ಸಿಂಗಾಪುರ: ಭಾರತ ಮತ್ತು ಸಿಂಗಾಪುರಗಳು ತಮ್ಮ ವೇಗದ ಪಾವತಿ ವ್ಯವಸ್ಥೆಗಳಾದ UPI ಮತ್ತು PayNow ಅನ್ನು ಜೋಡಿಸಲು ತಾಂತ್ರಿಕ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಎರಡು ದೇಶಗಳ ನಡುವೆ ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ನಿಧಿ ವರ್ಗಾವಣೆಯನ್ನು ಸಕ್ರಿಯಗೊಳಿಸಲು ಈ ಕ್ರಮವು ವಲಸೆ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಸಿಂಗಾಪುರದ ಕೇಂದ್ರ ಬ್ಯಾಂಕ್, ಸಿಂಗಾಪುರದ ಹಣಕಾಸು ಪ್ರಾಧಿಕಾರ (MAS), ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮತ್ತು PayNow ಅನ್ನು ಲಿಂಕ್ ಮಾಡುವಲ್ಲಿ ಕೆಲಸ ಮಾಡುತ್ತಿದೆ. ಇದು ಶೀಘ್ರದಲ್ಲೇ ಹೊರತರುವ ನಿರೀಕ್ಷೆಯಿದೆ.
“Singapore ತನ್ನ PayNow ಅನ್ನು UPI ನೊಂದಿಗೆ ಕನೆಕ್ಟ್ ಮಾಡಲು ಬಯಸುತ್ತದೆ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಆ ಯೋಜನೆಯು ಮುಕ್ತಾಯಗೊಳ್ಳುತ್ತದೆ. ಸಿಂಗಾಪುರದಲ್ಲಿರುವ ಯಾರಾದರೂ ಭಾರತದಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಹಣವನ್ನು ಕಳುಹಿಸಲು ಇದು ಸಾಧ್ಯವಾಗುತ್ತದೆ. ಯೋಜನೆಯನ್ನು ಅಧಿಕೃತಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಘೋಷಿಸುವ ಸಾಧ್ಯತೆಯಿದೆ” ಎಂದು ಸಿಂಗಾಪುರದಲ್ಲಿರುವ ಭಾರತದ ಹೈ ಕಮಿಷನರ್ ಪಿ ಕುಮಾರನ್ ಹೇಳಿದ್ದಾರೆ.
PayNow ಭಾರತದ ಸ್ವದೇಶಿ ಕಾರ್ಡ್ ಪಾವತಿ ನೆಟ್ವರ್ಕ್ RuPay ಅನ್ನು ಹೋಲುತ್ತದೆ. ಇದರ ಹೊರತಾಗಿ, PayNow ಆಸಿಯಾನ್ನ ಇತರ ದೇಶಗಳೊಂದಿಗೆ ಸಂಪರ್ಕವನ್ನು ಹೊಂದಿದೆ.