ಹಾಸನ: ಅನೆಗಳು ಕಾಡಿನಿಂದ ನಾಡಿಗೆ ಬರುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಅದರಲ್ಲೂ ಹಾಸನ ಭಾಗದಲ್ಲಿ ಹೆಚ್ಚುತ್ತಿದ್ದು ಮಾನವ ಮತ್ತು ಆನೆಗಳ ನಡುವೆ ನಡೆಯುತ್ತಿರುವ ಸಂಘರ್ಶದಲ್ಲಿ ಮಾನವರು ಕೂಡ ಬಲಿಯಾಗುತ್ತಿದ್ದಾರೆ.
ನಗರೀಕರಣದ ಪ್ರಭಾವ, ಪರಿಸರಮಾಲಿನ್ಯ, ಕಾಡಿನ ಅಂಚಿನಲ್ಲಿ ವಾಸಸ್ಥಾನ ಹೀಗೆ ನಾನಾ ಕಾರಣಗಳು ಕೂಡ ಪ್ರಾಣಿಗಳ ಜೀವನದ ಮೇಲೆ ಆಗಾದವಾದ ಪರಿಣಾಮವನ್ನು ಬೀರುತ್ತಿದೆ ಕೂಡ.
ಈ ನಡುವೆ ಸಕಲೇಶಪುರದ ಗ್ರಾಮವೊಂದರ ಮನೆ ಮುಂದ ಆನೆ ಆಹಾರಕ್ಕಾಗಿ ಕೆಲ ನಿಂತುಕೊಂಡಿದ್ದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಲ್ಲದೇ ಕೆಲ ದಿನಗಳ ಹಿಂದೆ ಇದೇ ಗ್ರಾಮದಲ್ಲಿ ಲೋಕೇಶ್ ಎನ್ನುವವರನ್ನು ಆನೆ ತುಳಿದು ಸಾಯಿಸಿತ್ತು, ಇದರ ಬೆನ್ನಲೇ ಮತ್ತೆ ಆನೆಗಳು ಮನೆ ಬಳಿಗೆ ಬರುತ್ತಿರುವುದು ಸಹಜವಾಗಿ ಜನರಲ್ಲಿ ಆತಂಕವನ್ನು ಹೆಚ್ಚಳ ಮಾಡಿದೆ ಕೂಡ. ಇನ್ನೂ ಗ್ರಾಮದವರು ನಮಗೆ ಆರಣ್ಯ ಇಲಾಖೆಯಿಂದ ಯಾವುದೇ ಸಹಾಯವಾಗುತ್ತಿಲ್ಲ, ನಮಗೆ ಜೀವದ ಭಯವಿದೆ ಎನ್ನುವ ಆತಂಕವನ್ನು ಹೊರ ಹಾಕುತ್ತಿದ್ದಾರೆ.