ನವದೆಹಲಿ: ಗುಜರಾತ್ನ ಮೋರ್ಬಿಯಲ್ಲಿ ಸಂಭವಿಸಿದ ಸೇತುವೆ ಕುಸಿತದ ಸಂದರ್ಭದಲ್ಲಿ ಜನರ ಜೀವ ಉಳಿಸಿದ ಬಿಜೆಪಿಯ ಮಾಜಿ ಶಾಸಕರೊಬ್ಬರು ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.
ಅಕ್ಟೋಬರ್ 30 ರಂದು ಶತಮಾನದಷ್ಟು ಹಳೆಯದಾದ ಸೇತುವೆ ಮುರಿದು ಬಿದ್ದಾಗ ನೂರಾರು ಜನರು ದಡ ಸೇರಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ತನ್ನ ಪ್ರಾಣದ ಹಂಗು ತೊರೆದು 60 ವರ್ಷದ ಕಾಂತಿಲಾಲ್ ಅಮೃತಿಯಾ ಅವರು ಲೈಫ್ ಟ್ಯೂಬ್ ಧರಿಸಿ ನದಿಗೆ ಬಿದ್ದ ಜನರನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಅದರ ವಿಡಿಯೋ ಕೂಡ ವೈರಲ್ ಆಗಿ ಸುದ್ದಿಯಾಗಿದ್ದರು.
ಇದೀಗ ಕಾಂತಿಲಾಲ್ ಅವರ ಕಾರ್ಯವು ಗುಜರಾತ್ ಚುನಾವಣೆಯಲ್ಲಿ ಮೊರ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಅವರಿಗೆ ಬಿಜೆಪಿ “ಟಿಕೆಟ್” ನೀಡಿತು ಎಂದು ಮೂಲಗಳು ತಿಳಿಸಿವೆ. ಕಾಂತಿಲಾಲ್ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಅವರ ಸಾಹಸ ಧೈರ್ಯದ ಕ್ರಮದಿಂದಾಗಿ ಅವರ ಹೆಸರನ್ನು ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೊರ್ಬಿಯ ಹಾಲಿ ಶಾಸಕ ಬ್ರಿಜೇಶ್ ಮೆರ್ಜಾ ಅವರನ್ನು ಕೈಬಿಡಲಾಗಿದೆ.
ಗುಜರಾತ್ ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
BIGG NEWS: ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಮನೆಯಲ್ಲೇ ನಡೆದು ಹೋಯ್ತು ಕಳ್ಳರ ಅಟ್ಟಹಾಸ; ತಡೆಯಲು ಬಂದ ಮಗನಿಗೆ ಶೂಟೌಟ್
BIGG BREAKING NEWS: ಅರುಣಾಚಲ ಪ್ರದೇಶದಲ್ಲಿ 5.7 ತೀವ್ರತೆಯ ಭೂಕಂಪ | Earthquake Hits Arunachal Pradesh
BIGG NEWS: ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಮನೆಯಲ್ಲೇ ನಡೆದು ಹೋಯ್ತು ಕಳ್ಳರ ಅಟ್ಟಹಾಸ; ತಡೆಯಲು ಬಂದ ಮಗನಿಗೆ ಶೂಟೌಟ್