ಕೆಎನ್ಎನ್ ಡಿಜಿಟಲ್ ಡೆಸ್ಕ್ : ನೀವು ಏನು ಕಲಿಸುತ್ತೀರೋ ಅದನ್ನೇ ಮಾಡುತ್ತವೆ ಸಾಕುಪ್ರಾಣಿಗಳು. ತರಬೇತಿ ನೀಡಿದ ಪ್ರಾಣಿಗಳೆಂದರೆ ತುಸು ಹೆಚ್ಚೇ ಪಾಠವನ್ನು ಒಪ್ಪಿಸುತ್ತವೆ. ಅದರಲ್ಲಿಯೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ನಾಯಿ ಎಂದರೆ ಕೇಳಬೇಕೆ? ಅವುಗಳಿಗೆ ವಿಶೇಷವಾಗಿ ತರಬೇತಿ ನೀಡಿರಲಾಗುತ್ತದೆ. ಆದರೆ ಯೋಗವನ್ನೂ ಮಾಡಬಲ್ಲವು ಎಂಬ ವಿಷಯ ನಿಮಗೆ ಗೊತ್ತಿತ್ತೆ? ದೆಹಲಿಯ ಮೆಟ್ರೋ ಸ್ಟೇಷನ್ನಲ್ಲಿ ತರಬೇತಿ ನೀಡಿದ ವ್ಯಕ್ತಿಯೊಂದಿಗೆ ತಾನೂ ಯೋಗ ಮಾಡಿದೆ ಕಪ್ಪು ಲ್ಯಾಬ್ರಡಾರ್ ನಾಯಿ.
ಪ್ರಧಾನಿ ಮೋದಿ ಪ್ರಯಾಣಕ್ಕೆ ರಸ್ತೆ ಮಾಡಿದ್ದಾರೆಯೇ ಹೊರತು ಜನರ ಅನುಕೂಲಕ್ಕೆ ಮಾಡಿಲ್ಲ – DKS
ಯೋಗ ದಿನದಂದು ಪ್ರಾಣಿಪ್ರಿಯರು ತಮ್ಮ ಪ್ರಾಣಿಗಳ ಯಾವುದೋ ಒಂದು ಭಂಗಿಯ ಫೋಟೋ ತೆಗೆದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ಆ ದಿನವನ್ನು ಆಚರಿಸಿ ಸುಮ್ಮನಾಗುತ್ತಾರೆ. ಆದರೆ ಈ ನಾಯಿ ಹಾಗಲ್ಲ. ನಿತ್ಯವೂ ಇದು ತನ್ನ ತರಬೇತುದಾರನೊಂದಿಗೆ ಯೋಗಾಭ್ಯಾಸ ಮಾಡುತ್ತದೆ. ಇದಕ್ಕೆ ಸಾಕ್ಷಿಯೇ ಈ ವಿಡಿಯೋ.
View this post on Instagram
ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ಹೀಗೆ ಮೆಟ್ರೋ ಸ್ಟೇಷನ್ನಲ್ಲಿ ಯೋಗ ಮಾಡಿದೆ ಈ ನಾಯಿಯನ್ನು ಸಾರ್ವಜನಿಕರು ಅಚ್ಚರಿಯಿಂದ ವಿಡಿಯೋ ಮಾಡಿಕೊಂಡಿದ್ದಾರೆ. ಅನೇಕರು ಈ ನಾಯಿಯ ಶಿಸ್ತು ಮತ್ತು ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಪ್ರಯಾಣಕ್ಕೆ ರಸ್ತೆ ಮಾಡಿದ್ದಾರೆಯೇ ಹೊರತು ಜನರ ಅನುಕೂಲಕ್ಕೆ ಮಾಡಿಲ್ಲ – DKS
ಬೇಕಾದ ಆಹಾರವನ್ನು ಕೊಡುವುದು, ವಾಕಿಂಗ್ ಕರೆದುಕೊಂಡು ಹೋಗುವುದು, ಮುದ್ದು ಮಾಡುವುದು, ವಿಡಿಯೋ ಮಾಡುವುದು ಎಲ್ಲ ಸರಿ. ಅದರೆ ಒಂದು ಕೌಶಲವನ್ನು ಕಲಿಸಿಕೊಡುವುದಿದೆಯಲ್ಲ, ಮನುಷ್ಯನ ಕೌಶಲವನ್ನು ಪ್ರಾಣಿಗಳು ಅಳವಡಿಸಿಕೊಳ್ಳುವುದಿದೆಯಲ್ಲ ಅದು ಅಷ್ಟು ಸುಲಭವಲ್ಲ. ಕಲಿಯುವವರಿಗೂ ಕಲಿಸುವವರಿಗೂ ಅಷ್ಟೇ ತಾಳ್ಮೆ ಪ್ರೀತಿ ಬೇಕಾಗುತ್ತದೆ. ಅದೊಂದು ಶ್ರದ್ಧಾಬಂಧ.
ಪ್ರಧಾನಿ ಮೋದಿ ಪ್ರಯಾಣಕ್ಕೆ ರಸ್ತೆ ಮಾಡಿದ್ದಾರೆಯೇ ಹೊರತು ಜನರ ಅನುಕೂಲಕ್ಕೆ ಮಾಡಿಲ್ಲ – DKS