ದಕ್ಷಿಣ ಕ್ನಡ : ದಕ್ಷಿಣ ಕನ್ನಡ ಜಿಲ್ಲೆಯ ನೀರುಮಾರ್ಗ ಗ್ರಾಮದ ಕೆಲರೈ ಪ್ರದೇಶದಲ್ಲಿರುವ ಹಂದಿ ಸಂವರ್ಧನಾ ಕೇಂದ್ರದ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂಆರ್ ತಿಳಿಸಿದ್ದಾರೆ.
BIGG BREAKING NEWS : ಮೈಸೂರಿನಲ್ಲಿ ಘೋರ ದುರಂತ : ವಿದ್ಯುತ್ ತಂತಿ ತುಳಿದು ಮೂವರು ಸಾವು
ಈ ರೋಗ ಹರಡುವುದನ್ನು ತಡೆಯಲು ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಜಿಲ್ಲಾ ಜಾನುವಾರು ರೋಗಗಳ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಾತನಾಡಿ, ಈ ಹಂದಿ ಸಾಕಾಣಿಕೆ ಕೇಂದ್ರದ 1 ಕಿ.ಮೀ ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10 ಕಿ.ಮೀ ವ್ಯಾಪ್ತಿಯನ್ನು ಎಚ್ಚರಿಕೆ ವಲಯ ಎಂದು ಘೋಷಿಸಲಾಗಿದೆ.
ರೋಗ ಪೀಡಿತ ಹಂದಿಗಳನ್ನು ಕೊಂದು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಬೇಕು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡದಂತೆ ನಾಮಫಲಕ ಅಳವಡಿಸಬೇಕು ಎಂದು ಸೂಚಿಸಲಾಗಿದೆ ಎನ್ನಲಾಗತ್ತಿದೆ.
ಆಫ್ರಿಕನ್ ಹಂದಿ ಜ್ವರವು ಮಾನವರಲ್ಲಿ ಯಾವುದೇ ರೋಗವನ್ನು ಉಂಟುಮಾಡುವುದಿಲ್ಲ ಎಂದು ಮಾಹಿತಿ ನೀಡಿದ ಅಧಿಕಾರಿ, ಹಂದಿಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಲು ಸಲಹೆ ನೀಡಲಾಗುತ್ತದೆ. ಹಂದಿ ಸಾಕಾಣಿಕೆದಾರರು ಮತ್ತು ಇತರರು ಪೀಡಿತ ಪ್ರದೇಶಕ್ಕೆ ಸದ್ಯಕ್ಕೆ ಭೇಟಿ ನೀಡಬಾರದು. ಅಪರಿಚಿತರಿಂದ ಹಂದಿಮರಿ ಮತ್ತು ಮಾಂಸವನ್ನು ಖರೀದಿಸಬಾರದು. ಅವರ ಹಂದಿಗಳನ್ನು ಬಿಸಿ ನೀರಿನಿಂದ ತೊಳೆದು ಸೋಂಕು ನಿವಾರಕಗಳಿಂದ ಸಿಂಪಡಿಸಬೇಕು. ಹೋಟೆಲ್ ತ್ಯಾಜ್ಯವನ್ನು ಹಂದಿಗಳಿಗೆ ನೀಡದಿರುವುದು ಉತ್ತಮ. ಅಗತ್ಯವಿದ್ದರೆ, ಅವುಗಳನ್ನು ಚೆನ್ನಾಗಿ ಬೇಯಿಸಿದ ಆಹಾರ ನೀಡಿ. ಆಫ್ರಿಕನ್ ಹಂದಿ ಜ್ವರವು ಹಂದಿಗಳಿಂದ ಅಥವಾ ಮಾಂಸವನ್ನು ತಿನ್ನುವುದರಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕರು ಮತ್ತು ಹಂದಿ ಸಾಕಾಣಿಕೆದಾರರು ಭಯಪಡುವ ಅಗತ್ಯವಿಲ್ಲ. ಹಂದಿ ಸಾಕಾಣಿಕೆದಾರರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಪ್ರದೇಶದ ಕಟ್ನಿಯಲ್ಲಿ ಐದು ಹಂದಿಗಳು ಆಫ್ರಿಕನ್ ಹಂದಿ ಜ್ವರದ ಕೇಸ್ ಗಳು ದೃಢಪಟ್ಟಿದ್ದು, ರೋಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ.
ಮಾಡಿದ್ದುಣ್ಣೋ ಮಾರಾಯ: ಯುವತಿ ಮೇಲೆ ಆ್ಯಸಿಡ್ ಎರಚಿ ಜೈಲುಪಾಲಾದ ʻನಾಗʼನಿಗೆ ʻಗ್ಯಾಂಗ್ರಿನ್ʼ