ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೈಕಲ್ ಸವಾರರಿಗೆ ಉತ್ತೇಜನ ನೀಡಲು ನಗರದ ಹೃದಯ ಭಾಗದಲ್ಲಿ 8.7 ಕಿ.ಮೀ. ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದೆ. 4 ಕೋಟಿ ರೂ. ವೆಚ್ಚದಲ್ಲಿ ಈ ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದ್ದು, ಇನ್ನೆರಡು ವಾರದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಈಗಾಗಲೇ ಕಾಮಗಾರಿ ಆರಂಭ ಸಂಬಂಧ ವರ್ಕ್ ಆರ್ಡರ್ ಅನ್ನು ಪಾಲಿಕೆ ನೀಡಲಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ.
‘ಉಚಿತ UPSC, KAS ತರಬೇತಿ’ಗೆ ಅರ್ಜಿ ಸಲ್ಲಿಸಿದ್ದವರ ಗಮನಕ್ಕೆ: ಅ.11ರಂದು ಆಯ್ಕೆಗೆ ‘ಪರೀಕ್ಷೆ’
ಸೈಕಲ್ ಬಳಕೆ ಏರಿಕೆ: ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಪಿ.ಎಸ್.ವಸ್ತ್ರದ್ ಅವರು ಪ್ರತಿ ಸೋಮವಾರ ಸೈಕಲ್ನಲ್ಲಿ ಕಚೇರಿಗೆ ಬರುವ ಸಂಪ್ರದಾಯವನ್ನು ಆರಂಭಿಸಿ ಸಾರ್ವಜನಿಕರಲ್ಲಿ ಸೈಕಲ್ ಬಳಕೆಗೆ ಉತ್ತೇಜನ ನೀಡಿದ್ದರು. ಇದಕ್ಕೆ ಪೂರಕವಾಗಿ ಮೈಸೂರು ಮಹಾನಗರ ಪಾಲಿಕೆಯು ಖಾಸಗಿ ಸಹಭಾಗಿತ್ವದಲ್ಲಿ ‘ಟ್ರಿಣ್ ಟ್ರಿಣ್’ ಸೈಕಲ್ ಯೋಜನೆಯನ್ನು ಆರಂಭಿಸಿತ್ತು. ಪ್ರಾರಂಭದಲ್ಲಿ ಯೋಜನೆಗೆ ಯಶಸ್ಸು ಸಿಗದಿದ್ದರೂ, ನಂತರ ಸಾರ್ವಜನಿಕ ಬಳಕೆ ಹೆಚ್ಚಾಗಿತ್ತು. ಸೈಕಲ್ ಬಳಕೆದಾರರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪಾಲಿಕೆಯು ಸೈಕಲ್ ಸವಾರರ ಅನುಕೂಲಕ್ಕಾಗಿ ಪ್ರತ್ಯೇಕವಾಗಿ ಸೈಕಲ್ ಟ್ರ್ಯಾಕ್ ನಿರ್ಮಿಸುತ್ತಿದೆ.
‘ಉಚಿತ UPSC, KAS ತರಬೇತಿ’ಗೆ ಅರ್ಜಿ ಸಲ್ಲಿಸಿದ್ದವರ ಗಮನಕ್ಕೆ: ಅ.11ರಂದು ಆಯ್ಕೆಗೆ ‘ಪರೀಕ್ಷೆ’
“ಈಗಾಗಲೇ ಲಲಿತಮಹಲ್ ರಸ್ತೆ ಮತ್ತು ಕೆ.ಆರ್.ಎಸ್. ರಸ್ತೆಯ ಚೆಲುವಾಂಬ ಪಾರ್ಕ್ ಬಳಿ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗಿದ್ದು, ಈಗ ಹೆಚ್ಚುವರಿಯಾಗಿ 8.7 ಕಿ.ಮೀ. ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಈಗಾಗಲೇ ಖಾಸಗಿ ಏಜೆನ್ಸಿಯೊಂದಕ್ಕೆ ಜವಾಬ್ದಾರಿ ವಹಿಸಿ ವರ್ಕ್ ಆರ್ಡರ್ ನೀಡಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿ ನಿಗದಿತ ಅವಧಿಯೊಳಗೆ ಮುಗಿಯಲಿದೆ,” ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ನೋಂದಣಿ ಕೇಂದ್ರ
ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರಾದೇಶಿಕ ಸಾರಿಗೆ ಕಚೇರಿ, ಚಾಮರಾಜೇಂದ್ರ ಮೃಗಾಲಯ, ಅರಮನೆ ಬಳಿ ಕೇಂದ್ರಗಳಿವೆ.
17,300 ಮಂದಿ ನೋಂದಣಿ: ನಗರದಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಬಳಸುವ ಕುರಿತಂತೆ 17,300 ಮಂದಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡು ಕಾರ್ಡ್ ಪಡೆದಿದ್ದಾರೆ. ನಗರದಲ್ಲಿ 450 ಸೈಕಲ್ಗಳಿವೆ. ನಾನಾ 47 ಕಡೆ 52 ಡಾಕಿಂಗ್ ಸ್ಟೇಷನ್ಗಳು ಇವೆ.
‘ಉಚಿತ UPSC, KAS ತರಬೇತಿ’ಗೆ ಅರ್ಜಿ ಸಲ್ಲಿಸಿದ್ದವರ ಗಮನಕ್ಕೆ: ಅ.11ರಂದು ಆಯ್ಕೆಗೆ ‘ಪರೀಕ್ಷೆ’
ಎಲ್ಲೆಲ್ಲಿ ಟ್ರ್ಯಾಕ್ ನಿರ್ಮಾಣ?
ನಗರದ ಹೃದಯ ಭಾಗದಲ್ಲಿ ಟ್ರ್ಯಾಕ್ಗಳು ಇಲ್ಲದಿರುವುದನ್ನು ಮನಗಂಡಿರುವ ನಗರಪಾಲಿಕೆಯು ಈಗ ಪ್ರಮುಖ ಮತ್ತು ಜನನಿಬಿಡ ರಸ್ತೆಗಳಲ್ಲೇ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಮಾನಸ ಗಂಗೋತ್ರಿ ಪ್ರವೇಶದ್ವಾರದ ಕುವೆಂಪು ಪ್ರತಿಮೆಯಿಂದ ಕುಕ್ಕರಹಳ್ಳಿ ರಸ್ತೆ, ಕೌಟಿಲ್ಯ ವೃತ್ತದಿಂದ ಮುಡಾ ಕಚೇರಿ, ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ ಸರ್ಕಲ್, ಕುಕ್ಕರಹಳ್ಳಿಯಿಂದ ವಿಶ್ವ ಮಾನವ ಜೋಡಿ ರಸ್ತೆ ಮಾರ್ಗವಾಗಿ ರಿಂಗ್ ರಸ್ತೆಗೆ ಸೇರುವ ರಸ್ತೆ, ಅಶೋಕ ವೃತ್ತದಿಂದ ಟೆನಿಸ್ ಕೋರ್ಟ್, ಚಾಮರಾಜ ಜೋಡಿ ರಸ್ತೆ, ರಮಾ ವಿಲಾಸ ರಸ್ತೆ, ಕೌಟಿಲ್ಯ ವೃತ್ತದ ರಸ್ತೆ, ರಾಮಸ್ವಾಮಿ ವೃತ್ತದಿಂದ ದಾಸಪ್ಪ ವೃತ್ತ, ಮೈಸೂರು ವಿಶ್ವವಿದ್ಯಾಲಯದ ರಸ್ತೆ ತನಕ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತದೆ.
ಮೈಸೂರು ನಗರದಲ್ಲಿ ಸೈಕಲ್ ಸವಾರರಿಗೆ ಅನುಕೂಲ ಕಲ್ಪಿಸಲು 4 ಕೋಟಿ ರೂ. ವೆಚ್ಚದಲ್ಲಿ 8.7 ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಟ್ರ್ಯಾಕ್ ನಿರ್ಮಾಣ ಮಾಡಿದ ಮೇಲೆ ವಾಹನಗಳ ಬದಲು ಹೆಚ್ಚು ಸೈಕಲ್ ಬಳಸುವಂತೆ ಪ್ರಚಾರ ಮಾಡಲಾಗುವುದು ಎಂದು ಮೇಯರ್ ಶಿವಕುಮಾರ್ ಹೇಳಿದ್ರು.
‘ಉಚಿತ UPSC, KAS ತರಬೇತಿ’ಗೆ ಅರ್ಜಿ ಸಲ್ಲಿಸಿದ್ದವರ ಗಮನಕ್ಕೆ: ಅ.11ರಂದು ಆಯ್ಕೆಗೆ ‘ಪರೀಕ್ಷೆ’