ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀಗಳ ಪುರುಷತ್ವ ಪರೀಕ್ಷೆ ನಿನ್ನೆ ನಡೆಸಲಾಗಿದೆ. ಇಂದು ಅದರ ವರದಿ ಬಂದಿದ್ದು, ಪುರುಷತ್ವಾ ಪರೀಕ್ಷೆಯಲ್ಲಿ ಮುರುಘಾ ಶ್ರೀಗಳು ಪಾಸ್ ಆಗಿದ್ದಾರೆ ಎನ್ನಲಾಗಿದೆ.
ಪುರುಷತ್ವ ಪರೀಕ್ಷೆಯಲ್ಲಿ ಮುರುಘಾ ಶ್ರೀಗಳು ಪಾಸ್ ಆಗಿದ್ದು, ಮುರುಘಾಶ್ರೀ ಲೈಂಗಿಕವಾಗಿ ಸಮರ್ಥರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಾಗಿದೆ.
ನಿನ್ನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮುರುಘಾ ಶ್ರೀಗಳ ಪುರುಷತ್ವ ಪರೀಕ್ಷೆ ನಡೆದಿದ್ದು, ಬಳಿಕ ಮುರುಘಾ ಶ್ರೀಗಳನ್ನು ಡಿವೈಎಸ್ಪಿ ಕಚೇರಿಗೆ ಹಾಜರುಪಡಿಸಲಾಗಿತ್ತು. ಇನ್ನೂ, ಮುರುಘಾ ಶ್ರೀ ವಿರುದ್ಧ 2 ನೇ ಪೋಕ್ಸೋ ಕೇಸ್ ಹಿನ್ನೆಲೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ನ. 8 ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ.
ನ. 3 ರಂದು ನೀಡಿದ ಆದೇಶದಂತೆ ಚಿತ್ರದುರ್ಗದ 2 ನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ನ. 8ರವರೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ಇಂದಿಗೆ ಮುರುಘಾ ಶ್ರೀ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಕೋರ್ಟ್ಗೆ ಮುರುಘಾಶ ಶ್ರೀಗಳನ್ನು ಹಾಜರುಪಡಿಸಲಾಗಿತ್ತು. ನಂತರ ವಿಚಾರಣೆ ನಡೆಸಿದ ಕೋರ್ಟ್ ನ. 8 ವರೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದೆ.
ಇನ್ನೂ, 2 ನೇ ಪೋಕ್ಸೋ ಕೇಸ್ ಹಿನ್ನೆಲೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಪೊಲೀಸರು ಮುರುಘಾ ಶ್ರೀ ಕರೆತಂದು ಮಠದಲ್ಲಿ ಸ್ಥಳ ಮಹಜರು ನಡೆಸಿದ್ದರು. ಮುರುಘಾಶ್ರೀಗಳ ವಿರುದ್ಧ 2 ನೇ ಪೋಕ್ಸೋ ಪ್ರಕರಣ ಹಿನ್ನೆಲೆಯಲ್ಲಿ ಇಂದು ಪೊಲೀಸರು ಶ್ರೀಗಳನ್ನು ಮಠಕ್ಕೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು. ಶ್ರೀ ಕಚೇರಿ, ಬೆಡ್ ರೂಮ್, ಬಾತ್ ರೂಮ್ನಲ್ಲಿ ಮಹಜರು ನಡೆಸಲಾಗಿತ್ತು, ತನಿಖಾಧಿಕಾರಿ CPI ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.
ಪ್ರಕರಣದ ಹಿನ್ನಲೆ
ಮಹಿಳೆಯೊಬ್ಬರ ತನ್ನಿಬ್ಬರು ಮಕ್ಕಳ ಜೊತೆ ಇನ್ನಿಬ್ಬರು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಅಂತ ಮೈಸೂರಿನಲ್ಲಿ (Mysuru) ಪ್ರಕರಣವನ್ನ ಮಹಿಳೆಯೊಬ್ಬರು ದಾಖಲಿಸಿದ್ದರು. ಆರೋಪ ಕೇಳಿ ಬರುತ್ತಿದ್ದ ಹಾಗೇ ಚಿತ್ರದುರ್ಗ ಪೋಲಿಸರು ಖುದ್ದು ಮೈಸೂರಿಗೆ ತೆರಳಿ ಚಿತ್ರದುರ್ಗದ ಪೊಲೀಸರು, ಮಕ್ಕಳ ರಕ್ಷಣಾ ಸಮಿತಿಯ ಸಮ್ಮುಖದಲ್ಲಿ CRPC 161 ಅಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅದರ ತನಿಖೆಯನ್ನು ಈಗ ನಡೆಸಲಾಗುತ್ತದೆ.
ಮೊಟ್ಟೆ ಭಾಗ್ಯದ ಮೂಲಕ ಮಕ್ಕಳಲ್ಲಿ ವಿಷ ಬೀಜ ಬಿತ್ತಿದ್ದು ಸಿದ್ದರಾಮಯ್ಯ : ಬಿಜೆಪಿ ವಾಗ್ಧಾಳಿ