ಕಠ್ಮಂಡು (ನೇಪಾಳ): ಪಶ್ಚಿಮ ನೇಪಾಳದ ದೋಟಿ ಜಿಲ್ಲೆಯಲ್ಲಿ ಇಂದು ಮುಂಜಾನೆ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ನೇಪಾಳದ ದೂರದ ಪಶ್ಚಿಮ ಪ್ರದೇಶದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಒಂದರ ಹಿಂದೊಂದರಂತೆ ಭೂಮಿ ಕಂಪಿಸಿದೆ ಎಂದು ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರ (ಎನ್ಎಸ್ಸಿ) ತಿಳಿಸಿದೆ.
NSC ಯ ಮಾಹಿತಿಯ ಪ್ರಕಾರ, ಮಂಗಳವಾರ ರಾತ್ರಿ 9:07 ಕ್ಕೆ (ಸ್ಥಳೀಯ ಕಾಲಮಾನ) 5.7 ತೀವ್ರತೆಯ ಮೊದಲ ಭೂಕಂಪವಾಗಿದೆ ಮತ್ತು ನಂತರ 9:56 PM ಕ್ಕೆ (ಸ್ಥಳೀಯ ಸಮಯ) 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
ಇನ್ನೂ ಬುಧವಾರ ಅಂದ್ರೆ ಇಂದು ಬೆಳಗ್ಗೆ 2:12 (ಸ್ಥಳೀಯ ಕಾಲಮಾನ) ಸುಮಾರಿಗೆ 6.6 ತೀವ್ರತೆಯ ಮೂರನೇ ಬಲವಾದ ಕಂಪನ ಸಂಭವಿಸಿದ್ದು, ಗೈರಾಗೌನ್ನಲ್ಲಿ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
Loan Recovery : ‘ಸಾಲ ಮರುಪಾವತಿಸಿ’ ಅಂತಾ ‘ಬ್ಯಾಂಕ್’ ತೊಂದ್ರೆ ಕೊಡ್ತಿದ್ಯಾ? ಭಯ ಪಡ್ಬೇಡಿ, ನಿಮ್ಮ ಈ ‘ಹಕ್ಕು’ ಬಳಸಿ