ಬೆಳಗಾವಿ: ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್ಚಿನ ಒತ್ತಡ ಇದೆ. ಸಾವಿರಾರು ಜನ ಹೆಣ್ಣು ಮಕ್ಕಳ ಮನೆ ಎದುರು ಧರಣಿ ಮಾಡ್ತೇವೆ ಅಂತಾ ಒತ್ತಡ ಹಾಕಿದಲ್ಲದೇ ಪತ್ರ ಬರೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುರುಘ ಮಠದಲ್ಲಿ ಡ್ರಗ್ಸ್ ದಂಧೆ: ಚಾರ್ಜ್ಶೀಟ್ನಲ್ಲಿ ಬೆಚ್ಚಿ ಬೀಳಿಸಿದ ವರದಿ ಉಲ್ಲೇಖ
ನಗರದಲ್ಲಿ ಮಾತನಾಡಿದ ಅವರು, ಕೋಲಾರದಲ್ಲೂ ನಿಂತುಕೊಳ್ಳಬೇಕು ಅಂತಾ ಹೇಳ್ತಿದ್ದಾರೆ. ವರುಣಾದಿಂದ ನಿಂತುಕೊಳ್ಳಬೇಕು ಅಂತಾ ನಮ್ಮ ಹುಡುಗ ಹೇಳ್ತಿದ್ದಾನೆ. ಚಾಮರಾಜಪೇಟೆಯಿಂದ ನಿಂತುಕೊಳ್ಳಬೇಕು ಅಂತಾ ಜಮೀರ್ ಹೇಳುತ್ತಿದ್ದಾನೆ ಎಂದು ಹೇಳಿದ್ದಾಳೆ.ಬಾದಾಮಿ ಕ್ಷೇತ್ರದಿಂದ ಸ್ಪರ್ಧೇಗೆ ಹೆಚ್ಚಿನ ಒತ್ತಡ ಇದೆ. ಸಾವಿರಾರು ಜನ ಹೆಣ್ಣು ಮಕ್ಕಳು ಮನೆ ಎದುರು ಧರಣಿ ಮಾಡ್ತೇವೆ ಅಂತಾ ಒತ್ತಡ ಹಾಕಿದಲ್ಲದೇ ಪತ್ರ ಬರೆದಿದ್ದಾರೆ.
ಮುರುಘ ಮಠದಲ್ಲಿ ಡ್ರಗ್ಸ್ ದಂಧೆ: ಚಾರ್ಜ್ಶೀಟ್ನಲ್ಲಿ ಬೆಚ್ಚಿ ಬೀಳಿಸಿದ ವರದಿ ಉಲ್ಲೇಖ
ನಾನು ಏಕೆ ಯೋಚನೆ ಮಾಡ್ತಿದ್ದೀನಿ ಅಂದ್ರೆ ವಾರಕ್ಕೊಮ್ಮೆ ಹೋಗಿ ಅಲ್ಲಿ ಇರೋದಕ್ಕೆ ಆಗೋದಿಲ್ಲ. ಕಾರ್ಯಕರ್ತರಿಗೆ ಜನರಿಗೆ ಸಿಗೋದಕ್ಕಾಗಲ್ಲ, ಅವರ ಕಷ್ಟ ಸುಖಗಳಿಗೆ ಸ್ಪಂದಿಸೋದಕ್ಕೆ ಆಗೋದಿಲ್ಲ. ನೀವು ಬಂದು ನಿಂತುಕೊಳ್ಳಿ ಅಂತಾ ಅವರು ಹೇಳಬಹುದು. ಆದರೆ ನನಗೆ ಮನಸು ಒಪ್ಪುತ್ತಿಲ್ಲ. 2 ತಿಂಗಳಿನಿಂದ ಬಾದಾಮಿಗೇ ಹೋಗಿಲ್ಲ. ನಾಳೆ ಹೋಗಬೇಕೆಂದುಕೊಂಡಿದ್ದೆ, ಅದೂ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ.