ಬೆಂಗಳೂರು: ಹಿಂದೂ’ (Hindu) ಎಂಬ ಪದಕ್ಕೆ ಅಸಭ್ಯ ಅರ್ಥವಿದ್ದು, ಅದರ ಮೂಲ ಭಾರತದಲ್ಲ ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ (Congress) ನಾಯಕ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ಧಾಳಿ ನಡೆಸಿದ್ದಾರೆ.
ನೋಡೋಣ ಸತೀಶ್ ಕುರಾನ್ ಬಗ್ಗೆ ಬೈಬಲ್ ಬಗ್ಗೆ ಮಾತನಾಡಲಿ. ಕ್ರಿಶ್ಚಿಯನ್ ಇಸ್ಲಾಂ ಬಗ್ಗೆ ಮಾತನಾಡಿದ್ರೆ ಇಷ್ಟೊತ್ತಿಗೆ ಗೋರಿಯಲ್ಲಿ ಇರುತ್ತಿದ್ದರು. ಹಿಂದುಗಳಿಗೆ ತಾಳ್ಮೆ ಜಾಸ್ತಿಯಿದೆ ಹಿಂದು ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ ಹಿಂದೂ ಪದದ ಬಗ್ಗೆ ಸತೀಶ್ ಹೇಳಿಕೆ ಅಕ್ಷಮ್ಯ ಅಪರಾಧ . ಸತೀಶ್ ಜಾರಕಿಹೊಳಿ ಹೇಳಿಯನ್ನು ನಾನು ಖಂಡಿಸುತ್ತೇನೆ. ಹಿಂದೂಗಳನ್ನು ಅವಹೇಳನ ಮಾಡುತ್ತಿರೋದು ಸರಿಯಲ್ಲ ಸತೀಶ್ ಒಬ್ಬ ನಾಸ್ತಕವಾದಿ, ಹಿಂದೂ ವಿರೋಧಿ ಆಗಿದ್ದಾರೆ.
ಸಶ್ಮಾನದಲ್ಲಿ ಪೂಜೆ, ಮದುವೆ ಮಾಡುತ್ತಾರೆ. ಹಿಂದೂಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ, ಕ್ಷಮೆ ಕೇಳಲಿ. ಹಿಂದು ಶಬ್ಧ ಅತ್ಯಂತ್ಯ ಪ್ರಾಚೀನ ಮತ್ತು ಪುರಾತನವಾದದ್ದು, ಕ್ರಿಸ್ತ ಪೂರ್ವದಿಂದದಲೂ ಹಿಂದೂ ಶಬ್ಧ ಬಳಕೆಯಲ್ಲಿದೆ. ಹಿಂದೂ ಶಬ್ಧಕ್ಕೆ ಅಪಮಾನ ಮಾಡುವುದು ಸರಿಯಲ್ಲ ಕಾಂಗ್ರೆಸ್ನವರಿಗೆ ಇನ್ನೂ ಬುದ್ದಿ ಬಂದಿಲ್ಲ. ಕುವೆಂಪುರವರ ನಾಡಗೀತೆಯಲ್ಲೇ ಹಿಂದೂ ಪರ ಇದೆ. ಹಿಂದೂ ಧರ್ಮ ಜೀವನ ಪದ್ದತಿ ಅಂತಾ ಸುಪ್ರೀಂ ಹೇಳಿದೆ ಹಿಂದೂ ಶಬ್ಧ ಜಾತಿ ಸೂಚಕವಲ್ಲ , ಮತ ಸೂಚಕ ಅಲ್ಲ ಎಂದು ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.
ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದೇನು?
ಹಿಂದೂ ಎಂಬ ಪದ ಇದು ಪರ್ಷಿಯನ್ ಭಾಷೆಯಿಂದ ಬಂದಿದೆ ಎಂದು ಅವರು ಹೇಳಿದ್ದಾರೆ. ಹಿಂದೂ ಎಂಬ ಪದ ಎಲ್ಲಿಂದ ಹುಟ್ಟಿತು? ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಪ್ರದೇಶದಿಂದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದನ್ನು ಚರ್ಚೆ ಮಾಡಬೇಕು ಎಂದಿದ್ದಾರೆ ಸತೀಶ್ ಜಾರಕಿಹೊಳಿ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಾರಕಿಹೊಳಿ ಅವರ ಮಾತು ಹಿಂದೂಗಳಿಗೆ ಮಾಡಿದ ಅವಮಾನ ಮತ್ತು ಪ್ರಚೋದನೆ ಎಂದು ಬಿಜೆಪಿ ಟೀಕಿಸಿದೆ. ಹಿಂದೂ ಪದದ ಅರ್ಥವನ್ನು ತಿಳಿದರೆ ನಿಮಗೆ ನಾಚಿಕೆಯಾಗುತ್ತದೆ. ಇದು ಅಸಭ್ಯವಾಗಿದೆ ಎಂದು ಜಾರಕಿಹೊಳಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಈ ಪದ ಎಲ್ಲಿಂದ ಬಂದಿದೆಯೆಂದು ತಿಳಿಯಲು ವಿಕಿಪೀಡಿಯಾ ಚೆಕ್ ಮಾಡಿ ಎಂದು ಅವರು ಹೇಳಿದ್ದಾರೆ.
ಎಂಥ ಅಪರೂಪದ ದೃಶ್ಯ ಇದು : IAS ಅಧಿಕಾರಿಯ ತಲೆಮುಟ್ಟಿ ಆಶೀರ್ವದಿಸಿದ ಹಿರಿಯ ಮಹಿಳೆ ಫೋಟೋ ವೈರಲ್