ಹೊಸದಿಲ್ಲಿ: ನಮೀಬಿಯಾದಿಂದ ಭಾರತಕ್ಕೆ ಬಂದಿರುವ 8 ಆಫ್ರಿಕನ್ ಚೀತಾಗಳ ಪೈಕಿ ಎರಡು ಚೀತಾಗಳು ಮೊದಲ ಬಲಿ ಪಡೆದಿವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್ನಲ್ಲಿಟ್ಟಿದ್ದ 8 ಚೀತಾಗಳಲ್ಲಿ 2 ಚೀತಾಗಳನ್ನು ವಿಸ್ತಾರವಾದ ಅರಣ್ಯ ವಲಯಕ್ಕೆ ಬಿಡಲಾಗಿತ್ತು. ಕ್ವಾರಂಟೈನ್ನಿಂದ ಬಿಡುಗಡೆಯಾದ 24 ಗಂಟೆಗಳಲ್ಲೇ ಚೀತಾಗಳು ಜಿಂಕೆಯನ್ನು ಬೇಟೆಯಾಡಿರುವ ಬಗ್ಗೆ ವರದಿಯಾಗಿದೆ.
BIGG NEWS: ಇನ್ಮುಂದೆ EDಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು: ಡಿ.ಕೆ ಸುರೇಶ್
ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಜಿಂಕೆಯನ್ನು ಚೀತಾಗಳು ಬೇಟೆಯಾಡಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಚೀತಾಗಳ ಸ್ಥಳಾಂತರದ ಬಳಿಕ ಇದು ಅವುಗಳ ಮೊದಲ ಬೇಟೆಯಾಗಿದೆ. ಸೆಪ್ಟೆಂಬರ್ 17ರಿಂದ ನಮೀಬಿಯಾದಿಂದ ಬಂದ 8 ಚೀತಾಗಳನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಅವುಗಳ ಪೈಕಿ ಫ್ರೆಡ್ಡಿ ಮತ್ತು ಎಲ್ಟನ್ ಎಂಬ ಚೀತಾಗಳನ್ನು ನವೆಂಬರ್ 5ರಂದು ಅರಣ್ಯಕ್ಕೆ ಸ್ಥಳಾಂತರಿಸಿ, ಕಾಡಿಗೆ ಬಿಡಲಾಗಿದೆ. ಅರಣ್ಯಕ್ಕೆ ಬಿಟ್ಟ 24 ಗಂಟೆಗಳಲ್ಲಿ ಜಿಂಕೆಯನ್ನು ಬಲಿ ಪಡೆದಿವೆ.
Kuno Cheetahs make their first hunt a day after shifting to large enclosure
Read @ANI Story | https://t.co/qzXc0Mjv7u#Kuno #Cheetahs #Kunonationalpark #KunoCheetahs pic.twitter.com/5px7q2j8WG
— ANI Digital (@ani_digital) November 7, 2022
ಇನ್ನು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರವಷ್ಟೇ ಟ್ವೀಟ್ ಮಾಡಿ ಚೀತಾಗಳು ಆರೋಗ್ಯಕರವಾಗಿದ್ದು, ಸಕ್ರಿಯವಾಗಿವೆ. ಭಾರತದ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಿವೆ ಎಂದು ಮಾಹಿತಿ ನೀಡಿದ್ದರು. ಜೊತೆಗೆ ಎರಡು ಚೀತಾಗಳ ಬಿಡುಗಡೆಯ ಕಿರು ವಿಡಿಯೋವನ್ನು ಕೂಡ ಮೋದಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.
Great news! Am told that after the mandatory quarantine, 2 cheetahs have been released to a bigger enclosure for further adaptation to the Kuno habitat. Others will be released soon. I’m also glad to know that all cheetahs are healthy, active and adjusting well. 🐆 pic.twitter.com/UeAGcs8YmJ
— Narendra Modi (@narendramodi) November 6, 2022
“ಇದೊಂದು ಒಳ್ಳೆಯ ಸುದ್ದಿ. ಕಡ್ಡಾಯ ಕ್ವಾರಂಟೈನ್ ಬಳಿಕ, ಕುನೋ ಆವಾಸ ಸ್ಥಾನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂಬ ಮಾಹಿತಿ ಬಂದಿದೆ. ಉಳಿದ ಚೀತಾಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಎಲ್ಲಾ ಚೀತಾಗಳು ಆರೋಗ್ಯಕರವಾಗಿದ್ದು, ಸಕ್ರಿಯವಾಗಿವೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಅವುಗಳು ಭಾರತದ ವಾತಾವರಣಕ್ಕೆ ಚೆನ್ನಾಗಿ ಹೊಂದಾಣಿಕೆಯಾಗುತ್ತಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.
ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ವನ್ಯ ಜೀವಿಗಳನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸ್ಥಳಾಂತರಿಸುವ ಮೊದಲು ಮತ್ತು ನಂತರ ಪ್ರಾಣಿಗಳನ್ನು ಕ್ವಾರಂಟೈನ್ನಲ್ಲಿಡುವುದು ಕಡ್ಡಾಯವಾಗಿದೆ. ಏಕೆಂದರೆ ಯಾವುದೇ ಸೋಂಕಿನ ಹರಡುವಿಕೆಯ ಪರಿಶೀಲನೆ ಹಾಗೂ ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡಲು ಒಂದು ತಿಂಗಳ ಕಾಲ ಪ್ರಾಣಿಗಳನ್ನು ಕ್ವಾರಂಟೈನ್ನಲ್ಲಿಡಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
BIGG NEWS: ಇನ್ಮುಂದೆ EDಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು: ಡಿ.ಕೆ ಸುರೇಶ್
ಇನ್ನು, ಸದ್ಯ ಚೀತಾಗಳನ್ನು 6 ಆವರಣಗಳಲ್ಲಿ ಇರಿಸಲಾಗಿದ್ದು, ಎಮ್ಮೆ ಮಾಂಸವನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಕಾರ್ಯಪಡೆಯ ಸದಸ್ಯರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರೊಜೆಕ್ಟ್ ಚೀತಾದ ಭಾಗವಾಗಿ 8 ಆಫ್ರಿಕನ್ ಚೀತಾಗಳನ್ನು ನಮೀಬಿಯಾದಿಂದ ತಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸೆಪ್ಟೆಂಬರ್ 17ರಂದು ಬಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಚೀತಾಗಳನ್ನು ಭಾರತದಲ್ಲಿ ಮರುಪರಿಚಯಿಸಲಾಯಿತು. 30 ರಿಂದ 66 ತಿಂಗಳ ವಯಸ್ಸಿನ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಭಾರತಕ್ಕೆ ತರಲಾಗಿದ್ದು, ಫ್ರೆಡ್ಡಿ, ಆಲ್ಟನ್, ಸವನ್ನಾ, ಸಾಶಾ, ಒಬಾನ್, ಆಶಾ, ಸಿಬಿಲಿ ಮತ್ತು ಸೈಸಾ ಎಂದು ಹೆಸರಿಡಲಾಗಿದೆ.
BIGG NEWS: ಇನ್ಮುಂದೆ EDಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು: ಡಿ.ಕೆ ಸುರೇಶ್