ಮಂಡ್ಯ: ಜಿಲ್ಲೆಯ ಸುಪ್ರಸಿದ್ಧ ಕೆ ಆರ್ ಎಸ್ ಬೃಂದಾವನದಲ್ಲಿ ಭಾನುವಾರ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.
ಇದರಿಂದ ಕೆಆರ್ ಎಸ್ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರನ್ನು ಹೊರಗೆ ಕಳುಹಿಸಲಾಯಿತು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.ಇನ್ನು ಕೆಆರ್ ಎಸ್ ನಲ್ಲಿ ಚಿರತೆ ಬಂದಿರುವುದು ಗೊತ್ತಾಗಿದ್ದು, ಪ್ರವಾಸಿಗರಿಗೆ ಆತಂಕ ಶುರುವಾಗಿದೆ. ಸತತವಾಗಿ ಮೂರನೇ ಬಾರಿಗೆ ಬೃಂದಾವನದಲ್ಲಿ ಚಿರತೆ ಕಾಣಸಿಕೊಂಡಿದೆ. ಬೃಂದಾವನದಲ್ಲಿ ಚಿರತೆ ಸೆರೆಗೆ ಬೀನ್ ಇಟ್ಟಿದ್ದರು. ಆದರೆ ಇದುವರೆಗೂ ಚಿರತೆ ಸೆರೆಯಾಗಿಲ್ಲ.