ಚಿಕ್ಕಮಗಳೂರು: ಚಂದ್ರಗ್ರಹಣದ ಹಿನ್ನೆಲೆ ಇಂದು ಸಂಜೆವರೆಗೂ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಿವೆ.
ಪ್ರಮುಖವಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಗ್ಗೆ 11 ರಿಂದ 12 ಗಂಟೆ ತನಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 1.30 ಕ್ಕೆ ಅನ್ನಪೂರ್ಣೇಶ್ವರಿಗೆ ಮಹಾಮಂಗಳಾರತಿ ನಡೆಯುತ್ತಿದೆ. ಸಂಜೆ 4 ಗಂಟೆವರೆಗೆ ಅರ್ಚನೆ ನಡೆಯಲಿದೆ.ಗ್ರಹಣ ಮೋಕ್ಷ ಕಾಲದ ಬಳಿಕ ಶುದ್ಧಿ ಕಾರ್ಯದ ನಂತರವೇ ಪೂಜೆ-ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಗ್ರಹಣ ಆರಂಭದಿಂದ ಅಂತ್ಯದವರೆಗೂ ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ ಜರುಗಲಿದೆ. ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಎಂದಿನಂತೆ ಪೂಜೆ ನೆರವೇರಲಿದೆ.ಗ್ರಹಣದ ವೇಳೆಯೂ ದರ್ಶನಕ್ಕೆ ಅವಕಾಶವಿದೆ. ಆದರೆ ಮಧ್ಯಾಹ್ನದ ಅನ್ನಪ್ರಸಾದ ಸೇರಿದಂತೆ ಯಾವುದೇ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಗ್ರಹಣದ ಬಳಿಕ ಪೂಜೆ-ಪ್ರಸಾದ ಎಂದಿನಂತೆ ನಡೆಯಲಿದೆ.