ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ(ಇಂದು) ಮುಂಜಾನೆ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಇಂದು ಮುಂಜಾನೆ 1.57ರ ಸುಮಾರಿಗೆ 6.3 ತೀವ್ರತೆಯ ಭೂಕಂಪವಾಗಿದ್ದು, ದೆಹಲಿಯಲ್ಲೂ ಭೂಕಂಪನದ ಅನುಭವವಾಗಿದೆ.
ಕಳೆದ 24 ಗಂಟೆಗಳಲ್ಲಿ ನೇಪಾಳದ ದೂರದ ಪಶ್ಚಿಮ ಪ್ರದೇಶದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಒಂದರ ಹಿಂದೊಂದರಂತೆ ಭೂಮಿ ಕಂಪಿಸಿದೆ ಎಂದು ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರ (ಎನ್ಎಸ್ಸಿ) ತಿಳಿಸಿದೆ.
“09-11-2022 ರಂದು(ಬುಧವಾರ) ಭೂಕಂಪನವು ಭೂಮಿಯಿಂದ 10 ಕಿಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ” ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಟ್ವೀಟ್ ಮಾಡಿದೆ.
Nepal | An earthquake of magnitude 6.3 occurred in Nepal, Manipur at around 1.57 am on Nov 9. The depth of the earthquake was 10 km below the ground: National Center for Seismology
Strong tremors from the earthquake were also felt in Delhi pic.twitter.com/YNMRQiPEud
— ANI (@ANI) November 8, 2022
ಭೂಕಂಪನದಿಂದಾಗ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BREAKING NEWS: ಪಶ್ಚಿಮ ನೇಪಾಳದಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ: 3 ಮಂದಿ ಸಾವು | Earthquake in West Nepal