾಗುವುದು ಅಂತ ತಿಳಿಸಿದ್ದಾರೆ. ಇದಲ್ಲದೇ ಇನ್ನೂ ಮೂರು ಕ್ಷೇತ್ರವನ್ನು ಕೂಡ ಸಿದ್ದರಾಮಯ್ಯ ಅವರು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಈ ಬಗ್ಗೆ ಚುನಾವಣೆಗೂ ಮುನ್ನ ಸಂಪೂರ್ಣ ಮಾಹಿತಿ ಹೊರ ಬರಲಿದೆ.