ಬೆಂಗಳೂರು : 11,000 ಪೌರ ಕಾರ್ಮಿಕರಿಗೆ ಉದ್ಯೋಗ ನೀಡಲು ಅಧಿಸೂಚನೆ ಹೊರಡಿಸಿದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬ್ಯಾಟರಾಯನಪುರದಲ್ಲಿ ಡಾ. ಅಂಬೇಡ್ಕರ್ ಭವನ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ, “ಬುದ್ಧನ ಮಾರ್ಗದಲ್ಲಿ ನಡೆದು ಸಮಾನತೆ ಕೊಟ್ಟಿದ್ದು ಅಂಬೇಡ್ಕರ್. ಈ ಸ್ಥಾನ ಸಿಕ್ಕಿರುವುದು ಸಂವಿಧಾನದಿಂದ. ಅಂಬೇಡ್ಕರ್ರನ್ನು ಸದಾಕಾಲವೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು” ಎಂದು ಹೇಳಿದರು.
ಇನ್ನು “ಮಾನವೀಯ ಗುಣಗಳು ಇಲ್ಲದವರು ಆಡಳಿತ ಮಾಡಬಾರದು. ಆಳ್ವಿಕೆ ಮಾಡುವವರಿಗೆ ತಾಳ್ಮೆ ಮತ್ತು ಮಾನವೀಯತೆ ಗುಣಗಳಿರಬೇಕು. ಸಾಮಾಜಿಕ ನ್ಯಾಯ ರಾಜಕೀಯ ಭಾಷಣಕ್ಕೆ ಸೀಮಿತವಾಗಬಾರದು. ಸಾಮಾಜಿಕ ನ್ಯಾಯ ಒದಗಿಸುಲು ಮೀಸಲಾತಿ ಹೆಚ್ಚಿಸಿದ್ದೇನೆ. ಇನ್ನು ನ್ಯಾಯ ಸಮ್ಮತವಾದ ಹೋರಾಟಕ್ಕೆ ಸಂವಿಧಾನದಲ್ಲಿ ಅವಕಾಶವಿದೆ ಎಂದು ಹೇಳಿದರು.
ಇನ್ನು 11,000 ಪೌರ ಕಾರ್ಮಿಕರಿಗೆ ಉದ್ಯೋಗ ನೀಡಲು ಅಧಿಸೂಚನೆ ಹೊರಡಿಸಲಾಗಿದೆ. ಸಂವಿಧಾನ ಬದ್ಧವಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅರ್ಚಕರು ಸರಿಯಾಗಿ ಕೈತೊಳೆಯಲ್ಲ, ದೇವಸ್ಥಾನಗಳಲ್ಲಿ ತೀರ್ಥ ಕುಡಿಯಬಾರದು ; ‘ಮಾಜಿ ಸಚಿವೆ’ಯಿಂದ ವಿವಾದಾತ್ಮಕ ಹೇಳಿಕೆ
Good News ; ಉದ್ಯೋಗಿಗಳು ಈಗ 4 ತಿಂಗಳೊಳಗೆ ‘EPS ವರ್ಧಿತ ಪಿಂಚಣಿ ವ್ಯಾಪ್ತಿ’ ಆಯ್ಕೆ ಮಾಡ್ಬೋದು