ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಬಾಳೆ ಎಲೆ ಊಟ ಮಾಡುವುದಕ್ಕೆ ಬಯಸುತ್ತಾರೆ. ಹಳ್ಳಿ ಕಡೆ ಸಾಮಾನ್ಯವಾಗಿ ದಿನ ನಿತ್ಯ ಸಾಗುತ್ತದೆ. ಆದರೆ ಸಿಟಿಯಲ್ಲಿ ಮಾತ್ರ ಹಬ್ಬ ಹರಿದಿನಗಳಲ್ಲಿ ಸಿಗುತ್ತದೆ.
BIGG NEWS: ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್: ಪ್ರಸಾದ ವ್ಯವಸ್ಥೆಯಲ್ಲಿ ಬದಲಾವಣೆ
ಅದರಲ್ಲೂ ಹಬ್ಬದಿನಗಳಲ್ಲಿ ಬಾಳೆ ಎಲೆ ಊಟ ಅಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ವಿಶೇಷ ಅಡುಗೆ ತಯಾರಾದಾಗ, ಎಲ್ಲರೂ ಒಟ್ಟಾಗಿ ಕುಳಿತು ಬಾಳೆಲೆಯಲ್ಲಿ ಊಟ ಮಾಡುವ ಸಂಪ್ರದಾಯವಿದೆ. ಬಿಸಿ ಊಟವನ್ನು ಬಾಳೆಲೆಯಲ್ಲಿ ಹಾಕಿ ತಿಂದರೆ ವಿಭಿನ್ನ ಪರಿಮಳದೊಂದಿಗೆ ರುಚಿ ಹೆಚ್ಚಾಗುತ್ತದೆ. ಈ ಬಾಳೆ ಎಲೆಯಲ್ಲಿ ಊಟ ಮಾಡುವುದು ಕೇವಲ ಸಂಪ್ರದಾಯವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ.
BIGG NEWS: ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್: ಪ್ರಸಾದ ವ್ಯವಸ್ಥೆಯಲ್ಲಿ ಬದಲಾವಣೆ
ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಊಟ ಮಾಡುವಾಗ ಪ್ರತಿನಿತ್ಯ ಬಾಳೆ ಎಲೆಯನ್ನು ಬಳಸುತ್ತಿದ್ದರು. ಅತಿಥಿಗಳಿಂಗಳಂತೂ ಬಾಳೆಲೆಯಲ್ಲಿ ಊಟ ಬಡಿಸಿದರೆ ಗೌರವ. ಆದರೆ, ಇಂದಿನ ದಿನಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಾಳೆಲೆ ಬಳಸಲಾಗುತ್ತಿದೆ. ಹಾಗಾದ್ರೆ ಬನ್ನಿ ಈ ಬಾಳೆ ಎಲೆಊಟವನ್ನು ಯಾಕೆ ಬಳಸುತ್ತಾರೆ ನೋಡೋಣ
ಬಾಳೆ ಎಲೆಯ ಗಾತ್ರ
ಮೊದಲ ಆಯ್ಕೆ ಇದುವೇ. ಬಾಳೆ ಎಲೆಯ ಗಾತ್ರ ತುಂಬಾ ದೊಡ್ಡದು. ತಟ್ಟೆಯಲ್ಲಿ ಬಡಿಸುವುದಕ್ಕಿಂತ ಬಾಳೆಲೆಗೆ ಆಹಾರ ಬಡಿಸಲು ತುಂಬಾ ಅನುಕೂಲಕರ. ಅಲ್ಲದೆ ಇದರಲ್ಲಿ ತಿನ್ನಲು ಕೂಡಾ ಸುಲಭ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಬಗೆಬಗೆಯ ಹತ್ತು ಹಲವು ಅಡುಗೆ ಮಾಡಲಾಗುತ್ತದೆ. ಅಂತಹ ಸಮಾರಂಭದಲ್ಲಿ ಬಡಿಸಲು ದೊಡ್ಡ ಪ್ಲೇಟ್ ಅಗತ್ಯವಿದೆ. ಆಗ ಬಾಳೆಲೆಯಲ್ಲಿ ಬಡಿಸುವುದು ತುಂಬಾ ಸುಲಭವಾಗುತ್ತದೆ.
BIGG NEWS: ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್: ಪ್ರಸಾದ ವ್ಯವಸ್ಥೆಯಲ್ಲಿ ಬದಲಾವಣೆ
ತುಂಬಾ ಅಗ್ಗ
ಬಾಳೆ ಎಲೆ ವ್ಯಾಪಕವಾಗಿ ಲಭ್ಯವಿರುವುದು ಮಾತ್ರವಲ್ಲದೆ ಅತ್ಯಂತ ಅಗ್ಗವೂ ಹೌದು. ನಗರ ಪ್ರದೇಶಗಳಲ್ಲೂ ಹಣ ಪಾವತಿಸಿದರೆ ಸಿಗುತ್ತದೆ. ಹಳ್ಳಿಗಳಲ್ಲಂತೂ ತೋಟಗಳಲ್ಲಿ ಹಣಕೊಡದೆ ಪಡೆಯಬಹುದು.
ಪರಿಮಳ
ಬಾಳೆ ಎಲೆಯ ಮೇಲೆ ಮೇಣದಂತಹ ತೆಳುವಾದ ನೈಸರ್ಗಿಕ ಪದರವಿದೆ. ಇದರ ಮೇಲೆ ಬಿಸಿಯಾದ ಆಹಾರ ಬಡಿಸಿದಾಗ ಅದು ಕರಗುತ್ತದೆ. ಅದು ಕರಗಿದಾಗ, ಒಂದು ರೀತಿಯ ಸಿಹಿ ಘಮವನ್ನು ನೀಡುತ್ತದೆ. ಇದು ಆಹಾರದೊಂದಿಗೆ ಬೆರೆತು ವಿಶಿಷ್ಟವಾದ ಪರಿಮಳವನ್ನು ಹೊರಸೂಸುತ್ತದೆ.
ಪರಿಸರ ಸ್ನೇಹಿ
ಬಾಳೆಲೆಯನ್ನು ತಿಂದು ಎಸೆದರೆ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗುವುದಿಲ್ಲ. ಎಸೆದ ಕೆಲವೇ ದಿನಗಳಲ್ಲಿ ಕೊಳೆತು ಮಣ್ಣಿನೊಂದಿಗೆ ಬೆರೆಯುತ್ತವೆ. ಆದರೆ ಪ್ಲಾಸ್ಟಿಕ್ ಪ್ಲೇಟ್ಗಳು ಹಾಗಲ್ಲ. ಅವುಗಳು ವರ್ಷಗಳಾದರೂ ಕೊಳೆಯುವುದಿಲ್ಲ. ಇವುಗಳಿಂದ ಪರಿಸರಕ್ಕೆ ಆಗುವ ಹಾನಿ ಅಪಾರ. ಆದರೆ, ಬಾಳೆ ಎಲೆಗಳು ಪ್ರಕೃತಿಯ ಸಿದ್ಧಪಡಿಸಿದ ಪ್ಲೇಟ್.