ಬೆಂಗಳೂರು: ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಿದ ಕೂಡಲೇ ಒಕ್ಕಲಿಗರ ಮತ ಬಿಜೆಪಿಗೆ ಹೋಗುವುದಿಲ್ಲ. ಅಂತಹ ಭ್ರಮೆಯಿಂದ ಬಿಜೆಪಿ ಹೊರಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
https://kannadanewsnow.com/kannada/hindu-outfits-to-join-muslim-organisations-new-war-against-education-department/https://kannadanewsnow.com/kannada/hindu-outfits-to-join-muslim-organisations-new-war-against-education-department/
ಕೆಂಪೇಗೌಡರ ಪ್ರತಿಮೆ, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಬರುತ್ತಾರೆ ಹೋಗುತ್ತಾರೆ ಅಷ್ಟೆ. ಕೆಂಪೇಗೌಡ ಪ್ರತಿಮೆ ಅನಾವರಣ ಒಂದು ಭಾಗ. ಈಗಾಗಲೇ ರಾಜ್ಯದ ಹಲವಾರು ಭಾಗದಲ್ಲಿ ಕೆಂಪೇಗೌಡ ಪ್ರತಿಮೆಗಳು ನಿತ್ಯ ಒಂದಲ್ಲ ಒಂದು ಭಾಗದಲ್ಲಿ ಅನಾವರಣ ಆಗುತ್ತಿವೆ. ಇದು ಬಿಜೆಪಿಯ ನಿಯೋಜಿತ ಕಾರ್ಯಕ್ರಮ ಅಷ್ಟೆ. ಅದಕ್ಕೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲ ಎಂದಿದ್ದಾರೆ