ನವದೆಹಲಿ: ದೇಶದ ಸಿಮೆಂಟ್ ಕಂಪನಿಗಳು ಈ ತಿಂಗಳು ಪ್ರತಿ ಚೀಲಕ್ಕೆ 10ರಿಂದ 30 ರೂಪಾಯಿವರೆಗೆ ಬೆಲೆ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಅಕ್ಟೋಬರ್ನಲ್ಲಿ ಸಿಮೆಂಟ್ ದರ 3ರಿಂದ 4 ರೂಪಾಯಿ ಏರಿಕೆ ಮಾಡಲಾಗಿತ್ತು ಎಂದು ಎಂಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವಿಸಸ್ ಇತ್ತೀಚಿನ ವಲಯವಾರು ವರದಿಯಲ್ಲಿ ತಿಳಿಸಿದೆ.
ತಿಂಗಳಿಂದ ತಿಂಗಳ (ಎಂಒಎಂ) ಆಧಾರದ ಮೇಲೆ, ಪೂರ್ವ ಮತ್ತು ದಕ್ಷಿಣದಲ್ಲಿ ಬೆಲೆಗಳು ಶೇಕಡ 2ರಿಂದ 3ರಷ್ಟು ಹಾಗೂ ಪಶ್ಚಿಮದಲ್ಲಿ ಸುಮಾರು ಶೇ. ಒಂದರಷ್ಟು ಏರಿತ್ತು.
ಉತ್ತರ ಮತ್ತು ಮಧ್ಯ ವಲಯಗಳಲ್ಲಿ ಶೇಕಡ 1ರಿಂದ 2ರಷ್ಟು ಇಳಿಕೆಯಾಗುತ್ತಿದೆ ಎಂದು ವರದಿ ತಿಳಿಸಿದೆ. ಮುಂಗಾರು ವಿಳಂಬ ನಿರ್ಗಮನ ಹಾಗೂ ಹಬ್ಬಗಳ ರಜಾ ಕಾರಣದಿಂದ ಕಾರ್ಮಿಕರ ಕೊರತೆಯಾಗಿದ್ದು ಈ ವರ್ಷ ಅಕ್ಟೋಬರ್ನಲ್ಲಿ ಬೇಡಿಕೆ ಮೇಲೆ ಪರಿಣಾಮ ಬೀರಿದೆ. ಮುಂಬರುವ ವಾರಗಳಲ್ಲಿ ಬೇಡಿಕೆ ಸುಧಾರಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.