ನವದೆಹಲಿ : ಪ್ರಸ್ತುತ ಡಿಜಿಟಲ್ ಯುಗ ನಡೆಯುತ್ತಿದ್ದು, ಇಡೀ ಜಗತ್ತು ಡಿಜಿಟಲ್ ಆಗಿದೆ. ಹಣಕಾಸು ವಹಿವಾಟು ಕೂಡ ಡಿಜಿಟಲ್ ಮೂಲಕ ನಡೆಯುತ್ತಿದೆ. ಭಾರತದಲ್ಲಿ ನೋಟು ಅಮಾನ್ಯೀಕರಣದ ನಂತರ ಡಿಜಿಟಲ್ ವಹಿವಾಟು ಹೆಚ್ಚಾಗಿದೆ. ಆದ್ರೆ, ಡಿಜಿಟಲ್ ವಹಿವಾಟು ಎಷ್ಟೇ ಹೆಚ್ಚಾಗುತ್ತಿದ್ದರೂ ನಗದು ಚಲಾವಣೆ ಕಡಿಮೆಯಾಗುತ್ತಿಲ್ಲ ಎಂದು ಆರ್ ಬಿಐ ಹೇಳುತ್ತಿದೆ. ಅದಕ್ಕೆ ಸಂಬಂಧಿಸಿದ ಲೆಕ್ಕಾಚಾರವನ್ನ ಅಧಿಕೃತವಾಗಿ ಬಿಡುಗಡೆ ಮಾಡಿದೆ. ನೋಟು ರದ್ದತಿ ನಡೆದು ಆರು ವರ್ಷಗಳು ಕಳೆದಿವೆ. ಆದ್ರೆ, ನೋಟು ಅಮಾನ್ಯೀಕರಣದ ಸಮಯಕ್ಕಿಂತ ಈಗ ಜನರ ಬಳಿ ಹೆಚ್ಚು ನಗದು ಇದೆ ಎಂದು ಆರ್ಬಿಐ ಹೇಳಿದೆ. ಅಂದಿಗೆ ಹೋಲಿಸಿದ್ರೆ ಈಗ ಜನರ ಬಳಿ ಶೇ.70ಕ್ಕಿಂತ ಹೆಚ್ಚು ಹಣವಿದೆ ಎಂದು ಹೇಳಿದೆ.
ಅಕ್ಟೋಬರ್ 21, 2022ರ ಹೊತ್ತಿಗೆ ಜನರು ಹೊಂದಿರುವ ನಗದು ಮೌಲ್ಯವು ಸುಮಾರು 31 ಲಕ್ಷ ಕೋಟಿ ರೂಪಾಯಿಗಳು ಎಂದು ಆರ್ಬಿಐ ಬಹಿರಂಗಪಡಿಸಿದೆ. ಇದು ದೊಡ್ಡ ನೋಟುಗಳನ್ನ ಅಮಾನ್ಯಗೊಳಿಸಿದಾಗ ಜನರ ಬಳಿಯಿದ್ದ ನಗದು ಮೌಲ್ಯಕ್ಕಿಂತ 71.84 ಪ್ರತಿಶತ ಅಧಿಕವಾಗಿದೆ ಎಂದು ಅದು ಹೇಳಿದೆ. ನವೆಂಬರ್ 4, 2016ರ ಹೊತ್ತಿಗೆ, ನೋಟು ಅಮಾನ್ಯೀಕರಣದ ಸಮಯದಲ್ಲಿ ಜನರ ಬಳಿ 17.7 ಲಕ್ಷ ಕೋಟಿ ರೂಪಾಯಿ ಇತ್ತು, ಆದರೆ ಅದು 30.88 ಲಕ್ಷ ಕೋಟಿಗೆ ಹೆಚ್ಚಾಗಿದೆ. ಸಾಮಾನ್ಯ ವಹಿವಾಟು, ವ್ಯಾಪಾರ ವಹಿವಾಟು ಮತ್ತು ಸರಕುಗಳ ಖರೀದಿಗೆ ಬಳಸುವ ಹಣವನ್ನ ಜನರು ಹೊಂದಿರುವ ನಗದು ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ ಗಳಲ್ಲಿರುವ ಹಣವನ್ನು ಚಲಾವಣೆಯಲ್ಲಿರುವ ಒಟ್ಟು ನಗದಿನಿಂದ ಕಡಿತಗೊಳಿಸಿದರೆ ಜನರ ಬಳಿ ಇರುವ ಹಣ 31 ಲಕ್ಷ ಕೋಟಿ ಇರುವುದು ಕಂಡು ಬಂದಿದೆ. ನೋಟು ಅಮಾನ್ಯೀಕರಣದ ಆರು ವರ್ಷಗಳ ನಂತರವೂ ನಗದು ಚಲಾವಣೆ ಕಡಿಮೆಯಾಗಿಲ್ಲ ಅನ್ನೋದನ್ನ ಆರ್ಬಿಐ ಸಾಬೀತು ಮಾಡಿದೆ.
ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ – ಸಿಎಂ ಬೊಮ್ಮಾಯಿ
BIGG NEWS: ವಿ.ಸಭಾ ಚುನಾವಣೆಗೂ ಮುನ್ನ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಗೆ ಬಿಗ್ ಶಾಕ್: 26 ನಾಯಕರು BJP ಸೇರ್ಪಡೆ