ನವದೆಹಲಿ : ಬಾಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇದೇ ವೇಳೆ ಇಂಡೋನೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರನ್ನ ಪ್ರಧಾನಿ ಭೇಟಿ ಮಾಡಲಿದ್ದಾರೆ. 17ನೇ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ನವೆಂಬರ್ 14 ರಿಂದ 16 ರವರೆಗೆ ಇಂಡೋನೇಷ್ಯಾದ ಬಾಲಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ (ನವೆಂಬರ್ 10) ತಿಳಿಸಿದ್ದಾರೆ.
ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ ಮತ್ತು ಡಿಜಿಟಲ್ ರೂಪಾಂತರ ಸೇರಿದಂತೆ ಜಿ20 ಶೃಂಗಸಭೆಯ ಕಾರ್ಯಸೂಚಿಯ ಭಾಗವಾಗಿ ಮೂರು ಕೆಲಸದ ಅವಧಿಗಳನ್ನ ನಡೆಸಲಾಗುವುದು ಎಂದು ಅರಿಂದಮ್ ಬಾಗ್ಚಿ ಹೇಳಿದರು. ಪ್ರಧಾನಿ ಮೋದಿ ಅವರು ಇಂಡೋನೇಷ್ಯಾದಲ್ಲಿ ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿಯಾಗಲಿದ್ದಾರೆ.
ಭಾರತವು ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದೆ.!
ಇಂಡೋನೇಷ್ಯಾದ G20 ಅಧ್ಯಕ್ಷೀಯತೆಯು 1 ಡಿಸೆಂಬರ್ 2021ರಂದು ಪ್ರಾರಂಭವಾಯಿತು. ಶೃಂಗಸಭೆಯ ಮುಕ್ತಾಯದ ಅಧಿವೇಶನದಲ್ಲಿ, ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೊ ಅವರು ಸಾಂಕೇತಿಕವಾಗಿ ಜಿ20 ಅಧ್ಯಕ್ಷ ಸ್ಥಾನವನ್ನ ಪ್ರಧಾನಿ ಮೋದಿಗೆ ಹಸ್ತಾಂತರಿಸಲಿದ್ದಾರೆ. ಭಾರತವು ಡಿಸೆಂಬರ್ 1 ರಿಂದ ಜಿ-20 ಅಧ್ಯಕ್ಷತೆ ವಹಿಸಿಕೊಳ್ಳಲಿದೆ.
BREAKING NEWS : ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಹುದ್ದೆಯಿಂದ ರಾಜ್ಯಪಾಲ ‘ಆರಿಫ್ ಖಾನ್’ ವಜಾಗೊಳಿಸಿದ ಕೇರಳ ಸರ್ಕಾರ
BIGG NEWS : ‘ವೀರ ನಾರಿ’ಯರಿಗಾಗಿ ಸೇನೆ ಮಹತ್ವದ ಹೆಜ್ಜೆ ; ‘ವೀರಾಂಗಣ ಸೇವಾ ಕೇಂದ್ರ’ ಆರಂಭ