ಬೆಂಗಳೂರು: ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಅವರದ್ದು ವಾಮಾಚಾರದ ಕುಟುಂಬ ಇರಬೇಕು. ಹಾಗಾಗಿಯೇ ಅವರು ಹೆಚ್ಚಾಗಿ ಸ್ಮಶಾನವನ್ನು ಪ್ರೀತಿಸುತ್ತಾರೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್ ಟೀಕಿಸಿದ್ದಾರೆ.
BIGG NEWS : ನಾಳೆ ಬೆಂಗಳೂರಿಗೆ ಮೋದಿ ಆಗಮನ : ಈ ರಸ್ತೆಗಳು ಬಂದ್, ಪರ್ಯಾಯ ಮಾರ್ಗ ಹೀಗಿದೆ | Bengaluru Traffic
ಶಾಸಕ ಸತೀಶ್ ಜಾರಕಿಹೊಳಿ ಅವರ ಹಿಂದೂ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, ಹಿಂದೂ ಎಂಬ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಹಿಂದೂಗಳು ಪ್ರತಿಭಟಿಸುತ್ತಿದ್ದಾರೆ. ʻಗರ್ವದಿಂದ ಹೇಳಿ ನಾನೊಬ್ಬ ಹಿಂದೂʼ ಎಂಬ ಘೋಷಣೆ ಕೂಗಿದ್ದಾರೆ. ಸದಾ ಹಿಂದೂಗಳನ್ನು ಅವಮಾನಿಸುವ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳೇ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
BIGG NEWS: ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಮನೆಯಲ್ಲೇ ನಡೆದು ಹೋಯ್ತು ಕಳ್ಳರ ಅಟ್ಟಹಾಸ; ತಡೆಯಲು ಬಂದ ಮಗನಿಗೆ ಶೂಟೌಟ್
ಸರ್ವೇಜನ ಸುಖಿನೋ ಭವಂತು ಅಂತ ಹೇಳೋ ಧರ್ಮ ಯಾವುದಾದರೂ ಇದ್ರೆ ಅದು ನಮ್ಮ ಹಿಂದೂ ಧರ್ಮ.ಆದರೆ ಜಾರಕಿಹೊಳಿಯವರಿಗೆ ಏನೂ ಗೊತ್ತಿಲ್ಲ. ಯಾಕಂದ್ರೆ ಅವರು ವಾಮಾಚಾರ ಫ್ಯಾಮಿಲಿಯವರು ಸ್ಮಶಾನ ಪ್ರೀತಿಸುವವರು ಎಂದು ಹೇಳಿದರು. ಸ್ಮಶಾನವನ್ನ ಪ್ರೀತಿಸುವವರು ಯಾರು ಅಂದ್ರೆ ಅವರು ನಮ್ಮ ಸಂಸ್ಕೃತಿಯನ್ನ ಒಪ್ಪದೆ ಇರುವವರು. ಮಾಠಮಂತ್ರ ಮಾಯಾಜಾಲ ಮಾಡುವಂತವರು. ಅವರ ಸಂಖ್ಯೆ ಶೇ.1% ಅವರು ಇಂತವರ ಹೇಳಿಕೆಗಳನ್ನ ನಿಜವಾಗ್ಲೂ ಹಿಂದೂ ಅನ್ನೋ ಹೆಮ್ಮೆಯನ್ನಿಟ್ಟುಕೊಂಡಿರೋ ಹಿಂದೂಗಳು ಕ್ಷಮಿಸಲ್ಲ ಎಂದು ಕಿಡಿಕಾರಿದ್ದಾರೆ.
BIGG BREAKING NEWS: ಅರುಣಾಚಲ ಪ್ರದೇಶದಲ್ಲಿ 5.7 ತೀವ್ರತೆಯ ಭೂಕಂಪ | Earthquake Hits Arunachal Pradesh