ಬೆಂಗಳೂರು : 2000 ದಿಂದ 2022 ರವರೆಗಿನ ಸೋನಿಯಾ ಗಾಂಧಿ ಅವಧಿಯಲ್ಲಿ ರಾಹುಲ್ ಗಾಂಧಿ ಚುನಾವಣೆಯಿಲ್ಲದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಹೇಗೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಟ್ವೀಟ್ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಬಿಜೆಪಿ ನಕಲಿ ಗಾಂಧಿ ಪರಿವಾರಕ್ಕಾದರೇ “ಅಧ್ಯಕ್ಷರ ನೇಮಕ” ಇತರರಿಗಾದರೆ “ಚುನಾaವಣೆ”, ಇದು ನಿಮ್ಮ ನೀತಿಯೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದೆ.
ಬಿಜೆಪಿ ಪಕ್ಷದ ನೀತಿ ನಿಯಮದಂತೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ನಡೆಯುತ್ತದೆ. ಜೆಡಿಎಸ್ ಪಕ್ಷದಿಂದ ವಲಸೆ ಬಂದ ಸಿದ್ದರಾಮಯ್ಯ
ಅವರಿಗೆ ಕಾಂಗ್ರೆಸ್ಸಿನ ಅಸಲಿ ಕಥೆ ತಿಳಿದಿದೆಯೇ? ಸುಮಾರು 137 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷೀಯ ಹುದ್ದೆಗೆ ಕೇವಲ 6 ಬಾರಿ ಮಾತ್ರ ಚುನಾವಣೆ ನಡೆದಿದ್ದೇಕೆ? ಎಂದು ಪ್ರಶ್ನಿಸಿದೆ.
ನೇತಾಜಿ ಮತ್ತು ಪುರುಷೋತ್ತಮ್ ಟಂಡನ್ ವಿರುದ್ಧ ತೆರೆಮರೆಯ ಕಸರತ್ತು ನಡೆಸಿ ಅವರನ್ನು ರಾಜಿನಾಮೆ ಕೊಡಿಸುವಂತೆ ಮಾಡಿದ ನೆಹರೂ ಯಾವುದೇ ಚುನಾವಣೆಯಿಲ್ಲದೆ ಮೂರು ಬಾರಿ ಅಧ್ಯಕ್ಷರಾದರು. ಆಗ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರಲಿಲ್ಲವೇ ಎಂದು ಬಿಜೆಪಿ ಕಿಡಿಕಾರಿದೆ.
2000 ದಿಂದ 2022 ರವರೆಗಿನ ಸೋನಿಯಾ ಗಾಂಧಿ ಅವಧಿಯಲ್ಲಿ ರಾಹುಲ್ ಗಾಂಧಿ ಚುನಾವಣೆಯಿಲ್ಲದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಹೇಗೆ?
ನಕಲಿ ಗಾಂಧಿ ಪರಿವಾರಕ್ಕಾದರೇ "ಅಧ್ಯಕ್ಷರ ನೇಮಕ" ಇತರರಿಗಾದರೆ "ಚುನಾವಣೆ", ಇದು ನಿಮ್ಮ ನೀತಿಯೇ @siddaramaiah?#ಉತ್ತರಿಸಿಸಿದ್ದರಾಮಯ್ಯ
— BJP Karnataka (@BJP4Karnataka) November 8, 2022
ಬರೋಬ್ಬರಿ 22 ವರ್ಷಗಳ ಬಳಿಕ ಅಂದರೆ 2022 ರಲ್ಲಿ ಭಾರತೀಯರೊಬ್ಬರನ್ನು ಕಾಂಗ್ರೆಸ್ ತನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ.
ಕಾಂಗ್ರೆಸ್ ಕೊನೆಯ ಎರಡು ಅಧ್ಯಕ್ಷರನ್ನು ಬದಲಾಯಿಸುವ ವೇಳೆಯೊಳಗೆ, ಬಿಜೆಪಿ ಪಕ್ಷದಲ್ಲಿ 10 ಅಧ್ಯಕ್ಷರು ಕಾರ್ಯ ನಿರ್ವಹಿಸಿದ್ದಾರೆ.
ಯಾವ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಹೆಚ್ಚಿದೆ?#ಉತ್ತರಿಸಿಸಿದ್ದರಾಮಯ್ಯ
— BJP Karnataka (@BJP4Karnataka) November 8, 2022
BIGG NEWS : ಪ್ರವಾಸಿಗರೇ ಗಮನಿಸಿ : ಕೊಡಗಿನ ಪ್ರಸಿದ್ದ ತಾಣ ‘ಕಾವೇರಿ ನಿಸರ್ಗಧಾಮ’ಕ್ಕೆ ಪ್ರವೇಶ ನಿರ್ಬಂಧ