ಹುಬ್ಬಳ್ಳಿ: ಮೈಸೂರಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ರೆ, ಧ್ವಂಸ ಮಾಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ
BIG NEWS: ಕೆಂಪೇಗೌಡರ ಪ್ರತಿಮೆಯ ಖಡ್ಗದ ತೂಕವೇ 4 ಟನ್!: ಇಲ್ಲಿದೆ ಪ್ರತಿಮೆಯ ಇನ್ನೂ ಹಲವು ವಿಶೇಷತೆಗಳ ಮಾಹಿತಿ
ಭಾರತ ಮತ್ತು ಪಾಕಿಸ್ತಾನ ಧರ್ಮದ ಆಧಾರದಲ್ಲಿ ಬೇರೆಯಾದ ರಾಷ್ಟ್ರಗಳು. ಪಾಕಿಸ್ತಾನ ಹೇಗೆ ಮುಸ್ಲಿಮರಿಗೆ ಸೀಮಿತವಾಗಿದೆಯೋ ಹಾಗೆ ಭಾರತ ಹಿಂದೂ ರಾಷ್ಟ್ರ. ಆದರೆ ಸಂವಿಧಾನದಲ್ಲಿ ಬಲವಂತವಾಗಿ ಜಾತ್ಯಾತೀತ ಶಬ್ದ ಸೇರಿಸಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು 100 ಅಡಿ ಮೂರ್ತಿಯನ್ನು ಮೈಸೂರಿನಲ್ಲಿ (Mysuru) ಪ್ರತಿಷ್ಠಾಪನೆ ಮಾಡುತ್ತೇವೆಂಬ ಶಾಸಕ ತನ್ವೀರ್ ಸೇಠ್ (Tanveer Sait) ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಮುಸ್ಲಿಂ ಸಮುದಾಯದಲ್ಲಿ (Muslim Community) ಮೂರ್ತಿ ಪೂಜೆ ಇಲ್ಲ ಅದು ಹೇಗೆ ನೀವು ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೀರಿ? ಇದು ಧರ್ಮ ವಿರೋಧಿ ಹೇಳಿಕೆ ಹೀಗಾಗಿ ಸೇಠ್ ವಿರುದ್ಧ ಫತ್ವಾ ಹೊರಡಿಸಬೇಕು.
BIG NEWS: ಕೆಂಪೇಗೌಡರ ಪ್ರತಿಮೆಯ ಖಡ್ಗದ ತೂಕವೇ 4 ಟನ್!: ಇಲ್ಲಿದೆ ಪ್ರತಿಮೆಯ ಇನ್ನೂ ಹಲವು ವಿಶೇಷತೆಗಳ ಮಾಹಿತಿ
ಈ ರೀತಿ ಹೇಳಿಕೆ ನೀಡಿದ್ದ ತನ್ವೀರ್ ಸೇಠ್ನನ್ನು ಮುಸ್ಲಿಮರೇ ಗಲ್ಲಿಗೇರಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ. ಒಂದು ವೇಳೆ ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ. ಭಾರತ ಮತ್ತು ಪಾಕಿಸ್ತಾನ ಧರ್ಮದ ಆಧಾರದಲ್ಲಿ ಬೇರೆಯಾದ ರಾಷ್ಟ್ರಗಳು, ಪಾಕಿಸ್ತಾನ ಹೇಗೆ ಮುಸ್ಲಿಂರಿಗೆ ಸೀಮಿತವೋ, ಹಾಗೆ ಭಾರತ ಹಿಂದೂ ರಾಷ್ಟ್ರ. ಸಂವಿಧಾನದಲ್ಲಿ ಬಲವಂತವಾಗಿ ಜಾತ್ಯಾತೀತ ಶಬ್ದ ಸೇರಿಸಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನಲೆ, ಪ್ರಮೋದ್ ಮುತಾಲಿಕ್ ಗೋ ಮೂತ್ರ ಸಿಂಪಡಿಸಿ ಸ್ವಚ್ಚಗೊಳಿಸಿದ್ದಾರೆ. ನಿನ್ನೆ ಟಿಪ್ಪು ಜಯಂತಿ ಆಚರಣೆ ಮಾಡಿದ್ದರಿಂದ ಈದ್ಗಾ ಮೈದಾನ ಅಪವಿತ್ರವಾಗಿದೆ. ಹಾಗಾಗಿ ಕನಕ ಜಯಂತಿ ಆಚರಣೆಗೂ ಮುನ್ನ ಈದ್ಗಾ ಮೈದಾನ ಶುಚಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಳಿಕ ಶ್ರೀರಾಮಸೇನೆಯಿಂದ ಕನಕದಾಸ ಜಯಂತಿ ಆಚರಿಸಲಾಗಿದೆ.
BIG NEWS: ಕೆಂಪೇಗೌಡರ ಪ್ರತಿಮೆಯ ಖಡ್ಗದ ತೂಕವೇ 4 ಟನ್!: ಇಲ್ಲಿದೆ ಪ್ರತಿಮೆಯ ಇನ್ನೂ ಹಲವು ವಿಶೇಷತೆಗಳ ಮಾಹಿತಿ