ಬೆಳಗಾವಿ : ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಂಸದ ರಮೇಶ್ ಕತ್ತಿ ಹಿಂದೂ ಧರ್ಮದ ಬಗ್ಗೆ ನೀಡಿದ್ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ‘ಹಿಂದೂ’ ಎಂಬುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದ. ಹಿಂದೂ ಪದದ ಅರ್ಥವೇ ಅಶ್ಲೀಲ ಎಂಬುದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಬೆನ್ನಲ್ಲೇ ಹಿಂದೂ ಧರ್ಮ ಎನ್ನವುದು ಇಲ್ಲ ಅದೊಂದು ಬಳುವಳಿ ಜೀವನಶೈಲಿ ಎಂದು ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಏನಿದು ವಿವಾದ..?
ನಾನು ಬಹಳಷ್ಟು ಪುಸ್ತಕಗಳನ್ನು ಓದಿದ್ದೇನೆ. ಈ ಹಿಂದೂ ಧರ್ಮ ಎನ್ನವುದು ಇಲ್ಲ ಅದೊಂದು ಬಳುವಳಿ ಜೀವನಶೈಲಿ. ನಮ್ಮಲ್ಲಿರುವ ಸನಾತನ ಧರ್ಮದ ಮೂಲ ಹಿಂದೂ ಮಹಾಸಾಗರ, ಹಿಮಾಲಯ ಪ್ರದೇಶದ, ಸಿಂದೂ ನದಿ ಭಾಗದ ಜನರು ಜನಿಸುವ ಸಂದರ್ಭದಲ್ಲಿ ಹಿಂದೂ ಅಂತಾ ಮಾಡಿದ್ರೂ ಹೊರತು ಅದು ಧರ್ಮ ಅಲ್ಲ ಅದು ನಾಗರಿಕತೆ ಎಂದು ಹಿಂದುತ್ವದ ಬಗ್ಗೆ ರಮೇಶ್ ಕತ್ತಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಂದೂ ಬಗ್ಗೆ ಸತೀಶ್ ವಿವಾದ
‘ಹಿಂದೂ’ ಎಂಬುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದ. ಹಿಂದೂ ಪದದ ಅರ್ಥವೇ ಅಶ್ಲೀಲ ಎಂಬುದಾಗಿ ಹೇಳಿಕೆ ನೀಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ವಿವಾದ ಸೃಷ್ಟಿಸಿದ್ದರು.
ಈ ಹೇಳಿಕೆ ದೊಡ್ಡದಾಗುತ್ತಿದ್ದಂತೆ ಸತೀಶ್ ಜಾರಕಿಹೊಳಿ ಯೂ ಟರ್ನ್ ಹೊಡೆದಿದ್ದು, ನಾನು ಆ ಅರ್ಥದಲ್ಲಿ ಹೇಳಿಲ್ಲ ಎಂದಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಜಾರಕಿಹೊಳಿ , ಸಿಂಧು ನದಿಯಿಂದ ಆಚೆಗೆ ವಾಸಿಸುವ ಜನರ ಕುರಿತು ಪರ್ಷಿಯನ್ ಭೌಗೋಳಿಕ ಪ್ರದೇಶದಲ್ಲಿ ಮೊದಲಿಗೆ ಹಿಂದೂ ಶಬ್ದ ಬಳಕೆಗೆ ಬಂದಿತು. ಕ್ರಿ.ಪ್ರೊ.550-486 ಸಂದರ್ಭದಲ್ಲಿ ನಿರ್ದಿಷ್ಟವಾಗಿ ಆರನೇ ಶತಮಾನದಲ್ಲಿ ನಮೂದಿಸಲಾಗಿದೆ. ಇದರ ಮೂಲ ವಿಕಿಪೀಡೀಯಾವಾಗಿದೆ. ಹಿಂದು ಪದದ ಕುರಿತು ವಿವಿಧ ಲೇಖಕರು ಬರೆದ ವಿಕಿಪೀಡಿಯಾ ಲೇಖನಗಳ ಆಧಾರದಲ್ಲಿ ನಾನು ಮಾತನಾಡಿದ್ದೆ , ಇದು ನನ್ನ ವೈಯಕ್ತಿಯ ಅಭಿಪ್ರಾಯವಲ್ಲ ಎಂದು ಯೂ ಟರ್ನ್ ಹೊಡೆದಿದ್ದಾರೆ.
ಕಾಂಗ್ರೆಸ್ನಂತೆ ಬಿಜೆಪಿ ಪಕ್ಷವು ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ – ಸಚಿವ ಡಾ.ಕೆ.ಸುಧಾಕರ್