ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಹಿಜಾಬ್, ಪಠ್ಯ ಪರಿಷ್ಕರಣೆ ವಿವಾದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಶುರುವಾಗಿದ್ದು, ರಾಜ್ಯಾದ್ಯಂತ 7 ಸಾವಿರಕ್ಕೂ ಹೆಚ್ಚು ವಿವೇಕ ಶಾಲೆಗಳಿಗೆ ಕೇಸರಿ ಬಣ್ಣ ಬಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಶಿಕ್ಷಣ ಇಲಾಖೆ ಹೊಸದಾಗಿ ರಾಜ್ಯದಾದ್ಯಂತ 7000ಕ್ಕೂ ಅಧಿಕ ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದರ ನೆನಪಿನಲ್ಲಿ ವಿವೇಕ ಶಾಲೆ ಎಂದು ಹೆಸರಿಡಲು ಮುಂದಾಗಿದ್ದು, ಈ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಸಲು ಚಿಂತನೆ ನಡೆಸಿದೆ. ಇಲಾಖೆಯ ಈ ನಡೆ ಮುಸ್ಲಿಂ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ವಿವೇಕಾನಂದರ ಹೆಸರನ್ನ ಉಪಯೋಗಿಸಿಕೊಂಡು ಶಾಲೆಗಳನ್ನ ಕೇಸರಿಮಯ ಮಾಡಲು ಮುಂದಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯ ನಂತರ ಎರಡನೇ ಸುತ್ತಿನ ಕೇಸರೀಕರಣ ಶುರು ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ವಿವಾದ ಬಗ್ಗೆ ಮಾತನಾಡಿರುವ ಸಚಿವ ನಾಗೇಶ್ ಅರ್ಕಿಟಿಕ್ ಇದು ಚೆನ್ನಾಗಿ ಕಾಣುತ್ತದೆ ಅಂತ ಹೇಳಿದರೆ, ಕೇಸರಿ ಬಣ್ಣವನ್ನು ಬಳಿಸುತ್ತೇವೆ, ಅದರಲ್ಲಿ ಯಾವುದೇ ಅನುಮಾನವಿಲ್ಲ ಅಂತ ತಿಳಿಸಿದರು, ಇದೇ ವೇಳೆ ಅವರು ಕೆಲವರಿಗೆ ಕೇಸರಿ ಅಲರ್ಜಿ ಇದೇ ಅಂತ ವ್ಯಂಗ್ಯವಾಡಿ, ಅವರ ಪಾರ್ಟಿಯಲ್ಲಿ ಕೂಡ ಕೇಸರಿ ಕಲರ್ ಇದೆ ಅದು ಯಾಕೆ ಇಟ್ಟುಕೊಂಡಿದ್ದಾರೆಡ ಅಂತ ನನಗೆ ತಿಳಿಯುತ್ತಿಲ್ಲ ಅಂತ ಕುಟುಕಿದರು.