ನವದೆಹಲಿ : ದೆಹಲಿ ಮೆಟ್ರೋ ನಿಲ್ದಾಣದ ಹಳಿಗಳ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರಿಗೆ ಅಸಹ್ಯ ಹುಟ್ಟಿಸಿದೆ.
WATCH VIDEO: ರೈಲಿನಲ್ಲಿ ಚಹಾ ಬಿಸಿ ಮಾಡಲು ಅಶುದ್ಧ ಕಬ್ಬಿಣದ ರಾಡ್ ಬಳಸಿ ಸಿಕ್ಕಿಬಿದ್ದ ಚಹಾ ವ್ಯಾಪಾರಿ
ಸಂಜೀವ್ ಬಬ್ಬರ್ ಎಂಬ ಬಳಕೆದಾರರು ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವ್ಯಕ್ತಿಯು ಮೆಟ್ರೋ ನಿಲ್ದಾಣದ ಹಳದಿ ರೇಖೆಯ ಆಚೆ ನಿಂತು ಮೂತ್ರ ವಿಸರ್ಜನೆ ಮಾಡುತ್ತರುವುದು ಕಂಡು ಬಂದಿದೆ.
ವಿಡಿಯೋದಲ್ಲಿ, ನೀವು ಏಕೆ ಇಲ್ಲಿ ಮೂತ್ರ ವಿಸರ್ಜಿಸುತ್ತಿದ್ದೀರಿ ಎಂದು ರೆಕಾರ್ಡಿಂಗ್ ಮಾಡಿದ ವ್ಯಕ್ತಿ ಕೇಳುತ್ತಿರುವುದು ಕೇಳಿಬಂದಿದೆ. ಇದಕ್ಕೆ, ನಶೆಯಲ್ಲಿ ಕಾಣಿಸಿಕೊಂಡ ವ್ಯಕ್ತಿ, ನಾನು ಕುಡಿದಿದ್ದೇನೆ ಎಂದು ಪ್ರತಿಕ್ರಿಯಿಸಿರುವುದ್ನು ನೋಡಬಹುದು.
Maybe this Happened first time in Delhi Metro.
Just received a video on wtsapp. Sharing with you pic.twitter.com/iJiWUnBpQy
— Sanjeev Babbar (@SanjeevBabbar) October 29, 2022
ಬಬ್ಬರ್ ಅವರು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಮತ್ತು ಮುಖ್ಯಮಂತ್ರಿ ಕಚೇರಿ (CMO) ದೆಹಲಿಯನ್ನು ಟ್ಯಾಗ್ ಮಾಡಿದಂತೆ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ನಿಲ್ದಾಣದ ಹೆಸರನ್ನು ಕೇಳುವ ಟ್ವೀಟ್ಗೆ ಉತ್ತರಿಸಿದರು. ಬಬ್ಬರ್ ಅವರು “ಮಾಳವೀಯ ನಗರ ಮೆಟ್ರೋ ನಿಲ್ದಾಣ” ಎಂದು ಸೂಚಿಸುವ ಮೂಲಕ ಪ್ರತಿಕ್ರಿಯಿಸಿದರು.
ವಿಡಿಯೋ ವೀಕ್ಷಿಸಿದ ಟ್ವಿಟರ್ ಬಳಕೆದಾರರು ವ್ಯಕ್ತಿಯ ಕೆಲಸಕ್ಕೆಆಕ್ರೋಶ ವ್ಯಕ್ತಪಡಿಸಿದ್ದಾರೆ.
BIGG NEWS : ನಿವೃತ್ತ ಪ್ರಾಮಾಣಿಕ ಯೋಧರನ್ನು ಲೋಕಾಯುಕ್ತಕ್ಕೆ ನೇಮಿಸಿಕೊಳ್ಳಲು ಚಿಂತನೆ |Lokayuktha