ಬೆಂಗಳೂರು: ಸಾರ್ವತ್ರಿಕ ಆರೋಗ್ಯ ಪಾಲನೆಯಡಿ(ಯುಹೆಚ್ಸಿ) ಸಮಗ್ರ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗಳನ್ನು (ಸಿಪಿಹೆಚ್ಸಿ) ಆಯುಷ್ಮಾನ್ ಭಾರತ- ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮುಖೇನ ನೀಡಲು ಉದ್ದೇಶಿಸಿಸಲಾಗಿದೆ. ಈ ಕೇಂದ್ರಗಳ ಸಮಾಜದ ಎಲ್ಲಾ ವರ್ಗಕ್ಕೆ ಸಾಕಷ್ಟು ಪ್ರಮಾಣದ ಆರೋಗ್ಯ ರಕ್ಷಣಾ
ಸೇವೆಗಳನ್ನು ಮುಟ್ಟಲು ಪೂರಕವಾದ ಅನುಷ್ಠಾನ ಕ್ರಮಗಳನ್ನು ರೂಪಿಸಿದೆ.
ಸಮುದಾಯವು ಗರಿಷ್ಟ ಪ್ರಮಾಣದಲ್ಲಿ ಉಚಿತ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗಳನ್ನು ಖಾತ್ರಿಪಡಿಸುವುದು ಹಾಗೂ ಕುಟುಂಬಗಳು ಆರೋಗ್ಯ ರಕ್ಷಣೆಗೆ ಖರ್ಚು ಮಾಡುತ್ತಿರುವ ಸ್ವಂತ ಹಣದ ಪ್ರಮಾಣವನ್ನು ತಗ್ಗಿಸುವುದಾಗಿದೆ. ಸಮುದಾಯದ ಮನೆಬಾಗಿಲಿಗೆ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ನಾವೀನ್ಯತಾ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿದೆ. ಕರ್ನಾಟಕ ಸರ್ಕಾರವು ನುರಿತ ಶುಶೂಷಕ ಸಿಬ್ಬಂದಿಗಳನ್ನು ಆರೋಗ್ಯ ಉಪ ಕೇಂದ್ರಗಳಿಗೆ ನಿಯೋಜನೆ ಮಾಡುವುದರಿಂದ ಸಾರ್ವತ್ರಿಕ ಆರೋಗ್ಯ ಪಾಲನೆಯಡಿಯಲ್ಲಿ ಆಶ್ರಿತ ವರ್ಗ, ದುರ್ಬಲ ವರ್ಗ. ಗ್ರಾಮೀಣ ಮತ್ತು ಸಂಪರ್ಕ ಕುಂಠಿತ ಪ್ರದೇಶದ ಜನರಿಗೆ ಆರೋಗ್ಯ ಸೇವೆಗಳನ್ನು ನೀಡಲು ಸಾಕಷ್ಟು ಉಪಯುಕ್ತವಾದ ಕಾರ್ಯತಂತ್ರವೆಂದು ನಂಬಿದೆ. ಅಭಿವೃದ್ಧಿ ಪಥದಲ್ಲಿರುವ ಇತರ ದೇಶಗಳ ಪ್ರಯೋಗಗಳು ಮತ್ತು ಅನುಭವಗಳು ಪರಿಣಾಮಕಾರಿ ಪ್ರಾಥಮಿಕ ಆರೋಗ್ಯ ಸೇವಾ ಪೂರೈಕೆಗೆ ಶುಶೂಷಾ ವೃತ್ತಿಪರರು ಸಾಮರ್ಥ್ಯಯುಳ್ಳ ಹಾಗೂ ಕ್ರಿಯಾಶೀಲ ಗುಂಪೆಂದು ಸಾಬೀತುಪಡಿಸಿವೆ.
ಆದುದರಿಂದ ಸಮುದಾಯದ ಮನೆಬಾಗಿಲಿಗೆ ಉಪ ಕೇಂದ್ರದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮುಖೇನ ಪ್ರತಿಬಂಧಕ, ಸಂವರ್ಧನಾ, ಗುಣಪಡಿಸುವ ಚಿಕಿತ್ಸಾ ಕ್ರಮಗಳು, ಪುನರ್ವಸತಿ ಮತ್ತು ಉಪಶಾಮಕ ಆರೈಕಾ ಸೇವೆಗಳನ್ನು ಕರ್ನಾಟಕ ಸರ್ಕಾರವು ಬಿ.ಎಸ್ಸಿ ನರ್ಸಿಂಗ್ ಪದವೀಧರರನ್ನು ಸಮುದಾಯ ಆರೋಗ್ಯ
ಅಧಿಕಾರಿಗಳಾಗಿ ನೇಮಕ ಮಾಡುವ ಕಾರ್ಯತಂತ್ರವನ್ನು ಕರ್ನಾಟಕ ರಾಜ್ಯವು ಅಳವಡಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ 2016-2021 ರ ನಡುವೆ ರಾಜ್ಯವು 3339 ಬಿ.ಎಸ್ಸಿ ಪದವಿ ಪಡೆದ ಶುಕ್ರೂಷಕರನ್ನು ಸಮುದಾಯ ಆರೋಗ್ಯ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ (ಸಿಪಿಸಿಹೆಚ್ ಕೋರ್ಸ್- ಸಂಯೋಜಿತರಹಿತ ತಂಡ) ಮತ್ತು 2021-22 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 2614 ಸಮುದಾಯ ಆರೋಗ್ಯ ಅಧಿಕಾರಿಗಳನ್ನು 17 ಜಿಲ್ಲೆಗಳ (ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ) ಆರೋಗ್ಯ ಉಪಕೇಂದ್ರ-ಆರೋಗ್ಯ ಮತ್ತು ಕ್ಷೇಮಕೇಂದ್ರಗಳಿಗೆ ಹಂತಹಂತವಾಗಿ ನೇಮಕ ಮಾಡಲಾಗಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಾರ್ಯಕ್ರಮದ ಮುನ್ನೋಟವನ್ನು ಅನುಬಂಧ-1 ರಲ್ಲಿ ವಿವರಿಸಲಾಗಿದೆ.
ಪ್ರಸ್ತುತ ಆರನೇ ಹಂತದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕರ್ನಾಟಕವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಗಳ ಮುಖೇನ 1048 (847 ಹೊಸ ಹುದ್ದೆಗಳು +201 ಖಾಲಿ ಹುದ್ದೆಗಳು) ಬಿ.ಎಸ್ಸಿ ಪದವಿ ಪಡೆದ ಶುಕ್ರೂಷಕರನ್ನು ಎಲ್ಲಾ ಜಿಲ್ಲೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಸಮುದಾಯ ಆರೋಗ್ಯ
ಅಧಿಕಾರಿಗಳಾಗಿ ನೇಮಕ ಮಾಡಲಾಗುವುದು. ಈ ನೇಮಕಾತಿಯು ಉಲ್ಲೇಖಿತ ಪತ್ರ 1 ರಲ್ಲಿ 2022-23 ನೇ ಸಾಲಿನ ಆರ್.ಒ.ಪಿಯಲ್ಲಿ ನೀಡಿರುವ ಅನುಮೋದನೆಗೆ ಒಳಪಟ್ಟಿರುತ್ತದೆ. ಜಿಲ್ಲಾವಾರು ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗಳ ಖಾಲಿ ಹುದ್ದೆಗಳ ವಿವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ.
ಈ ಹುದ್ದೆಗೆ ಬಿ.ಎಸ್ಸಿ/ಪೋಸ್ಟ್ ಬಿ.ಎಸ್ಸಿ ಪದವೀಧರರು ಮತ್ತು ಸಿಪಿಸಿಹೆಚ್ ಕೋರ್ಸ್ನ ಸಂಯೋಜಿತ ತಂಡ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಅರ್ಹ ಅಭ್ಯರ್ಥಿಗಳಾಗಿದ್ದು, ಅಂಗೀಕೃತ ವಿಶ್ವವಿದ್ಯಾನಿಲಯದ ಪದವಿ ಪ್ರಮಾಣ ಪತ್ರವನ್ನು ಹೊಂದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿಯಾಗಿರಬೇಕು. ಕಂಪ್ಯೂಟರ್ ಜ್ಞಾನವಿರಬೇಕು ಜೊತೆಗೆ ಕನ್ನಡ ಭಾಷಾ ಜ್ಞಾನವು (ಮಾತನಾಡಲು ಮತ್ತು ಬರೆಯಲು) ಇರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾನದಂಡಗಳು. ವಯೋಮಿತಿ ಮತ್ತು ಇನ್ನಿತರ ಅವಶ್ಯಕ ಅಗತ್ಯತೆಗಳ ಬಗ್ಗೆ ಅನುಬಂಧ-3 ರಲ್ಲಿ ವಿವರಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಒಂದು ಬಾರಿ ಮಾತ್ರ ಆನ್ಲೈನ್ ವ್ಯವಸ್ಥೆಯ ಯಾವುದಾದರೂ ಒಂದು ಆಯ್ದ ಜಿಲ್ಲೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಈ-ಮೇಲ್ ಮುಖೇನ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಅಭ್ಯರ್ಥಿಯ ಗುರುತಿನ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಇಂದೀಕರಿಸಬೇಕು. ಅನ್ಲೈನ್ ಅರ್ಜಿಯನ್ನು ಸಲ್ಲಿಸುವಾಗ ಅಗತ್ಯವಿರುವೆಡೆ ಸೂಕ್ತ ದಾಖಲೆಗಳನ್ನು ಪಿಡಿಎಫ್ ಸ್ವರೂಪದ ಕಡತದಲ್ಲಿ ಇಂದೀಕರಿಸಬೇಕು. ಇಂದೀಕರಿಸಬೇಕಾದ ದಾಖಲೆಗಳ ಪಟ್ಟಿಯನ್ನು ಅನುಬಂಧ-4 ರಲ್ಲಿ ನೀಡಲಾಗಿದೆ.
ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ/ಪೋಸ್ಟ್ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು, ಸಂಯೋಜಿತ ಅಭ್ಯರ್ಥಿಗಳು ಸಮುದಾಯ ಆರೋಗ್ಯ (ಸಿಪಿಸಿಹೆಚ್) ಪಠ್ಯಕ್ರಮದಲ್ಲಿ (ಸಮುದಾಯ ಆರೋಗ್ಯ ಶುಶೂಷೆ-2) ಸಂಯೋಜಿತ ಪ್ರಮಾಣೀಕೃತ ಕಾರ್ಯಕ್ರಮದಲ್ಲಿ ಅರ್ಹತೆಯನ್ನು
ಪಡೆದಿರಬೇಕು ಮತ್ತು ಪ್ರಸ್ತುತ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಅರ್ಹರಿದ್ದು, ಇವರನ್ನೂ ಕೂಡ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು. ಸಮುದಾಯ ಆರೋಗ್ಯ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಹಂತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಮುಖೇನ ಮಾಡಲಾಗುವುದು. ಸಿಪಿಹೆಚ್ಸಿ-ಸಮುದಾಯ ಆರೋಗ್ಯ ಅಧಿಕಾರಿಗಳ(ಸಿಹೆಚ್ಒ) ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯನ್ನು ಜಿಲ್ಲಾ
ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವುದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಭ್ಯರ್ಥಿಗಳು ರೂ.510/-ಗಳನ್ನು (ಐದು ನೂರು ಹತ್ತು ರೂಪಾಯಿಗಳು ಮಾತ್ರ) ಅರ್ಜಿ ಶುಲ್ಕವಾಗಿ (ಆನ್ಲೈನ್ ನೋಂದಣಿ ಮತ್ತು ಆಯ್ಕೆ ಪರೀಕ್ಷಾ ಶುಲ್ಕ) ಆನ್ಲೈನ್ ವ್ಯವಸ್ಥೆಯ ಮುಖೇನ ಪಾವತಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ರೂ.255/-ಗಳನ್ನು ಆನ್ಲೈನ್ ವ್ಯವಸ್ಥೆಯ ಮುಖೇನ ಪಾವತಿಸಬೇಕು. ಶುಲ್ಕ ವಿನಾಯಿತಿಯನ್ನು ಬಯಸುವ ಅಭ್ಯರ್ಥಿಗಳು ನಿರ್ದಿಷ್ಟವಾದ ಪೂರಕ ದಾಖಲೆಯನ್ನು ಇಂದೀಕರಿಸಲು ವಿಫಲವಾದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ಯಾವುದೇ ಪೂರ್ವ ಮಾಹಿತಿಯಿಲ್ಲದೆ ತಿರಸ್ಕೃತಗೊಳಿಸಲಾಗುವುದು.
ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ದಾಖಲಾತಿಗಳನ್ನು ಆನ್ಲೈನ್ ವ್ಯವಸ್ಥೆಯ ಮುಖೇನ ಪರಿಶೀಲಿಸಿದ ನಂತರ ಪ್ರವೇಶ ಪತ್ರ (ಹಾಲ್ ಟಿಕೆಟ್) ವನ್ನು ಅರ್ಹ ಅಭ್ಯರ್ಥಿಗಳಿಗೆ ಆನ್ಲೈನ್ ಪರೀಕ್ಷೆಗೆ ಹಾಜರಾಗಲು ನೀಡಲಾಗುವುದು. ಸಾಂಸ್ಥಿಕ ವ್ಯವಸ್ಥೆ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಅಳವಡಿಸಿಕೊಂಡಿರುವ ಪ್ರಕ್ರಿಯೆಯ ವಿವರಗಳನ್ನು ಅನುಬಂಧ-5 ರಲ್ಲಿ ವಿವರಿಸಲಾಗಿದೆ.
ಪರೀಕ್ಷೆ ಮತ್ತು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ:
90 ನಿಮಿಷಗಳ ಅವಧಿಯ ಪರೀಕ್ಷೆಯನ್ನು ಆನ್-ಲೈನ್ ಮೂಲಕ ನಡೆಸಲಾಗುವುದು ಹಾಗೂ
ಬಹುಆಯ್ಕೆ ಪ್ರಶ್ನಾವಳ ಮಾದರಿಯಲ್ಲಿರುತ್ತದೆ.
ಒಟ್ಟು 80 ಪ್ರಶ್ನೆಗಳಿದ್ದು, 100 ಅಂಕಗಳನ್ನು ನಿಗದಿಪಡಿಸಲಾಗಿದೆ.
ಸಾಮಾನ್ಯ ಪ್ರಶ್ನೆಗೆ 1 ಅಂಕವನ್ನು ನಿಗದಿಪಡಿಸಲಾಗಿದೆ (60 ಅಂಕಗಳಿಗೆ 60 ಪ್ರಶ್ನೆಗಳು), ಕೌಶಲ್ಯಾಧಿರಿತ
ಪ್ರಶ್ನೆಗಳಿಗೆ 2 ಅಂಕವನ್ನು ನಿಗದಿಪಡಿಸಲಾಗಿದೆ. (40 ಅಂಕಗಳಿಗೆ 20 ಪ್ರಶ್ನೆಗಳು).
ದಿll19.11.2022 ರಂದು ಎರಡು ತಂಡಗಳಲ್ಲಿ ನಡೆಸಲಾಗುವುದು. ಮೊದಲ ತಂಡದಲ್ಲಿ ಸಂಯೋಜಿತ ಅಭ್ಯರ್ಥಿಗಳಿಗೆ ನಡೆಸಲಾಗುವುದು, ಪರೀಕ್ಷೆಯು ಬೆಳಗ್ಗೆ 10.00 ಗಂಟೆಯಿಂದ ಪೂರ್ವಾಹ್ನ 11.30 ಗಂಟೆಯವರೆಗೆ ನಡೆಯಅದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 08.00 ಗಂಟೆಗೆ ಹಾಜರಾಗಿ ವರದಿ ಮಾಡಿಕೊಳ್ಳುವುದು. ಎರಡನೇ ತಂಡವು ಸಂಯೋಜಿತರಹಿತ ಅಭ್ಯರ್ಥಿಗಳಿಗೆ ನಡೆಸಲಾಗುವುದು, ಪರೀಕ್ಷೆಯು ಮಧ್ಯಾಹ್ನ 03.00 ಗಂಟೆಯಿಂದ 04.30 ಗಂಟೆಯವರೆಗೆ ನಡೆಯಅದ್ದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಮಧ್ಯಾಹ್ನ 01.00 ಗಂಟೆಗೆ ಹಾಜರಾಗಿ ವರದಿ ಮಾಡಿಕೊಳ್ಳುವುದು. ಎರಡನೇ ತಂಡಕ್ಕೆ ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ಯಾದೃಚ್ಛಿಕವಾಗಿ ಹಂಚಿಕೆ ಮಾಡಲಾಗುವುದು, ಮಾಹಿತಿಯನ್ನು ಪ್ರವೇಶ ಪತ್ರ/ಹಾಲ್ ಟಿಕೇಟ್ನಲ್ಲಿ ನಮೂದಿಸಲಾಗುವುದು.
ಅಭ್ಯರ್ಥಿಗಳು ಆನ್ಲೈನ್ ನೋಂದಣಿ, ಪರೀಕ್ಷೆ, ಫಲಿತಾಂಶ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಬೆಂಬಲ ವ್ಯವಸ್ಥೆಯನ್ನು ಪಡೆಯಬಹುದಾಗಿದ್ದು, ವಿವರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಲತಾಣ https://karunadu.karnataka.gov.in/hfw ದಲ್ಲಿ ಲಭ್ಯವಿವೆ. ಆಯ್ಕೆ ಪ್ರಕ್ರಿಯೆಯ ನಂತರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸಿಪಿಸಿಹೆಚ್ ಸಂಯೋಜಿತ ಪಠ್ಯಕ್ರಮದ ತಂಡ (2020-21 ನಂತರದ ತಂಡಗಳು)ದ ಅಭ್ಯರ್ಥಿಗಳನ್ನು ಅವರು ಆಯ್ಕೆ ಪರೀಕ್ಷೆಯಲ್ಲಿ ಪಡೆದ ಮೆರಿಟ್ ಅಂಕಗಳ ಆಧಾರದ ಮೇಲೆ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಮಾಲೋಚನಾ ವ್ಯವಸ್ಥೆಯ ಮುಖೇನ ಸ್ಥಳ ನಿಯೋಜನೆ ಮಾಡಲಾಗುವುದು.
ಸಿಹೆಚ್ಒ ಪರೀಕ್ಷೆಯ ನಂತರ ಸಂಯೋಜಿತ ರಹಿತ ಅಭ್ಯರ್ಥಿಗಳನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಆಹ್ವಾನಿಸಲಾಗುವ ಅರ್ಜಿಯ ಸಮಯದಲ್ಲಿ ತರಬೇತಿಗಾಗಿ ನಿಯೋಜನೆ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ರೋಸ್ಟರ್ ಪದ್ಧತಿಯ ಅನ್ವಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಕಲ್ಯಾಣ ಕರ್ನಾಟಕಯೇತರ ಜಿಲ್ಲೆಗಳ ಅಭ್ಯರ್ಥಿಗಳನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು.
ಆಯ್ಕೆಯಾದ ಸಮುದಾಯ ಆರೋಗ್ಯ ಅಧಿಕಾರಿಗಳು ಎನ್ಹೆಚ್ಎಂ-ಡಿಹೆಚ್ಎಸ್ ಅಡಿಯಲ್ಲಿ ಕನಿಷ್ಟ ಮೂರು ವರ್ಷಗಳ ಸೇವೆಯನ್ನು ಸಲ್ಲಿಸಲು ಬದ್ಧವಾಗಿ ಬಂಧಪತ್ರವನ್ನು ಮತ್ತು ಅಗತ್ಯವಿರುವ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಒಂದು ದಿನದ ವಿರಾಮದೊಂದಿಗೆ ಪ್ರತಿ 364 ದಿನಗಳಿಗೊಮ್ಮೆ ನವೀಕರಣವಾಗುತ್ತದೆ. ಕಾರ್ಯನಿಔಹಿಸಲು ವಿಫಲವಾದಲ್ಲಿ/ಕಾಲಾವಧಿಯೊಳಗೆ ರಾಜೀನಾಮೆ ಸಲ್ಲಿಸಿದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಗೆ ಬಂಧ ಪತ್ರದಲ್ಲಿರುವ ಮೊತ್ತವನ್ನು ದಂಡವಾಗಿ ಪಾವತಿಸಬೇಕು. ಆಯ್ಕೆ ಪ್ರಕ್ರಿಯೆ, ಪರೀಕ್ಷಾ ಫಲಿತಾಂಶ ಘೋಷಣೆ, ಆಯ್ಕೆಯ ನಂತರ ಬಂಧ ಪತ್ರ ಸಲ್ಲಿಕೆ ಮತ್ತು ದಂಡದ ಮೊತ್ತವು ಸೇರಿದಂತೆ ಅನುಸರಿಸಬೇಕಾದ ಪ್ರಕ್ರಿಯೆಗಳ ವಿವರಗಳನ್ನು ಅನುಬಂಧ-06 ರಲ್ಲಿ ವಿವರಿಸಲಾಗಿದೆ. ಮತ್ತಷ್ಟು ಷರತ್ತು ಮತ್ತು ನಿಬಂಧನೆಗಳನ್ನು ಕಾಲಕಾಲಕ್ಕೆ ಜಾಲತಾಣದಲ್ಲಿ ಅಧಿಸೂಚಿಸಿದರೆ (ಯಾವುದಾದರೂ ಇದ್ದರೆ) ಅಭ್ಯರ್ಥಿಗಳು ಸದರಿ ನಿಬಂದನೆಗಳು ಬದ್ಧವಾಗಿರಬೇಕು. ಆಯ್ಕೆ ಪರೀಕ್ಷೆಗೆ ಸಂಬಂಧಿಸಿದ ಪಠ್ಯಕ್ರಮವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯ, ಕರ್ನಾಟಕ, ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ನರ್ಸಿಂಗ್ ಕೋರ್ಸ್ಗೆ ನಿಗದಿಪಡಿಸಿದ ವಿಷಯಗಳನ್ನು ಒಳಗೊಂಡಿರುತ್ತದೆ. ವಿವರಗಳನ್ನು ಅನುಬಂಧ-07 ರಲ್ಲಿ ವಿವರಿಸಲಾಗಿದೆ.
ಆಯ್ಕೆಯಾದ ಸಿಪಿಸಿಹೆಚ್ ಸಂಯೋಜಿತ ಪಠ್ಯಕ್ರಮ ತಂಡದ ಬಿ.ಎಸ್ಸಿ/ಪೋಸ್ಟ್ ಬಿ.ಎಸ್ಸಿ ನರ್ಸಿಂಗ್ ಪದವೀಧರರು ರೂ.1.0 ಲಕ್ಷಗಳ ಭದ್ರತಾ ಬಂಧಪತ್ರವನ್ನು ಸಲ್ಲಿಸಬೇಕು. (ನಮೂನೆಯನ್ನು ಅನುಬಂಧ-8ಎ ರಲ್ಲಿ ನೀಡಲಾಗಿದೆ) ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ
ಸಂಯೋಜಿತರಹಿತ ಪಠ್ಯಕ್ರಮದ ಅಭ್ಯರ್ಥಿಗಳು ರೂ.1.38 ಲಕ್ಷಗಳ ಭದ್ರತಾ ಬಂಧ ಪತ್ರವನ್ನು (ನಮೂನೆಯನ್ನು ಅನುಬಂಧ-8 ರಲ್ಲಿ ನೀಡಲಾಗಿದೆ) ಆಯ್ಕೆಯಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಗೆ ಸಲ್ಲಿಸಬೇಕು.