ಬೆಂಗಳೂರು : ಬೆಂಗಳೂರಿನ ಬಸವನಗುಡಿಯಲ್ಲಿ ನವೆಂಬರ್ 21 ರಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭವಾಗಲಿದ್ದು. ಈ ವರ್ಷ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಬಸವಗುಡಿ ಕ್ಷೇತ್ರದ ಶಾಸಕ ಎಲ್ ಎ ರವಿಸುಬ್ರಮಣ್ಯ ತಿಳಿಸಿದ್ದಾರೆ.
ಈ ಹಿಂದೆ ಕಡಲೆಕಾಯಿ ಪರಿಷೆಯ ವೇಳೆ ಕೆಂಪಾಂಬುಂಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷದಲ್ಲಿ ಇದು ಸ್ಥಗಿತಗೊಂಡಿದ್ದು, ಈ ವರ್ಷ ಮತ್ತೆ ಕೆಂಪಾಂಬುಂಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದರು,
ನಾಲ್ಕು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಕಡಲೆಕಾಯಿ ಪರಿಷೆ, ತೆಪ್ಪೋತ್ಸವ ಜೊತೆಗೆ ಬ್ಯೂಗಲ್ ರಾಕ್ ನತ್ತು ನರಸಿಂಹಸ್ವಾಮಿ ಉದ್ಯಾನವನದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.ರಾಮನಗರ, ಮಾಗಡಿ, ದೊಡ್ಡಬಳ್ಳಾಪುರ ಸೇರಿ ಹಲವು ಕಡೆ ಈ ಬಾರಿ ಉತ್ತಮ ಮಳೆಯಾಗಿದ್ದು, ಕಡಲೆಕಾಯಿ ಬೆಳೆ ಚೆನ್ನಾಗಿ ಬಂದಿದೆ. ಹಾಗಾಗಿ ಪರಿಷೆಗೆ ಉತ್ತಮ ಕಡಲೆಕಾಯಿ ಬರುವ ನಿರೀಕ್ಷೆಯಿದೆ. ಕಾರ್ತಿಕ ಸೋಮವಾರ ಅಂದರೆ ನವೆಂಬರ್ 21 ರಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭವಾಗಲಿದ್ದು, ಭಾನುವಾರ ಕಾರ್ಯಕ್ರಮ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದರು.
BIGG BREAKING NEWS : ಬಿ.ಎಸ್ ಯಡಿಯೂರಪ್ಪ ಆಪ್ತ, ಮಾಜಿ ಶಾಸಕ ‘ಯು.ಬಿ ಬಣಕಾರ್’ ಬಿಜೆಪಿಗೆ ಗುಡ್ ಬೈ