ದಾವಣಗೆರೆ : ನನ್ನ ತಮ್ಮನ ಮಗ ಚಂದ್ರುವನ್ನು ಅಪರಿಹರಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
BIG NEWS: ʻಭಾರತʼ 2027 ರ ವೇಳೆಗೆ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಅರ್ಥಶಾಸ್ತ್ರಜ್ಞ ʻಚೇತನ್ ಅಹ್ಯಾʼ ಭವಿಷ್ಯ
ಇಂದು ಶಾಸಕ ರೇಣುಕಾಚಾರ್ಯ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಚಂದ್ರುವನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಶಿಖಂಡಿಗಳು ನನ್ನ ಮೇಲೆ ಸೇಡಿನಿಂದ ಚಂದ್ರು ಕೊಂದಿದ್ದಾರೆ ಎಂದು ಹೇಳಿದ್ದಾರೆ.
ತುಳು ಮಿಶ್ರಿತ ಕನ್ನಡದಲ್ಲಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು. ಏನೇ ಬೆದರಿಕೆ ಹಾಕಿದರೂ ನಾನು ಬಗ್ಗಲಿಲ್ಲ. ಅದ್ಧೂರಿಯಿಂದ ಗಣೇಶೋತ್ಸವ ಹಾಗೂ ಸಾವರ್ಕರ್ ರಥಯಾತ್ರೆ ಮಾಡಿದ್ದೆ. ನನಗೆ ಕೊಲೆ ಬೆದರಿಕೆ ಬಂದು 1 ವರ್ಷ ಆಗಿತ್ತು. ಈಗ ಸದಾಶಿವನಗರ ಪೊಲೀಸರು ತನಿಖೆ ಮಾಡಬೇಕು ಎಂದು ಹೇಳಿದ್ದಾರೆ ಎಂದು ಮತ್ತೊಮ್ಮೆ ಪರೋಕ್ಷವಾಗಿ ಪೊಲೀಸರ ತನಿಖೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
BIG NEWS: ʻಭಾರತʼ 2027 ರ ವೇಳೆಗೆ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಅರ್ಥಶಾಸ್ತ್ರಜ್ಞ ʻಚೇತನ್ ಅಹ್ಯಾʼ ಭವಿಷ್ಯ