ನವದೆಹಲಿ: ಎಲಾನ್ ಮಸ್ಕ್ ಟ್ವಿಟರ್ (Twitter) ಮಾಲೀಕರಾದ ನಂತ್ರ, ಟ್ವಿಟರ್ನಲ್ಲಿ ಕೆಲವು ಬದಲಾವಣೆ ತರುವುದನ್ನು ನೋಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಬ್ಲೂ ಟಿಕ್ (Blue Tick) ಬಂದಿದೆ. ಬ್ಲೂ ಟಿಕ್ ಪಡೆಯಬೇಕಾದ್ರೆ, ಇಂತಿಷ್ಟು ಹಣ ಪಾವತಿಸಲೇ ಬೇಕು. ಇದೀಗ ಬ್ಲೂ ಟಿಕ್ ಕೆಲವು ದೇಶಗಳಲ್ಲಿ ಆರಂಭವಾಗಿದೆ.
ಭಾರತಕ್ಕೂ ಬ್ಲೂ ಟಿಕ್ ಕಾಲಿಟ್ಟಿದ್ದು, ಬಳಕೆದಾರರು ತಿಂಗಳಿಗೆ 719ರೂ. ಪಾವತಿಸಬೇಕಾಗಿದೆ. ಇದೀಗ ಭಾರತದಲ್ಲಿನ ಬಳಕೆದಾರರು ʻಟ್ವಿಟರ್ ಬ್ಲೂ ಚಂದಾದಾರರಾಗಿʼ ಎಂಬ ಪಾಪ್ ಸಂದೇಶಗಳನ್ನು ಸ್ವೀಕರಿಸಿರುವ ಕೆಲವೊಂದು ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಟ್ವಿಟರ್ ಬ್ಲೂ ಚಂದಾದಾರಿಕೆ ಪ್ರಸ್ತುತ ಯುಎಸ್ ಮತ್ತು ಕೆನಡಾದಲ್ಲಿ ಲಭ್ಯವಿಲ್ಲ ಎಂದು ಬಹು ಬಳಕೆದಾರರು ವರದಿ ಮಾಡಿದ್ದಾರೆ. ಬ್ಲೂ ಟಿಕ್ ನೀಡುವ ಚಂದಾದಾರಿಕೆ ಸೇವೆಗೆ ಸೈನ್ ಅಪ್ ಮಾಡಲು ಬಯಸುವ ಕೆಲವರು, ಟ್ವಿಟರ್ ಅಪ್ಲಿಕೇಶನ್ನಲ್ಲಿ ಎಲ್ಲಿಯೂ ಆಯ್ಕೆಯನ್ನು ಕಂಡುಹಿಡಿಯಲಾಗಲಿಲ್ಲ ಎಂದು ಹೇಳಿದರು.
ಭಾರತದಲ್ಲಿ ಬೆರಳೆಣಿಕೆಯ ಟ್ವಿಟರ್ ಬಳಕೆದಾರರು ನಿನ್ನೆ ಬೆಳಿಗ್ಗೆ Twitter ಬ್ಲೂಗೆ ಸೈನ್ ಅಪ್ ಮಾಡುವ ಆಯ್ಕೆಯನ್ನು ಪಡೆದಿದ್ದಾರೆ ಎಂದು ವರದಿ ಮಾಡಿದ್ದಾರೆ.
Twitter Blue in india costs 719/- per month. pic.twitter.com/HKTtBbO00p
— Gaurav Agrawal (@Agrawalji_Tech) November 10, 2022
Twitter Blue started Working in India 😁 So For IOS user’s only ..!! #Thunivu pic.twitter.com/GbtErvd9Vn
— Rahman (@iamrahman_offl) November 10, 2022
ವರದಿಗಳ ಪ್ರಕಾರ, ಭಾರತೀಯ ಬಕೆದಾರರಿಗೆ ಟ್ವಿಟರ್ ಬ್ಲೂಗೆ ತಿಂಗಳಿಗೆ 719ರೂ ಶುಲ್ಕ ವಿಧಿಸಲಾಗುತ್ತದೆ. ಇದು ಯುನೈಟೆಡ್ ಸ್ಟೇಟ್ಸ್ನಲ್ಲಿನ ಚಂದಾದಾರಿಕೆಯ ವೆಚ್ಚ $8 (Rs 646.56) ಗಿಂತ ಹೆಚ್ಚಾಗಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಲಾದ ಸ್ಕ್ರೀನ್ಶಾಟ್ಗಳ ಪ್ರಕಾರ, ಟ್ವಿಟರ್ ಬ್ಲೂ ಪ್ರಸ್ತುತ ಐಫೋನ್ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಮುಂಬರುವ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗುವ ನಿರೀಕ್ಷೆಯಿದೆ.
Rain in Karnataka : ರಾಜ್ಯದಲ್ಲಿ ಇಂದು ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
BIG NEWS : ನಾಡಪ್ರಭು ಕೆಂಪೇಗೌಡರ ಕಲ್ಪನೆಯಡಿ ಬೆಂಗಳೂರಿನ ಸಮಗ್ರ ವಿಕಾಸ : ಪ್ರಧಾನಿ ನರೇಂದ್ರ ಮೋದಿ
Rain in Karnataka : ರಾಜ್ಯದಲ್ಲಿ ಇಂದು ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ