ಬೆಂಗಳೂರು : ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮಾಪಣೆ ಕೇಳಿದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿಚಾರದ ಕುರಿತು ಡಿಕೆ ಶಿವಕುಮಾರ್ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಹಿಂದು ಕುರಿತು ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ ಕೂಡಲೇ ಕ್ಷಮಾಪಣೆ ಕೇಳಬೇಕು, ಆದರೆ ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ದೊಡ್ಡದು ಮಾಡಿದೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಎಂದು ಡಿಕೆಶಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಅವರಿಗೆ ನಮ್ಮ ವಿರುದ್ಧ ನಾವೇ ಅಸ್ತ್ರಗಳನ್ನು ಕೊಟ್ಟಂತಾಗುತ್ತಿದೆ, ದಯವಿಟ್ಟು ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆಗೆ ಬ್ರೇಕ್ ಹಾಕಿ ಎಂದು ಪಕ್ಷದ ವರಿಷ್ಟರಾದಂತಹ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಬಳಿ ಡಿಕೆಶಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕರ ವಿವಾದಾತ್ಮಕ ಹೇಳಿಕೆ ಡಿಕೆಶಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದಂತಿದೆ.
ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಆ ಬಳಿಕ ಕ್ಷಮೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ( KPCC Working President Satish Jarkiholi ) ಕೇಳಿದ್ದರು. ಈ ಬೆನ್ನಲ್ಲೇ ಅವರು ಶಿವಾಜಿಯ ಬಗ್ಗೆ ಮಾತನಾಡಿದಂತ ವಿವಾದಾತ್ಮಕ ಹೇಳಿಕೆಯ ಮತ್ತೊಂದು ವೀಡಿಯೋ ವೈರಲ್ ( Video Viral ) ಆಗಿದೆ.
ಕೆಪಿಸಿಸಿಯ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹಿಂದೂ ವಿರೋಧಿ ಹೇಳಿಕೆಯ ವಿವಾದದ ನಡುವೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶಿವಾಜಿ ಮಹಾರಾಜ್ ಬಗ್ಗೆ ಜಾರಕಿಹೊಳಿ ಹೇಳಿದ್ದನ್ನು ನೀವು ಒಪ್ಪುತ್ತೀರಾ ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ.
ಶಿವಾಜಿ ಮಹಾರಾಜ್ ಮತ್ತು ಸಂಭಾಜಿ ಮಹಾರಾಜ್ ಅವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾದ ಜಾರಕಿಹೊಳಿ ಅವರ ವೀಡಿಯೊವನ್ನು ಹಂಚಿಕೊಂಡಿರುವ ಫಡ್ನವೀಸ್, “ನಿಮ್ಮ ಪಕ್ಷದ ಶಾಸಕರು ಮಹಾನ್ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಬಗ್ಗೆ ಹೇಳಿರುವ ಈ ಸಂವೇದನಾಶೀಲವಲ್ಲದ, ದಾರಿತಪ್ಪಿಸುವ, ಅವಮಾನಿಸುವ ಸುಳ್ಳುಗಳನ್ನು ನೀವು ಒಪ್ಪುತ್ತೀರಾ? ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯೇ? ಇದನ್ನು ಮಹಾರಾಷ್ಟ್ರ ಸಹಿಸುವುದಿಲ್ಲ’ ಎಂದರು.
BIGG NEWS ; ‘ರಸಗೊಬ್ಬರ ಕ್ಷೇತ್ರ’ ಕೇಂದ್ರ ಸರ್ಕಾರದ ಪ್ರಾಮಾಣಿಕ ಪ್ರಯತ್ನಕ್ಕೆ ಸಾಕ್ಷಿಯಾಗಿದೆ : ಪ್ರಧಾನಿ ಮೋದಿ