ಮುಂಬೈ: ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಬಾಲಕಿಯ ಹೊಟ್ಟೆಯಲ್ಲಿ 1.2 ಕೆಜಿ ತೂಕದ ಕೂದಲಿನ ಉಂಡೆ ಕಂಡು ಬಂದಿದ್ದು, ಅದನ್ನು ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಊಟ ತಿನ್ನಲು, ನೀರು ಕುಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಮಂಗಳವಾರ ವಸಾಯಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈವೇಳೆ, ಬಾಲಕಿಗೆ ರಾಪುಂಜೆಲ್ ಸಿಂಡ್ರೋಮ್ ಇದೆ ಎಂದು ವೈದ್ಯರು ಹೇಳಿದ್ದಾರೆ. ನಂತ್ರ, ಬಾಲಕಿಯ ಪೋಷಕರಿಗೆ ಆಕೆಯ ಸ್ಥಿತಿ ಬಗ್ಗೆ ವಿವರಿಸಿದ ವೈದ್ಯರು, ಶಸ್ತ್ರಚಿಕಿತ್ಸೆಯ ಮೂಲಕ 1.2 ಕೆಜಿ ತೂಕದ 32 ಇಂಚು ಉದ್ದದ ಕೂಡಲಿನ ಉಂಡೆಯನ್ನು ಹೊರ ತೆಗೆದಿದ್ದಾರೆ.
ಏನಿದು ರಾಪುಂಜೆಲ್ ಸಿಂಡ್ರೋಮ್?
ಹೇರ್ಬಾಲ್ಗೆ ಕಾರಣವಾದ ರಾಪುಂಜೆಲ್ ಸಿಂಡ್ರೋಮ್ ಕುರಿತು ಮಾತನಾಡಿದ ಡಾ ಡಿಸೋಜಾ, ಕೆಲವು ಚಿಕ್ಕ ವಯಸ್ಸಿನ ಹುಡುಗಿಯರು ಇನ್ನೊಬ್ಬರ ತಲೆ ಕೂದಲನ್ನು ತಿನ್ನುವ ಹವ್ಯಾಸ ಮಾಡಿಕೊಂಡಿರುತ್ತಾರೆ. ಈ ಮಕ್ಕಳು ಅರಿವಿಲ್ಲದೆ ನುಂಗುವ ಮೊದಲು ಕೂದಲನ್ನು ಅಗಿಯುತ್ತಾರೆ. ಇದು ಮಾನಸಿಕ ಅಸ್ವಸ್ಥತೆ ಎಂದು ಹೇಳಬಹುದು. ಮನುಷ್ಯನ ಕೂದಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ, ಹೊಟ್ಟೆಯಲ್ಲಿ ಸಂಗ್ರಹವಾಗುತ್ತದೆ. ಇದ್ರಿಂದ ಕರುಳಿನ ನೋವು ಉಂಟಾಗುತ್ತದೆ ಎಂದಿದ್ದಾರೆ.
BIGG NEWS: ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ ಪುತ್ರ ಯತೀಂದ್ರ? ಯಾವ ಕ್ಷೇತ್ರ ಗೊತ್ತಾ?
BREAKING NEWS: ದೆಹಲಿ ಮದ್ಯ ನೀತಿ ಪ್ರಕರಣ: ಹೈದರಾಬಾದ್ ಮೂಲದ ಫಾರ್ಮಾ ಕಂಪನಿಯ ಮುಖ್ಯಸ್ಥ ಸೇರಿ ಇಬ್ಬರು ಅರೆಸ್ಟ್
BIGG NEWS: ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ ಪುತ್ರ ಯತೀಂದ್ರ? ಯಾವ ಕ್ಷೇತ್ರ ಗೊತ್ತಾ?