ಮಡಿಕೇರಿ : ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನಾ ಆರೋಗ್ಯ ಕರ್ನಾಟಕ ಕಾರ್ಡ್ನ ಬಗ್ಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಒನ್ ಕೇಂದ್ರಗಳಲ್ಲಿ ನಡೆಯುವ ಕಾರ್ಡ್ಗಳ ವಿತರಣೆಯು ಮಡಿಕೇರಿ ತಾಲ್ಲೂಕಿನ ಮೂರ್ನಾಡು ಪ್ರಾ.ಆ.ಕೇಂದ್ರ ವ್ಯಾಪ್ತಿಯ ಕಾಂತೂರು ಮೂರ್ನಾಡು. ಮರಗೋಡು, ಅರೆಕಾಡು, ಮೇಕೇರಿ, ಹಾಕತ್ತೂರು, ಕಡಗದಾಳು, ಹೊದ್ದೂರು ಗ್ರಾಮ ಪಂಚಾಯಿತಿಯ ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಡ್ಗಳನ್ನು ವಿತರಿಸಲಾಗುತ್ತದೆ.
BIGG NEWS: ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ; ಹಲವು ರೈಲುಗಳ ಸಂಚಾರ ವ್ಯತ್ಯಯ
ಭಾಗಮಂಡಲ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಭಾಗಮಂಡಲ, ಕುಂದಚೇರಿ, ಅಯ್ಯಂಗೇರಿ, ಕರಿಕೆ, ಬಲ್ಲಮಾವಟಿ, ಎಮ್ಮೆಮಾಡು ಗ್ರಾ.ಪಂ.ಗ್ರಾಮ ಒನ್ ಕೇಂದ್ರಗಳಲ್ಲಿ, ಸಂಪಾಜೆ ಪ್ರಾ.ಆ,ಕೇಂದ್ರ ವ್ಯಾಪ್ತಿಯ ಮದೆ, ಸಂಪಾಜೆ, ಚೆಂಬು, ಪೆರಾಜೆ, ಗಾಳಿಬೀಡು ಗ್ರಾ.ಪಂ. ಗ್ರಾಮ ಒನ್ ಕೇಂದ್ರಗಳಲ್ಲಿ, ಚೆಯ್ಯಂಡಾಣೆ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಕಕ್ಕಬ್ಬೆ, ಪಾರಾಣೆ, ನಾಪೋಕ್ಲು, ನರಿಯಂದಡ ಗ್ರಾ.ಪಂ. ಗ್ರಾಮ ಒನ್ ಕೇಂದ್ರಗಳಲ್ಲಿ, ಚೇರಂಬಾಣೆ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಬೆಟ್ಟಗೇರಿ, ಬೇಂಗೂರು, ಗಾಳಿಬೀಡು, ಕೆ.ನಿಡುಗಣೆ ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಡ್ಗಳನ್ನು ವಿತರಿಸಲಾಗುತ್ತದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಸುಂಟಿಕೊಪ್ಪ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಸುಂಟಿಕೊಪ್ಪ, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕೊಡಗರಹಳ್ಳಿ, ಕಂಬಿಬಾಣೆ, ಕೆದಕಲ್, ಹರದೂರು ಗ್ರಾ.ಪಂ. ಗ್ರಾಮ ಒನ್ ಕೇಂದ್ರಗಳಲ್ಲಿ, ಪ್ರಾ.ಆ.ಕೇಂದ್ರ ಚೆಟ್ಟಳ್ಳಿ ವ್ಯಾಪ್ತಿಯ ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಕಂಬಿಬಾಣೆ, ವಾಲ್ನೂರು ಗ್ರಾಮಪಂಚಾಯಿತಿಯ ಗ್ರಾಮ ಒನ್ ಕೇಂದ್ರಗಳಲ್ಲಿ, ಪ್ರಾ.ಆ.ಕೇಂದ್ರ ಹೆಬ್ಬಾಲೆ ವ್ಯಾಪ್ತಿಯ ಹೆಬ್ಬಾಲೆಯಲ್ಲಿ ಗ್ರಾ.ಪಂ. ಗ್ರಾಮ ಒನ್ ಕೇಂದ್ರಗಳಲ್ಲಿ ಹಾಗೂ ಪ್ರಾ.ಆ.ಕೇಂದ್ರ ಕೂಡಿಗೆ ವ್ಯಾಪ್ತಿಯ ಕೂಡುಮಂಗಳೂರು, ಕೂಡಿಗೆ, ಮುಳ್ಳುಸೋಗೆ, ಕುಶಾಲನಗರ ಗ್ರಾಮಪಂಚಾಯಿತಿಯ ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಡ್ ನೀಡಲಾಗುತ್ತದೆ.
ಪ್ರಾ.ಆ.ಕೇಂದ್ರ ಗೌಡಳ್ಳಿ ವ್ಯಾಪ್ತಿಯ ಗೌಡಳ್ಳಿ, ದೊಡ್ಡಮಳ್ತೆ, ಚೌಡ್ಲು, ನಿಡ್ತ, ನೀರುಗಳಲೆ, ದೊಡ್ಡಮಲ್ತೆಗಳಲ್ಲಿ ಗ್ರಾಮಪಂಚಾಯಿತಿಯ ಗ್ರಾಮ ಒನ್ ಕೇಂದ್ರಗಳಲ್ಲಿ, ಆಲೂರು ಸಿದ್ದಾಪುರ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಆಲೂರು ಸಿದ್ದಾಪುರ, ನಿಡ್ತ, ಗಣಗೂರು ಗ್ರಾ,ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ ಹಾಗೂ ಪ್ರಾ.ಆ.ಕೇಂದ್ರ ಬಿಳಿಗೇರಿ ವ್ಯಾಪ್ತಿಯ ಕಿರಗಂದೂರು, ಬೇಳೂರು, ಐಗೂರು ನೀರ್ಗಳಲೆ ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ, ಸೂರ್ಲಬ್ಬಿ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಕಿರಗಂದೂರು, ಗರ್ವಾಲೆ, ಸೂರ್ಲಬ್ಬಿಗಳಲ್ಲಿ, ಮಾದಾಪುರ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಮಾದಾಪುರ, ಹರದೂರು ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಡ್ ವಿತರಿಸಲಾಗುತ್ತದೆ.
ಪ್ರಾ.ಆ.ಕೇಂದ್ರ ಕೊಡ್ಲಿಪೇಟೆ ವ್ಯಾಪ್ತಿಯ ನಂದಿಪುರ, ಕೊಡ್ಲಿಪೇಟೆ, ಬ್ಯಾಡಗೊಟ್ಟ, ಬೆಸೂರು, ಶನಿವಾರಸಂತೆ, ದುಂಡಳ್ಳಿ, ಹಂಡ್ಲಿಗಳಲ್ಲಿ ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ, ಪ್ರಾ.ಆ.ಕೇಂದ್ರ ಶಿರಂಗಾಲ ವ್ಯಾಪ್ತಿಯ ಶಿರಂಗಾಲ, ತೊರೆನೂರು ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ, ಪ್ರಾ.ಆ.ಕೇಂದ್ರ ನಂಜರಾಯಪಟ್ಟಣ ವ್ಯಾಪ್ತಿಯ ನಂಜರಾಯಪಟ್ಟಣ, ವಾಲ್ನೂರು, ಗುಡ್ಡೆಹೊಸೂರು ಗ್ರಾಮಪಂಚಾಯಿತಿಯ ಗ್ರಾಮ ಒನ್ ಕೇಂದ್ರಗಳಲ್ಲಿ ಹಾಗೂ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಬೆಟ್ಟದಳ್ಳಿ, ಶಾಂತಳ್ಳಿ ತೋಳೂರುಶೆಟ್ಟಳ್ಳಿ, ಹಾನಗಲ್ಲು ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ ನಡೆಯಲಿದೆ.
ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ ಆರೋಗ್ಯ ಕೇಂದ್ರ ವ್ಯಾಪ್ತಿಯ ಹುದಿಕೇರಿ, ಬಲ್ಯಮಂಡೂರು, ಅರವತ್ತೊಕ್ಲು, ಪೊನ್ನಂಪೇಟೆ, ಕಿರುಗೂರು, ಗೋಣಿಕೊಪ್ಪಗಳಲ್ಲಿ, ಕಾಕೋಟುಪರಂಬು ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾಕೋಟುಪರಂಬು ಕದನೂರು, ಕೆದಮಳ್ಳೂರು, ಚೆಂಬೆಬೆಳ್ಳೂರುಗಳಲ್ಲಿ ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ ನಡೆಯಲಿದೆ.
ಕಣ್ಣಂಗಾಲ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಣ್ಣಂಗಾಲ, ಅಮ್ಮತ್ತಿ, ಹೊಸೂರು, ಕಾರ್ಮಾಡು, ಬಿಳುಗುಂದ, ಚೆಂಬೆಬೆಳ್ಳೂರು, ಹಾಲುಗುಂದಗಳಲ್ಲಿ ಗ್ರಾ.ಪಂ.ಗ್ರಾಮ ಒನ್ ಕೇಂದ್ರಗಳಲ್ಲಿ, ಕುಟ್ಟಂಧಿ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಆರ್ಜಿ, ಬೇಟೋಳಿ, ಬಿಟ್ಟಂಗಾಲ, ಹತ್ತೂರು, ಕೈಕೇರಿ, ಗೋಣಿಕೊಪ್ಪಲ್, ಬಿ-ಶೆಟ್ಟಿಗೇರಿ, ಹೊಸೂರುಗಳಲ್ಲಿ ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ, ಬಿರುನಾಣಿ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಟಿ.ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿಗಳಲ್ಲಿ ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ, ಶ್ರೀಮಂಗಲ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಶ್ರೀಮಂಗಲ, ಕಾನೂರು, ನಾಲ್ಕೇರಿ, ಬಲ್ಯಮಂಡೂರುಗಳಲ್ಲಿ ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ, ಕಾನೂರು ಪ್ರಾ.ಆ.ಕೇಂದ್ರ ವ್ಯಾಪ್ತಿಯ ಕುಟ್ಟ, ಕೆಂಬುಕೊಲ್ಲಿ, ಕಾನೂರು ನಾಲ್ಕೇರಿ, ಪೊನ್ನಪ್ಪಸಂತೆ ಗ್ರಾ.ಪಂ.ಗ್ರಾಮ ಒನ್ ಕೇಂದ್ರಗಳಲ್ಲಿ ಹಾಗೂ ಬಾಳೆಲೆ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ, ಕಿರುಗೂರು, ಮಾಯಮುಡಿ ಗ್ರಾ.ಪಂ.ಯ ಗ್ರಾಮ ಒನ್ ಕೇಂದ್ರಗಳಲ್ಲಿ ನಡೆಯಲಿದೆ.
ತಿತಿಮತಿ ಪ್ರಾ.ಆ.ಕೇಂದ್ರ ವ್ಯಾಪ್ತಿಯಲ್ಲಿ ತಿತಿಮತಿ, ದೇವರಪುರ, ಹಾತೂರು ಗ್ರಾಮಪಂಚಾಯಿತಿಯ ಗ್ರಾಮ ಒನ್ ಕೇಂದ್ರಗಳಲ್ಲಿ ನಡೆಯುತ್ತದೆ. ಮಾಲ್ದಾರೆ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಿದ್ದಾಪುರ, ಮಾಲ್ದಾರೆ, ಅಮ್ಮತ್ತಿ ಗ್ರಾಮಪಂಚಾಯಿತಿಯ ಗ್ರಾಮ ಒನ್ ಕೇಂದ್ರಗಳಲ್ಲಿ ನಡೆಯುತ್ತದೆ. ಚೆನ್ನಯ್ಯನಕೋಟೆ ಪ್ರಾ.ಆ.ಕೇಂದ್ರ ವ್ಯಾಪ್ತಿಯ ಚೆನ್ನಯ್ಯನಕೋಟೆ, ಪಾಲಿಬೆಟ್ಟಗಳಲ್ಲಿ ಗ್ರಾಮಪಂಚಾಯಿತಿಯ ಗ್ರಾಮ ಒನ್ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನಾ ಆರೋಗ್ಯ ಕರ್ನಾಟಕ ಕಾರ್ಡ್ನ್ನು ವಿತರಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ.