ಕೆಎನ್ಎನ್ಡಿಜಿಟಲ್ ಡೆಸ್ಕ್ : ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾವನ್ನ ಇಂಗ್ಲೆಂಡ್ ಸೋಲಿಸಿದೆ. ಸಹಜವಾಗಿ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುಡಿಯಾಗಿದ್ದು, ಟೀಂ ಇಂಡಿಯಾವನ್ನ ಟೀಕಿಸುತ್ತಿದ್ದಾರೆ.ಅದೇ ಸಮಯದಲ್ಲಿ, ಭಾರತದ ಸೋಲಿನ ನಂತ್ರ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದು, ಭಾರತೀಯ ಅಭಿಮಾನಿಗಳನ್ನ ಕೆರಳಿಸಿದೆ.
ಟೀಂ ಇಂಡಿಯಾ ಸೋಲಿನಿಂದ ಕಂಗೆಟ್ಟಿರುವ ಭಾರತೀಯ ಅಭಿಮಾನಿಗಳು ತಮ್ಮ ಕ್ರಿಕೆಟಿಗರ ನ್ಯೂನತೆಯನ್ನೂ ಲೆಕ್ಕ ಹಾಕುತ್ತಿದ್ದಾರೆ. ಆದ್ರೆ, ಪಾಕಿಸ್ತಾನ ಪ್ರಧಾನಿಯ ಟ್ವೀಟ್’ಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಇಷ್ಟಕ್ಕೂ ಪಾಕ್ ಪ್ರಧಾನಿ ಟ್ವೀಟ್ ಮಾಡಿದ್ದಾದ್ರೂ ಏನು.? ಭಾರತೀಯ ಅಭಿಮಾನಿಗಳು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ.? ಅನ್ನೋದನ್ನೋದಿ.
ಶಹಬಾಜ್ ಷರೀಫ್ ಟ್ವೀಟ್’ನಲ್ಲಿ ಏನಿದೆ.?
ಇಂಗ್ಲೆಂಡ್ ವಿರುದ್ಧ ಭಾರತ ಸೋತ ನಂತರ ಪ್ರಪಂಚದಾದ್ಯಂತ ಅನೇಕ ಟ್ವೀಟ್ಗಳು ಬಂದವು. ಈ ಪೈಕಿ ಒಂದು ಟ್ವೀಟ್ ಭಾರತೀಯ ಅಭಿಮಾನಿಗಳ ಗಮನ ಸೆಳೆದಿದೆ. ಇದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಟ್ವೀಟ್. ಶಹಬಾಜ್ ಷರೀಫ್ ತಮ್ಮ ಟ್ವೀಟ್ನಲ್ಲಿ, ‘ಸೋ, ಈ ಭಾನುವಾರ, ಇದು 152/0 ವಿರುದ್ಧ 170/0 ಆಗಿರುತ್ತದೆ’ ಎಂದು ಬರೆದಿದ್ದಾರೆ.
ವಾಸ್ತವವಾಗಿ, ಈ ಸ್ಕೋರ್ಲೈನ್ನೊಂದಿಗೆ, ಕಳೆದ ಟಿ20 ವಿಶ್ವಕಪ್ನ ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಉಲ್ಲೇಖಿಸಿದ್ದಾರೆ. ಗಮನಾರ್ಹವೆಂದರೆ ಆಗ ಪಾಕಿಸ್ತಾನ ಹತ್ತು ವಿಕೆಟ್ಗಳಿಂದ ಭಾರತವನ್ನ ಸೋಲಿಸಿತ್ತು. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ಗೆ 151 ರನ್ ಗಳಿಸಿತ್ತು. ಅಲ್ಲಿಯೇ,ಪಾಕಿಸ್ತಾನದ ಆರಂಭಿಕರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಔಟಾಗದೆ 10 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಆಗ ಪಾಕಿಸ್ತಾನದ ಅಂತಿಮ ಸ್ಕೋರ್ 152/0 ಆಗಿತ್ತು.
ಮತ್ತೊಂದೆಡೆ, ಇಂದಿನ ಪಂದ್ಯದ ಬಗ್ಗೆ ಮಾತನಾಡುವುದಾದ್ರೆ, ಭಾರತ ನೀಡಿದ್ದ 169 ರನ್ಗಳ ಗುರಿಯನ್ನ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಸಾಧಿಸಿತು. ಇಂಗ್ಲೆಂಡ್ನ ಅಂತಿಮ ಸ್ಕೋರ್ 170/0. ಈ ಮೂಲಕ ಭಾನುವಾರ ನಡೆಯಲಿರುವ ಫೈನಲ್’ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ.
ಪ್ರಧಾನಿ ತಮ್ಮ ಟ್ವೀಟ್ನಲ್ಲಿ ಎರಡೂ ದೇಶಗಳ ಹೆಸರನ್ನ ಬರೆಯದೇ ಅಂಕಪಟ್ಟಿ ಬರೆದಿರುವುದು ಭಾರತಕ್ಕೆ ನೋವು ಹೆಚ್ಚಿಸುವ ವಿಚಾರ.ಈ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, “ಸೊಳ್ಳೆಗಳನ್ನ ತಪ್ಪಿಸಲು, ಸೊಳ್ಳೆ ಪರದೆಗಳನ್ನ ತಯಾರಿಸಲು ಸಾಧ್ಯವಾಗುತ್ತಿಲ್ಲ. ಅಂತಹವರು ಭಾರತವನ್ನ ಗೇಲಿ ಮಾಡ್ತಾರೆ” ಎಂದು ಬರೆದಿದ್ದಾರೆ. ಇನ್ನು ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿಭಜನೆಯ ನಂತರ ಮಾಡಿದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು “ಸ್ವಲ್ಪ ಕೆಲಸ ಮಾಡಿ ಸಾರ್” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು “ಒಂದು ದೇಶದ ಪ್ರಧಾನಿ ಈ ರೀತಿ ಟ್ವೀಟ್ ಮಾಡುತ್ತಾರೆ ಆ ದೇಶದ ಸ್ಥಿತಿ ಏನಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು” ಎಂದು ಕಾಲೇಳೆದಿದ್ದಾರೆ. ಇನ್ನು ಅದೇ ಸಮಯದಲ್ಲಿ, ಕೆಲವರು ಈ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಸೋತಿರುವ ಬಗ್ಗೆ ಪಾಕಿಸ್ತಾನದ ಪ್ರಧಾನಿಗೆ ನೆನಪಿಸಿದ್ದಾರೆ.
ಪಾಕ್ ಪ್ರಧಾನಿಯ ಈ ಟ್ವೀಟ್ ವೈರಲ್
ಪಾಕ್ ಪ್ರಧಾನಿಯ ಈ ಟ್ವೀಟ್ ಭಾರೀ ವೈರಲ್ ಆಗುತ್ತಿದೆ. ಟ್ವೀಟ್ ಮಾಡಿದ ಕೇವಲ ಮೂರು ಗಂಟೆಗಳಲ್ಲಿ ಸುಮಾರು 9 ಸಾವಿರ ಕಾಮೆಂಟ್ಗಳು, 13 ಸಾವಿರಕ್ಕೂ ಹೆಚ್ಚು ರೀಟ್ವೀಟ್ಗಳು ಮತ್ತು 71 ಸಾವಿರ ಲೈಕ್’ಗಳನ್ನು ಸ್ವೀಕರಿಸಲಾಗಿದೆ. ಈ ಟ್ವೀಟ್ಗಳಲ್ಲಿ ಹೆಚ್ಚಿನವು ಭಾರತೀಯ ಅಭಿಮಾನಿಗಳಿಂದ ಬಂದಿವೆ. ಇನ್ನು ಶಹಬಾಜ್ ಷರೀಫ್ ಟ್ವೀಟ್ಗೆ ಹಲವು ಮೀಮ್ಗಳು, ವಿಡಿಯೋಗಳು ಮತ್ತು ಫೋಟೋಗಳು ಪ್ರತ್ಯುತ್ತರವಾಗಿವೆ.
So, this Sunday, it’s:
152/0 vs 170/0
🇵🇰 🇬🇧 #T20WorldCup
— Shehbaz Sharif (@CMShehbaz) November 10, 2022
BIGG NEWS : ‘ವೀರ ನಾರಿ’ಯರಿಗಾಗಿ ಸೇನೆ ಮಹತ್ವದ ಹೆಜ್ಜೆ ; ‘ವೀರಾಂಗಣ ಸೇವಾ ಕೇಂದ್ರ’ ಆರಂಭ
ನ.14ಕ್ಕೆ ‘ಜಿ-20 ಶೃಂಗಸಭೆ’ಗಾಗಿ ಇಂಡೋನೇಷ್ಯಾಕ್ಕೆ ‘ಪ್ರಧಾನಿ ಮೋದಿ’, ಭಾರತೀಯ ಸಮುದಾಯದ ಭೇಟಿ