ಉತ್ತರ ಪ್ರದೇಶ: ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲ, ನೀನು ಬಂಜೆ ಎಂಬ ನಿಂದನೆಯಿಂದ ಬೇಸತ್ತ ಉತ್ತರ ಪ್ರದೇಶದ ಮಹಿಳೆಯೊಬ್ಬರು ಪ್ಲಾಸ್ಟಿಕ್ ಗೊಂಬೆಯನ್ನು ಬಳಸಿ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದು, ಕೊನೆಗೆ ಸತ್ಯಾಂಶ ಹೊರ ಬಿದ್ದಿರುವ ಘಟನೆ ನಡೆದಿದೆ.
ಮಹಿಳೆ ಮದುವೆಯಾಗಿ 18 ವರ್ಷಗಳಾದ್ರೂ ಮಕ್ಕಳಾಗಲಿಲ್ಲ ಎಂದು ಬೇರೆಯವರ ಮಾತಿನಿಂದ ಬೇಸತ್ತ ಮಹಿಳೆಯೊಬ್ಬರು, ಪ್ಲಾಸ್ಟಿಕ್ ಗೊಂಬೆಯನ್ನು ಬಳಸಿ, ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದಳು. ನಂತ್ರ, ಆಕೆ ತಾನು ಅಕಾಲಿಕ ಮಗುವಿಗೆ ಜನ್ಮ ನೀಡುವುದಾಗಿ ಹೇಳಿಕೊಂಡಿದ್ದಾಳೆ. ಈ ವೇಳೆ, ಆಕೆ ಮಾಡಿದ ಪ್ಲಾನ್ ಎಲ್ಲರಿಗೂ ಗೊತ್ತಾಗಿದೆ.
ಮಹಿಳೆ ಪ್ಲಾಸ್ಟಿಕ್ ಗೊಂಬೆಯನ್ನು ಬಳಸಿ ಗರ್ಭಧಾರಣೆಯನ್ನು ನಕಲಿಸಿದ್ದಾಳೆ. ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ಮಹಿಳೆ ತನ್ನ ಗರ್ಭಧಾರಣೆಯನ್ನು ನಕಲಿ ಮಾಡಿದ್ದಾಳೆ. 6 ತಿಂಗಳ ನಂತರ, ಅವಳು ಇದ್ದಕ್ಕಿದ್ದಂತೆ ಹೊಟ್ಟೆ ನೋವಿನ ಬಗ್ಗೆ ತನ್ನ ಮನೆಯವರಿಗೆ ಹೇಳಿದ್ದಾಳೆ. ಇದಾದ ಕೆಲವೇ ಹೊತ್ತಿಗೆ ತಾನು ಅಕಾಲಿಕ ಮಗುವಿಗೆ ಜನ್ಮ ನೀಡಿದ್ದೇನೆ ಎಂದಿದ್ದಾಳೆ. ಇದ್ರಿಂದ ಗಅಬರಿಗೊಂಡ ಆಕೆಯ ಕುಟುಂಬ ನಕಲಿ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ತಪಾಸಣೆಗಾಗಿ ಕರೆದೊಯ್ದಿದ್ದಾರೆ.
ಆರೋಗ್ಯ ಕೇಂದ್ರದ ವೈದ್ಯರು ನಕಲಿ ಮಗುವನ್ನು ಪರೀಕ್ಷಿಸಿ, ಇದು ನಿಜವಾದ ಮಗು ಅಲ್ಲ. ಇದು ಪ್ಲಾಸ್ಟಿಕ್ ಗೊಂಬೆ ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯರು ಗರ್ಭಧಾರಣೆಗೆ ಸಂಬಂಧಿಸಿದ ಇತರ ಪೇಪರ್ಗಳು ಮತ್ತು ಎಕ್ಸ್-ರೇಗಳನ್ನು ಸಹ ಪರಿಶೀಲಿಸಿದರು. ಪೇಪರ್ ಮತ್ತು ಎಕ್ಸ್ ರೇ ಕೂಡ ನಕಲಿ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ.
ಹೊಟ್ಟೆಯ ಸೋಂಕುಗಳಿಗೆ ಸಂಬಂಧಿಸಿದ ಚಿಕಿತ್ಸೆಗಾಗಿ ಮಹಿಳೆ ನಿಯಮಿತವಾಗಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು ಎಂದು ವೈದ್ಯಕೀಯ ಅಧೀಕ್ಷಕ ಡಾ ಹರ್ಷಿತ್ ಹೇಳಿದ್ದಾರೆ. ಮಹಿಳೆಯು ಗರ್ಭಧಾರಣೆ ಸಂಬಂಧಿತ ತಪಾಸಣೆಗಾಗಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿಲ್ಲ ಎಂದು ಹರ್ಷಿತ್ ತಿಳಿಸಿದ್ದಾರೆ.
ವೈದ್ಯರು ಹೇಳಿದರು, ಮಹಿಳೆಯು ಮದುವೆಯಾಗಿ ಬಹಳ ಸಮಯದಿಂದ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಬಂಜೆತನದ ನಿಂದೆಗಳನ್ನು ತೊಡೆದುಹಾಕಲು, ಅವಳು ಈ ಕಥೆಯನ್ನು ಕಟ್ಟಿದ್ದಾಳೆ ಎಂದಿದ್ದಾರೆ.
BIG NEWS: ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ನಮ್ಮ ದೇಶದಲ್ಲೇ ಶಿಕ್ಷಣ ಮುಂದುವರೆಸಬಹುದು: ರಷ್ಯಾ
ಮರುಮದುವೆಯಾದ ವಿಚ್ಛೇದಿತ ದಂಪತಿಗಳು: ಇದಕ್ಕೆ ಕಾರಣ ʻEmailʼ… ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ